ಸರಳತೆಗೆ, ಮುಗ್ದತೆಗೆ, ತಾಳ್ಮೆ ಮತ್ತು ಕರ್ತವ್ಯ ನಿಷ್ಠೆಗೆ ಹೆಸರಾಗಿರುವ ಅನೀಲ ಜಮಾದಾರ : ಸುಭಾಷ ರಾಠೋಡ

ಸರಳತೆಗೆ, ಮುಗ್ದತೆಗೆ, ತಾಳ್ಮೆ ಮತ್ತು ಕರ್ತವ್ಯ ನಿಷ್ಠೆಗೆ ಹೆಸರಾಗಿರುವ ಅನೀಲ ಜಮಾದಾರ : ಸುಭಾಷ ರಾಠೋಡ

ಬಾಲಭವನ ಸೊಸೈಟಿಯ ಉಪಾಧ್ಯಕ್ಷ ಅನೀಲಕುಮಾರ ದೇವೀಂದ್ರ ಜಮಾದಾರ ಅವರಿಗೆ ಕಾಂಗ್ರೇಸ್ ಸನ್ಮಾನ

ಸರಳತೆಗೆ, ಮುಗ್ದತೆಗೆ, ತಾಳ್ಮೆ ಮತ್ತು ಕರ್ತವ್ಯ ನಿಷ್ಠೆಗೆ ಹೆಸರಾಗಿರುವ ಅನೀಲ ಜಮಾದಾರ : ಸುಭಾಷ ರಾಠೋಡ  

ಚಿಂಚೋಳಿ : ಮುಗ್ದತೆ, ತಾಳ್ಮೆ, ಕರ್ತವ್ಯ ನಿಷ್ಠೆ, ಸಹಿಷ್ಣತೆಗೆ ಮತ್ತು ಶಿಸ್ತಿಗೆ ಹೆಸರಾಗಿರುವ ವ್ಯಕ್ತಿಯಾಗಿ 20 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಅನೀಲ ಜಮಾದಾರ ಅವರ ಸೇವೆ ಮತ್ತು ತಾಳ್ಮೆಗೆ ರಾಜ್ಯದ ಬಾಲಭವನದ ಉಪಾಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷ ಆಯ್ಕೆ ಮಾಡಿರುವುದು ಕಲಬುರಗಿ ಜಿಲ್ಲೆಯ ಮುಖಂಡರಿಗೆ ಸಂತೋಷ ತಂದಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ ಹೇಳಿದರು.

ಅವರು ಪಟ್ಟಣದ ವೀರೇಂದ್ರ ಪಾಟೀಲ್ ಪಬ್ಲಿಕ್ ಶಾಲೆಯ ಜಾಗೀರದಾರ ಸಭಾಂಗಣದಲ್ಲಿ ಚಿಂಚೋಳಿ ಬ್ಲಾಕ್ ಕಾಂಗ್ರೇಸ್ ಪಕ್ಷದ ವತಿಯಿಂದ ಬಾಲಭವನ ಸೊಸೈಟಿಯ ಉಪಾಧ್ಯಕ್ಷ ಅನೀಲಕುಮಾರ ದೇವೀಂದ್ರ ಜಮಾದಾರ ಅವರಿಗೆ ಅದ್ಧೂರಿಯಾಗಿ ಅಭಿನಂದನಾ ಸಮಾರಂಭ ನಡೆಸಿ ಮಾತನಾಡಿದರು.

ಅನೀಲ ಅವರು ಉಪಾಧ್ಯಕ್ಷ ಸ್ಥಾನದ ಅಧಿಕಾರ ವಹಿಸಿಕೊಂಡ ತಕ್ಷಣವೇ ಕಲಬುರಗಿಯಲ್ಲಿ ಬಾಲಭವನ ನಿರ್ಮಾಣಕ್ಕೆ 5 ಕೋಟಿ ಮತ್ತು ಚಿಂಚೋಳಿಯಲ್ಲಿ 2.5 ಎಕರೆ ಜಮೀನು ಮಂಜೂರಿ ಮಾಡಿಸಲಾಗಿದ್ದು, ಅಡಿಗಲ್ಲು ಸಮಾರಂಭ ಶೀಘ್ರದಲ್ಲಿ ನಡೆಸಲಿದ್ದಾರೆ ಎಂದರು.

ಅಭನಂದನೆ ಸ್ವೀಕರಿಸಿ ಬಾಲಭವನ ಉಪಾಧ್ಯಕ್ಷ ಅನೀಲ ಜಮಾದಾರ ಮಾತನಾಡಿ, ತಡವಾದರೂ ಒಳ್ಳೆಯ ಜವಬ್ದಾರಿಯುತ ಹುದ್ದೆಯನ್ನು ನೀಡಿ ಕಾಂಗ್ರೆಸ್ ಪಕ್ಷ ಗುರುತಿಸಿದೆ. ತೊಗರಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ ಆದೇಶಿಸಿ ಮತ್ತೇ ಅದನ್ನು ಹಿಂದಕ್ಕೆ ಪಡೆದಿದ್ದ ಸಂದರ್ಭದಲ್ಲಿ ಮನಸ್ಸಿಗೆ ಬೇಜಾರವಾಗಿತ್ತು. ಪಕ್ಷಕ್ಕಾಗಿ ದುಡಿದಿರುವ ಕಾರಣಕ್ಕೆ ಈಗ ರಾಜ್ಯ ಬಾಲಭವನ ಸೊಸೈಟಿಯ ಉಪಾಧ್ಯಕ್ಷರನ್ನಾಗಿ ಮಾಡಿದ್ದು ಖುಷಿತಂದಿದೆ. ಕಾಂಗ್ರೇಸ ಪಕ್ಷ ಸಮುದ್ರ ಇದ್ದಂತೆ. ತಾಳ್ಮೆಯಿಂದ ವರ್ತಿಸಿದರೆ ಎಲ್ಲವೂ ಪಡೆದುಕೊಳ್ಳಬಹುದು ಎಂದರು. ನಾನೇ ಉದಾಹರಣೆ. ಬಾಲಭವನ ನಿರ್ಮಾಣಕ್ಕಾಗಿ ಚಿಂಚೋಳಿಗೆ 2.5 ಎಕರೆ ಭೂಮಿ ಮಂಜೂರಿಸಲಾಗಿದ್ದು, ಶೀಘ್ರದಲ್ಲಿಯೆ ಅನುದಾನ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಕಲಬುರಗಿ ಜಿಲ್ಲಾ ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿ ಭೀಮರಾವ ಟಿ.ಟಿ, ಮುಖಂಡ ಬಸಯ್ಯ ಗುತ್ತೇದಾರ, ಬ್ಲಾಕ್ ಅಧ್ಯಕ್ಷ ಬಸವರಾಜ ಮಲಿ, ಮಹೆಮೂದ್ ಪಟೆಲ್ ಸಾಸರಗಾಂವ್, ಪುರಸಭೆ ಮಾಜಿ ಅಧ್ಕ್ಷ ಆನಂದಕುಮಾರ ಟೈಗರ್, ಅಬ್ದುಲ್ ಬಾಷಿದ್ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಧೂಳಪ್ಪ ಹೋಡೆಬೀರನಳ್ಳಿ, ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ, ನಾಗೇಶ ಗುಣಾಜಿ, ಲಕ್ಷ್ಮಣ ಆವಂಟಿ, ನರಸಿಂಹಲು ಕುಂಬಾರ, ಸೈಯದ್ ಹಾದಿ ಸಾಬ್, ಶಬ್ಬೀರ್, ಜಗನ್ನಾಥ ಕಟ್ಟಿ, ವಿಶ್ವನಾಥ ಹೋಡೆಬೀರನಳ್ಳಿ, ಸಂತೋಷ ಗುತ್ತೇದಾರ , ಗೋಪಾಲ ಗಾರಂಪಳ್ಳಿ ಅವರು ಉಪಸ್ಥಿತರಿದರು.