ಸಂಸ್ಕಾರದ ಬೀಜ ಬಿತ್ತಿ ಆದರ್ಶವಂತರನ್ನು ಬೆಳೆಸೋಣ : ಡಾ. ಸುಜಾತಾ ಜಂಗಮಶೆಟ್ಟಿ

ಶಂಕರ್ ಪ್ರತಿಷ್ಠಾನದ ಚಿಗುರು ಚಿನ್ಮಯ ಪ್ರಶಸ್ತಿ ಪ್ರದಾನ
ಸಂಸ್ಕಾರದ ಬೀಜ ಬಿತ್ತಿ ಆದರ್ಶವಂತರನ್ನು ಬೆಳೆಸೋಣ : ಡಾ. ಸುಜಾತಾ ಜಂಗಮಶೆಟ್ಟಿ
ಕಲಬುರಗಿ : ಮಕ್ಕಳಿಗೆ ಸಂಸ್ಕಾರದ ಬೀಜ ಬಿತ್ತಿ ಪ್ರತಿಭಾವಂತರನ್ನು ಬೆಳೆಸಿ ಆದರ್ಶ ಸಮಾಜ ಕಟ್ಟೋಣ ಎಂದು ರಂಗಾಯಣದ ನಿರ್ದೇಶಕಿ, ಡಾ. ಸುಜಾತಾ ಜಂಗಮಶೆಟ್ಟಿ ಹೇಳಿದರು.
ಕಲಬುರಗಿಯ ಡಾ. ಪಿ. ಎಸ್ ಶಂಕರ್ ಪ್ರತಿಷ್ಠಾನ, ದಕ್ಷಿಣ ಕನ್ನಡ ಸಂಘ ಮತ್ತು ರೋಟರಿ ಕ್ಲಬ್ ನ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 30ರಂದು ರೋಟರಿ ಸಭಾಂಗಣದಲ್ಲಿ ನಡೆದ ಚೈತ್ರೋತ್ಸವ - 2025 ರ ಅಂಗವಾಗಿ ವಿಶೇಷ ಸಾಧಕ ಮಕ್ಕಳಿಗೆ "ಚಿಗುರು ಚಿನ್ಮಯ" ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಪೋಷಕರು ತಮ್ಮ ಮಕ್ಕಳನ್ನು ಅವರ ಕನಸಿನಂತೆ ಬೆಳೆಸಲು ಬಿಡಬೇಕಾಗಿದೆ. ಅಂಕದ ಬೆನ್ನು ಹತ್ತಿ ವೈದ್ಯರು ಇಂಜಿನಿಯರ್ ಗಳನ್ನು ಮಾತ್ರ ಸೃಷ್ಟಿ ಮಾಡಲು ಹೊರಟರೆ ಸಾಹಿತ್ಯ, ಸಂಗೀತ, ನಾಟಕ ,ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭಾವಂತರನ್ನು ಕಾಣುವುದು ಕಷ್ಟ ಸಾಧ್ಯ. ಎಳವೆಯಲ್ಲಿ ಪ್ರತಿಭೆಯನ್ನು ಗುರುತಿಸಿದರೆ ಅವರು ಭವಿಷ್ಯದಲ್ಲಿ ಶ್ರೇಷ್ಠ ಸಾಧಕರಾಗಿ ದೇಶಕ್ಕೆ ದೊಡ್ಡ ಕೊಡುಗೆ ನೀಡುತ್ತಾರೆ. ಅದಕ್ಕಾಗಿ ಶಿಬಿರ, ತರಬೇತಿಗಳಿಗೆ ಮಕ್ಕಳನ್ನು ಕಳುಹಿಸಿ ಬಹುಮುಖ ವ್ಯಕ್ತಿತ್ವ ಅರಳುವಂತೆ ಮಾಡಬೇಕು ಎಂದು ಹೇಳಿದರು.
