ಆರ್ಕ್ ವಿಸ್ತಾರ 2025 ವಿನ್ಯಾಸ ತಂತ್ರಜ್ಞಾನ ಸಮಾವೇಶ ನಾಳೆಯಿಂದ ಉದ್ಘಾಟನೆಗೆ ಸಜ್ಜು

ಆರ್ಕ್ ವಿಸ್ತಾರ 2025 ವಿನ್ಯಾಸ ತಂತ್ರಜ್ಞಾನ ಸಮಾವೇಶ ನಾಳೆಯಿಂದ ಉದ್ಘಾಟನೆಗೆ ಸಜ್ಜು
ಕಲಬುರಗಿ : ಭಾರತೀಯ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ ಸಂಘಟನೆಯ ಕಲಬುರಗಿ ಜಿಲ್ಲಾ ಘಟಕದ ಆಶ್ರಯದಲ್ಲಿ ಮೇ 2 ರಿಂದ 4ರ ವರೆಗೆ ಕಲ್ಬುರ್ಗಿ ನಗರದ ಬಂಜಾರಾ ಭವನದ ಆವರಣದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಆರ್ಕ್ ವಿಸ್ತಾರ - 2025 ಸಮ್ಮೇಳನ ಉದ್ಘಾಟನೆಗೆ ಸಜ್ಜಾಗಿದೆ.
ಕಲಬುರಗಿ ನಗರದ ಬಂಜಾರ ಭವನದ ಆವರಣದಲ್ಲಿ ರತನ್ ಟಾಟಾ ಘಟನೆ ನಿರ್ಮಾಣ ವಸ್ತು ಪ್ರದರ್ಶನ ಮಳಿಗೆ ಹಾಗೂ ಸುನಿತಾ ವಿಲಿಯಮ್ಸ್ ವೇದಿಕೆಯಲ್ಲಿ ನಮ್ಮ ದೃಷ್ಟಿ - ನಿಮ್ಮ ದೃಷ್ಟಿ- 2035 ಮೂರು ದಿನಗಳ ವಿಶೇಷ ಕಾನ್ ