"ರಂಗಭೂಮಿಯ ಸಂರಕ್ಷಣೆಗೆ ಒಗ್ಗಟ್ಟಿನ ಅಗತ್ಯ" ಕುಲಸಚಿವ ಡಾ. ರಮೇಶ್ ಲಂಡನ್ಕರ್ ಅಭಿಪ್ರಾಯ

"ರಂಗಭೂಮಿಯ ಸಂರಕ್ಷಣೆಗೆ ಒಗ್ಗಟ್ಟಿನ ಅಗತ್ಯ" ಕುಲಸಚಿವ ಡಾ. ರಮೇಶ್ ಲಂಡನ್ಕರ್ ಅಭಿಪ್ರಾಯ

"ರಂಗಭೂಮಿಯ ಸಂರಕ್ಷಣೆಗೆ ಒಗ್ಗಟ್ಟಿನ ಅಗತ್ಯ" ಕುಲಸಚಿವ ಡಾ. ರಮೇಶ್ ಲಂಡನ್ಕರ್ ಅಭಿಪ್ರಾಯ

ಕಲಬುರಗಿ: ರಂಗಭೂಮಿಯು ಸಮಾಜದಲ್ಲಿ ಓರೇ ಕೋರೆಗಳನ್ನು ತಿದ್ದುವ ಮಹತ್ವದ ಪಾತ್ರವನ್ನು ವಹಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಂಗಭೂಮಿಯತ ಕಲಾವಿದರು ಬರೋದು ಕಮ್ಮಿ ಆಗಿದ್ದು ಕಳವಳದ ವಿಷಯವಾಗಿದೆ ಎಂದು ಕುಲಸಚಿವ ಡಾ. ರಮೇಶ್ ಲಂಡನ್ಕರ್ ಅವರು ಅಭಿಪ್ರಾಯಪಟ್ಟರು.

ಕಲಬುರಗಿ ನಗರದ ಕಲಾಮಂಡಳದ ಅನ್ನಪೂರ್ಣ ಕ್ರಾಸ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗ ಸಂಗಮ ಕಲಾ ವೇದಿಕೆ ಸಹಯೋಗದಲ್ಲಿ "ರಂಗ ಯುಗಾದಿ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು

 ಮೊಬೈಲನಿಂದ ತಮ್ಮ ಜೀವನವನ್ನು ಹಾಳು ಮಾಡುಕೊಳ್ಳುತ್ತಿರುವ  ಯುವಪೀಳಿಗೆಗೆ ರಂಗಭೂಮಿ ಸುಸಂಸ್ಕೃತರನ್ನಾಗಿ ಮಾಡುತ್ತದೆ 

"ರಂಗಭೂಮಿಯ ಕಲಾವಿದರನ್ನು ಪೋಷಿಸುವುದು ಮತ್ತು ಈ ಕಲೆಯನ್ನು ಉಳಿಸಿಕೊಳ್ಳುವುದು ಇಂದಿನ ಕಾಲದಲ್ಲಿ ಬಹುದೊಡ್ಡ ಜವಾಬ್ದಾರಿಯಾಗಿದೆ. ಕೆಲವು ಭಾಗದಲ್ಲಿ ಮಾತ್ರ ರಂಗಭೂಮಿ ಉಳಿದಿದೆ" ಎಂದು ಅವರು ತಿಳಿಸಿದರು.

ಸಮಾಜದ ಪ್ರಗತಿಗೆ ರಂಗಭೂಮಿಯು ಮಹತ್ವದ ಕೊಡುಗೆ ನೀಡಿದರೂ, ಸರಿಯಾದ ಪ್ರೋತ್ಸಾಹದ ಕೊರತೆಯಿಂದ ಈ ಕ್ಷೇತ್ರವು ನಶಿಸಿ ಹೋಗುವ ಭೀತಿಯಿದೆ. ಆದುದರಿಂದ ಸರ್ಕಾರ ಮತ್ತು ಕಲಾಸಕ್ತರು ರಂಗಭೂಮಿಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಶ್ರಮವಹಿಸಬೇಕೆಂದು ಅವರು ಕರೆ ನೀಡಿದರು.

ರಂಗಭೂಮಿಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ನಿ ವಾರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಕಲಾವಿದರು ಮತ್ತು ರಂಗಭೂಮಿ ಸಂಘಟನೆಗಳಿಗೆ ಸರಕಾರದ ಆರ್ಥಿಕ ನೆರವು ಭಹಳ ಮುಖ್ಯವಾಗಿದೆ. ಎಂದು ಅವರು ಅಭಿಪ್ರಾಯಪಟ್ಟರು.

  ಹಿರಿಯ ರಂಗಕರ್ಮಿ ಎಚ್.ಎಸ್. ಬಸವಪ್ರಭು ಅಧ್ಯಕ್ಷತೆ ವಹಿಸಿ ರಂಗಭೂಮಿಯ ಪ್ರೇಕ್ಷಕರ ಕೊರತೆಗೆ ಯಾರು ಕಾರಣ. ಎಂಬುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು.. ಒಳ್ಳೊಳ್ಳೆ ನಾಟಕಗಳು ರಚನೆ ಆಗಬೇಕು.. ಎಂದು ಹೇಳಿದರು

 ಕಲ್ಯಾಣ ಕಹಳೆ ಪತ್ರಿಕೆಯ ಸಂಪಾದಕ ಶರಣಗೌಡ ಪಾಟೀಲ ಪಾಳಾ, ಗುರುಪದೇಶ ಪತ್ರಿಕೆಯ ಸಂಪಾದಕ ಸಿದ್ದಣಗೌಡ ಪಾಟೀಲ ಕಡಣಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕರ್ನಾಟಕ ರಂಗಾಯಣ , ನಿರ್ದೇಶಕರಾದ ,ಡಾ ಸುಜಾತಾ ಜಂಗಮಶೆಟ್ಟಿ, ರಂಗ ಸಂಗಮ ಕಲಾ ವೇದಿಕೆಯ ಕಾರ್ಯದರ್ಶಿ ಅನಿಕೇತ ಎಮ್.ಮಡಕಿ ಉಪಸ್ಥಿತರಿದ್ದರು.

ಶಾಂತಾ ಕುಲಕರ್ಣಿ ರಾಯಚೂರ ಅವರಿಂದ, ರಂಗಗೀತೆ ಹಾಗೂ  ಅಣ್ಣಾರಾಯ ಮತ್ತಿಮೂಡ , ತಂಡದಿಂದ ಸಂಗೀತ ಕಾರ್ಯಕ್ರಮ ಜರಗಿತು 

ನಾಟಕ "ಕೊನೆ ಅಂಕ" ಅಭೀಷೇಕ ಎಸ್.ಕೆ. ಅವರಿಂದ ಏಕ ವ್ಯಕ್ತಿ ಪ್ರದರ್ಶನ ಜನ ಮನ ಸೂರೆಗೊಂಡಿತು. ಸಂಸ್ಥೆಯಅಧ್ಯಕ್ಷೆ ಶಿವಗೀತಾ ಬಸವಪ್ರಭು, ಉಪಸ್ಥಿತರಿದ್ದರು,

ರಂಗ ನಿರ್ದೇಶಕ ಡಾ. ಶಿಶ್ವರಾಜ ಪಾಟೀಲ . ಪ್ರಾಸ್ತಾವಿಕ ಮಾತನಾಡಿದರು,ವಿಶ್ವನಾಥ್ ಪಾಟೀಲ ಗೌವನಳ್ಳಿ, ಅಣಿವೀರ ಪಾಟೀಲ ನಾಗನಳ್ಳಿ, ರಾಜು ಹೆಬ್ಬಾಳ, ನಾಗರಾಜ ಗಂದಿಗುಡಿ, ಬಸವರಾಜ ಟೆಂಗಳಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,

   ಜಲೀಲ ಪಟೇಲ ಕಾರ್ಯಕ್ರಮ ನಿರೂಪಿಸಿದರು. ಅಂಬಾರಾಯ ಕೋಣೆ ವಂದಿಸಿದರು.