ಡಾ. ಪಿ ಎಸ್ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 25 ವರ್ಷಗಳಿಂದ ಪ್ರತಿಷ್ಠಾನವು ಶಿಕ್ಷಣ, ಆರೋಗ್ಯ,ಸಾಂಸ್ಕೃತಿಕ ಕ್ರೀಡೆ ಸಾಹಿತ್ಯ, ಪ್ರಕಟಣೆ ಕ್ಷೇತ್ರಗಳಲ್ಲಿ ಅಪಾರವಾದ ಕೊಡುಗೆ ನೀಡಿ ಈ ಭಾಗದಲ್ಲಿ ಪ್ರಗತಿಗೆ ಕೈಜೋಡಿಸಿದೆ. ಚಿಗುರು ಚಿನ್ಮಯ ಪ್ರಶಸ್ತಿ ಪುರಸ್ಕೃತರು ಇಂದು ಶ್ರೇಷ್ಠ ಸಾಧಕರಾಗಿ ಹಲವು ರಂಗಗಳಲ್ಲಿ ಮಿಂಚುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಭರತನಾಟ್ಯದಲ್ಲಿ ಸುಪ್ರಿಯಾ ಸುತಾರ, ವಚನ ಗಾಯನದಲ್ಲಿ ಸೌಮ್ಯ ರಾಯ ರಾಮ, ಕ್ರಿಕೆಟ್ ನಲ್ಲಿ ಸನ್ಮಯ ರುದ್ರವಾಡಿ, ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಹರ್ಷಾ ಸಿದ್ದಾರೆಡ್ಡಿ, ಅಂಚೆ ಚೀಟಿ ಸಂಗ್ರಹಕಾರ ಸುಶಾಂತ ಪಿ ಭಟ್, ಹಾರ್ವರ್ಡ್ ವಿಶ್ವವಿದ್ಯಾಲಯದ ಬೇಸಿಗೆ ಶಿಬಿರಕ್ಕೆ ಆಯ್ಕೆಯಾದ ಅದ್ವೈತ ಜಾಜಿ ಅವರಿಗೆ ನಗದು ಹಾಗು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಡಾ. ಎಚ್ ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ ಸದಾನಂದ ಪೆರ್ಲ, ಡಾ ವಿಕ್ರಂ ಸಿದ್ದಾರೆಡ್ಡಿ ಬೆಳಗಾವಿ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಸಕ್ರೆಪ್ಪ ಗೌಡ, ಸದಾನಂದ ಪಾಟೀಲ, ಪುರಂದರ ಭಟ್ ಲತಾ ಶ್ರೀನಿವಾಸ್ ಆಚಾರ್ಯ ಡಾ.ಇಂದಿರಾ ವೀರಭದ್ರಪ್ಪ, ಡಾ. ರಾಜಶ್ರೀ ರೆಡ್ಡಿ, ಡಾಕ್ಟರ್ ವೀಣಾ ಸಿದ್ದಾರೆಡ್ಡಿ, ಉದ್ಯಮಿ ರವಿ ಮುಕ್ಕಾ, ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್, ರಾಮಕೃಷ್ಣ ರೆಡ್ಡಿ, ಸಿಎ ಮಣಿಲಾಲ್ ಶಹಾ, ಡಾ. ದಡೆದ್ ಡಾ.ಸಂಗ್ರಾಮ್ ಬಿರಾದಾರ್, ರೋಟರಿ ಕ್ಲಬ್ ಅಧ್ಯಕ್ಷರಾದ ಚನ್ನಬಸಪ್ಪ ಸಮಾನಿ ಸ್ವಾಗತಿಸಿದರು. ಡಾ. ರಾಜೇಂದ್ರ ಕೊಂಡ ಧನ್ಯವಾದವಿತ್ತರು. ಪ್ರೊಫೆಸರ್ ನರೇಂದ್ರ ಬಡಶೇಷಿ ನಿರೂಪಣೆ ಮಾಡಿದರು. ಪ್ರಶಸ್ತಿ ಪಡೆದ ಸುಪ್ರಿಯಾ ಸುತಾರ ನೃತ್ಯ ಪ್ರದರ್ಶನ ನೀಡಿದರು ಹಾಗೂ ಪ್ರಶಸ್ತಿ ಪುರಸ್ಕೃತರು ಅಭಿಪ್ರಾಯಗಳನ್ನು ಹಂಚಿಕೊಂಡರು.