ನ.15 ರಂದು ಬೆಳೆ ಪರಿಹಾರಕ್ಕಾಗಿ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ :ಚಂದು ಜಾದವ
ನ.15 ರಂದು ಬೆಳೆ ಪರಿಹಾರಕ್ಕಾಗಿ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ :ಚಂದು ಜಾದವ
ವರದಿ: ನಾಗರಾಜ್ ದಂಡಾವತಿ
ಶಹಾಬಾದ : - ತಾಲೂಕಿನಲ್ಲಿ ಸುರಿದ ಭಾರೀ ಮಳೆ ಹಾಗೂ ನೆರೆ ಹಾವಳಿಯಿಂದ ಹಾನಿಗೊಳಗಾದ ರೈತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನ.15ರಂದು ಭಂಕೂರ ಕ್ರಾಸ್ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದೆಂದು ಕರ್ನಾಟಕ ರಾಜ್ಯ ರೈತ, ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಾದ ಚಂದು ಜಾದವ ಹೇಳಿದರು.
ಅವರು ರೈತ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಶಹಾಬಾದ ವತಿಯಿಂದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಶನಿವಾರ ದಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಹೆದ್ದಾರಿ ತಡೆದು ರೈತರು ಪ್ರತಿಭಟಿಸಲಿದ್ದಾರೆ ಎಂದು ಹೇಳಿದರು.
ಶಹಾಬಾದ ತಾಲೂಕಿನಲ್ಲಿ ಸುಮಾರು 7 ಸಾವಿರ ಹೆಕ್ಟರ್ ಕ್ಕಿಂತ ಮೇಲ್ಪಟ್ಟು ತೊಗರಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ, ರಾಜ್ಯ ಮತ್ತು ಎನ್ ಡಿ ಆರ್ ಎಫ್ ವತಿಯಿಂದ 17,000 ರೂಪಾಯಿಗಳು ಕೊಡುವ ಆಶ್ವಾಸನೆ ಕೊಟ್ಟಿದ್ದಾರೆ ಆದರೆ ಇವತ್ತಿನವರೆಗೂ ರೈತರಿಗೆ ಬರ ಪರಿಹಾರ ಕನಸಾಗಿ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಜಾಬ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ನೀಡಿರುವ ಪರಿಹಾರ ದ ಮೊತ್ತದಂತೆ ಕರ್ನಾಟಕ ರಾಜ್ಯಕ್ಕೂ ನೀಡಬೇಕೆಂದು ಒತ್ತಾಯಿಸಿದರು, ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ರೈತರಿಗೆ ವಿರೋಧಿ ನೀತಿ ಹಾಗೂ ಮಲತಾಯಿ ಧೋರಣೆಯನ್ನು ತೋರಿಸುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯದ ಕೇಂದ್ರದ ಮಂತ್ರಿಗಳು ಹಾಗೂ ಸಂಸದರು ಸೇರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕರ್ನಾಟಕ ರಾಜ್ಯದ ರೈತರಿಗೆ ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದ ಪೀಡಿತರಾದ ರೈತರಿಗೆ ಪರಿಹಾರ ಕೊಡಲಿಕ್ಕೆ ಪ್ರಯತ್ನಿಸಬೇಕೆಂದು ಮನವಿ ಮಾಡಿದರು
ಪತ್ರಿಕಾಗೋಷ್ಠಿಯಲ್ಲಿ ನಾಗನಗೌಡ ಕಂಠಿ ಮಲ್ಕಣ್ಣ ಮುದ್ದ ವೀರಯ್ಯಸ್ವಾಮಿ ದೇವರಾಜ್ ರಾಥೋಡ್ ರಾಘವೇಂದ್ರ ಗುಡೂರ್ ಉಪಸ್ಥಿತರಿದ್ದರು
