ತಾಯಿ-ಮಗುವಿನ ಆರೋಗ್ಯ ರಕ್ಷಣೆಗೆ ಕಿಲ್ಕಾರಿ ಸೇವೆ : ಡಾ.ಕ್ಯಾತನಾಳ

ತಾಯಿ-ಮಗುವಿನ ಆರೋಗ್ಯ ರಕ್ಷಣೆಗೆ ಕಿಲ್ಕಾರಿ ಸೇವೆ : ಡಾ.ಕ್ಯಾತನಾಳ
ಕಲಬುರಗಿ: ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ಕೇಂದ್ರ ಸರ್ಕಾರವು ಕಿಲ್ಕಾರಿ ಎಂಬ ಮಹತ್ವದ ಮೊಬೈಲ್ ಆರೋಗ್ಯ ಸೇವೆಯನ್ನು ಜಾರಿಗೆ ತಂದಿದೆ. ಈ ಸೇವೆ ಮೂಲಕ ಗರ್ಭಿಣಿ ತಾಯಂದಿರಿಗೆ ಮತ್ತು ನವಜಾತ ಶಿಶುಗಳಿಗೆ ಅಗತ್ಯವಾದ ಆರೋಗ್ಯ ಮಾಹಿತಿ ಮೊಬೈಲ್ ಮೂಲಕ ನೀಡಲಾಗುತ್ತದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಶರಣಬಸಪ್ಪ ಕ್ಯಾತಾನಾಳ್ ಅವರ ಪ್ರಕಾರ, ಗರ್ಭಧಾರಣೆಯ 4ನೇ ತಿಂಗಳಿಂದ ಮಗುವಿನ ಮೊದಲ ಜನ್ಮದಿನದವರೆಗೆ ತಾಯಿಯ ಆರೋಗ್ಯದ ಬಗ್ಗೆ ಮತ್ತು ಮಗುವಿನ ಲಸಿಕಾಕರಣ ಕುರಿತಂತೆ ಕರೆಗಳ ಮೂಲಕ ಮಾಹಿತಿ ನೀಡಲಾಗುತ್ತದೆ.
ನೋಂದಣಿ ಪ್ರಕ್ರಿಯೆ:
ಗರ್ಭಿಣಿಯರು ಅಥವಾ ಮಗುವಿನ ಜನನದ ನಂತರ ತಾಯಿ ಅಥವಾ ಕುಟುಂಬದ ಸದಸ್ಯರು ತಮ್ಮ ಮೊಬೈಲ್ ಸಂಖ್ಯೆಯನ್ನು ಆಶಾ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿ ಅಥವಾ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ನೋಂದಾಯಿಸಬಹುದು. ಈ ಮಾಹಿತಿಯನ್ನು ಆರ್.ಸಿ.ಹೆಚ್ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ) ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ.
ಕಿಲ್ಕಾರಿ ಸೇವೆಯ ಪ್ರಮುಖ ಅಂಶಗಳು:
- ತಾಯಿ ಮತ್ತು ಶಿಶು ಮರಣದ ದರ ಕಡಿಮೆ ಮಾಡುವುದು.
- ಗುಣಮಟ್ಟದ ಆರೋಗ್ಯ ಸೇವೆ ಮತ್ತು ಲಸಿಕಾಕರಣದ ಮಾಹಿತಿಯನ್ನು ತಲುಪಿಸುವುದು.
- ವಾರದಿಗೊಮ್ಮೆ ಉಚಿತವಾಗಿ ಪ್ರಿ-ರಿಕಾರ್ಡೆಡ್ ಕರೆಗಳ ಮೂಲಕ ಮಾಹಿತಿಯನ್ನು ನೀಡುವುದು.
ಕರೆ ಸ್ವೀಕರಿಸುವ ಪ್ರಕ್ರಿಯೆ:
ತಾಯಂದಿರು ತಮ್ಮ ಮೊಬೈಲ್ ಸಂಖ್ಯೆಯಲ್ಲಿ 0124-4451660 ಸಂಖ್ಯೆಯನ್ನು ಸೇವ್ ಮಾಡಿಕೊಂಡು, ಈ ಸಂಖ್ಯೆಯಿಂದ ಕರೆ ಬಂದಾಗ ಸ್ವೀಕರಿಸಬೇಕು. ಯಾವುದೇ ಕಾರಣಕ್ಕೆ ಕರೆ ಸ್ವೀಕರಿಸಲು ಸಾಧ್ಯವಾಗದಿದ್ದರೆ, 14423 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಆರ್.ಸಿ.ಹೆಚ್ ಅಧಿಕಾರಿಗಳು ಡಾ|| ಸಿದ್ದು ಪಾಟೀಲ್ ಅವರ ಪ್ರಕಾರ, ಈ ಸೇವೆ ಮೂಲಕ ತಾಯಿ ಮತ್ತು ಶಿಶುಗಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪ್ರಜ್ಞೆ ಹೆಚ್ಚಲಿದೆ
-ಕಲಬುರಗಿ ವರದಿ