ಹಳ್ಳಿಗಳಲ್ಲಿ ಬಯಲು ಮಲವಿಸರ್ಜನೆಯು ಮಾಡುವುದನ್ನು ನಿಲ್ಲಿಸಬೇಕು:ದೀಪಿಕಾ ಬಿ ನಾಯ್ಕರ

ಹಳ್ಳಿಗಳಲ್ಲಿ ಬಯಲು ಮಲವಿಸರ್ಜನೆಯು ಮಾಡುವುದನ್ನು ನಿಲ್ಲಿಸಬೇಕು:ದೀಪಿಕಾ ಬಿ ನಾಯ್ಕರ

ಹಳ್ಳಿಗಳಲ್ಲಿ ಬಯಲು ಮಲವಿಸರ್ಜನೆಯು ಮಾಡುವುದನ್ನು ನಿಲ್ಲಿಸಬೇಕು:ದೀಪಿಕಾ ಬಿ ನಾಯ್ಕರ 

ಹುಮನಾಬಾದ : ಗ್ರಾಮೀಣ ಕುಟುಂಬಗಳು ಶೌಚಾಲಯಗಳನ್ನು ಹೊಂದಿದ್ದರೂ ಸಹ ಬಯಲು ಮಲವಿಸರ್ಜನೆಯು ಮಾಡುವುದನ್ನು ನಿಲ್ಲಿಸಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ಬಿ ನಾಯ್ಕರ ತಿಳಿಸಿದರು.

ಗುರುವಾರ ತಾಲ್ಲೂಕಿನ ಕಲ್ಲೂರು ಗ್ರಾಮದ ತಾಂಡದಲ್ಲಿ ಗ್ರಾಮ ಸಭೆ ಮತ್ತು ಜನ ವಸತಿ ಸಭೆ ಹಾಗೂ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಸಲುವಾಗಿ ಅರ್ಜಿ ವಿತರಣೆ ಮಾಡಿ ಅವರು ಮಾತನಾಡಿದರ,

ಗ್ರಾಮ ಪಂಚಾಯತ ಮಟ್ಟದಲ್ಲಿ ಜನರಿಗೆ ಶೌಚಾಲಯ ಕುರಿತು ಜಾಗೃತಿ ಮೂಡಿಸಬೇಕು ಮತ್ತು ಗ್ರಾಮ ಪಂಚಾಯಿತಿಯಿಂದ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಆರ್ಥಿಕ ನೆರವು ಅವಕಾಶವಿದ್ದು ಇದರ ಉಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು. 

ನರೇಗಾ ಯೋಜನೆಯ 2025-2026ನೇ ಸಾಲ್ಲಿನ ಆಯಾವ್ಯಯ ತಯಾರಿಸಲಾಗುತ್ತಿದ್ದು ಗ್ರಾಮಸ್ಥರು ನರೇಗಾ ಯೋಜನೆಯಡಿ ತಮ್ಮಗೆ ಬೇಕಾಗಿರುವ ಕಾಮಗಾರಿಗಳು ಮಾಡಿಕೊಳ್ಳಲು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಿ ಎಂದು ಸೂಚಿಸಿದ್ದರು.

ಎಲ್ಲರಿಗೂ ಸಮರ್ಪಕವಾಗಿ ಯೋಜನೆ ತಲುಪಬೇಕು ಎಂಬ ಉದ್ದೇಶದಿಂದ ತಾಲೂಕಿನ 19 ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಬೇಡಿಕೆ ಪೆಟ್ಟಿಗೆ ಸ್ಥಾನಪನೆ ಮಾಡಲಾಗಿದೆ. ಅದೇ ರೀತಿ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬೇಡಿಕೆ ಸ್ವೀಕರಿಸಲಾಗುತ್ತೆದೆ ಎಂದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಧು ದೇಶ್ಪಾಂಡೆ, ರಾಜೀವ್ ಗಾಂಧಿ ಪಂಚಾಯತ ರಾಜ್ ಫೆಲೋ ದರ್ಶನ್, ನೀತಿ ಆಯೋಗದ ಸಂಯೋಜಕ ನಾಗೇಂದ್ರ ಮಡ್ರೆ,

 ಗ್ರಾಮ ಪಂಚಾಯತ ಅಧ್ಯಕ್ಷ ಶಂಕರ್ ಪವರ್, ಗ್ರಾಮ ಪಂಚಾಯತ ಸದಸ್ಯರುಗಳಾದ ವೀರಭದ್ರ ಪಾಟೀಲ್, ಅಮೃತ್ ಮರಕುಂದ, ಸಂಜುಕುಮಾರ ಕಟ್ಟಿಮನಿ, ರೇವಣಸಿದ್ದ ಮರಕುಂದ, ಅನಿಲ್, ಗ್ರಾ.ಪಂ ಕಂಪ್ಯೂಟರ್ ಆಪರೇಟರ್ ಪ್ರಭು ಮತ್ತು ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.