ಸದಬ ಇದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಸೌಹಾರ್ದ ಪೂರ್ಣ ಆಚರಣೆ

ಸದಬ ಇದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಸೌಹಾರ್ದ ಪೂರ್ಣ ಆಚರಣೆ
ಸುರಪುರ: ಸುರಪುರ ತಾಲೂಕಿನ ಸದಬ ಇದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ, ಹಿಂದೂ ಬಾಂಧವರಿಗೆ ಸಿಹಿ ಪಾಯಸ ಮತ್ತು ಹಣ್ಣುಗಳನ್ನು ಹಂಚಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಬ ಗ್ರಾಮದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ನಬಿ ಪಟೇಲ್, "ಭಾರತ ದೇಶವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ವಿಭಿನ್ನ ಭಾಷೆ, ಸಂಸ್ಕೃತಿ ಇದ್ದರೂ ನಾವೆಲ್ಲರೂ ಭಾರತೀಯರೆಂಬ ಅರಿವು ಪ್ರತಿಯೊಬ್ಬರಲ್ಲಿ ಮೂಡಬೇಕು. ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಹಬ್ಬವೇ ರಂಜಾನ್. ಹಬ್ಬಗಳು ಮಾನವೀಯತೆ ಮತ್ತು ಸೌಹಾರ್ದತೆಯ ಸಂಕೇತವಾಗಿವೆ," ಎಂದು ಹೇಳಿದರು.
ಹಬ್ಬದ ಉತ್ಸವವು ಸೌಹಾರ್ದ ಮತ್ತು ಸ್ನೇಹಭಾವದ ವಾತಾವರಣದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿತು.
-ವರದಿ: ಜೆಟ್ಟಪ್ಪ ಎಸ್. ಪೂಜಾರಿ