ಗಂವ್ಹಾರ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ : ಡಾ.ಮಲ್ಲಿಕಾರ್ಜುನ ಎಸ್.ಗಂವ್ಹಾರ
ಗಂವ್ಹಾರ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ಡಾ.ಮಲ್ಲಿಕಾರ್ಜುನ ಎಸ್.ಗಂವ್ಹಾರ
ಗಂವ್ಹಾರ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರದ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕರಿಗೆ ಮನವಿ
ಕಲಬುರಗಿ: ಉದ್ಯೋಗ ಖಾತ್ರಿ ಯೋಜನೆಯಡಿ ಗಂವ್ಹಾರ ಗ್ರಾಮ ಪಂಚಾಯತಿಯಲ್ಲಿ ಆದ ಅವ್ಯವಹಾರದ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಡಾ.ಮಲ್ಲಿಕಾರ್ಜುನ ಎಸ್.ಗಂವ್ಹಾರ ಅವರು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಗಂವ್ಹಾರ ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಸೇರಿ ಸುಳ್ಳು ದಾಖಲೆ ಸೃಷ್ಟಿಮಾಡಿ ಮುಂಬೈ, ಪುಣೆಯಲ್ಲಿ, ಬೆಂಗಳೂರಿನಲ್ಲಿ ಇರುವವರ ಖಾತೆಗೆ ಹಣ ಜಮೆ ಮಾಡಿಸಿ ಮತ್ತು ಗ್ರಾಮದಲ್ಲಿರುವವರಿಂದ ಯವುದೇ ಕೆಲಸ ಮಾಡಿಸದೇ ಜಾಬ ಕಾರ್ಡ ಹೂಂದಿರುವವರ ಖಾತೆಗೆ ಹಣ ಜಮೆ ಮಾಡಿ ಅವರಿಂದ ಅರ್ಧ ಭಾಗ ಪಾಲು ಪಡೆಯುತ್ತಿದ್ದಾರೆ. ಈ ರೀತಿಯಾಗಿ ಲೂಟಿ ಮಾಡುವಲ್ಲಿ ನಿರತರಾಗಿದ್ದಾರೆ ಆದ ಕಾರಣ ಈ ಲೂಟಿಕೂರರ ವಿರುದ್ದ ಸೂಕ್ತ ಕ್ರಮ ಮತ್ತು ತನಿಖೆಗೆ ಆದೇಶ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.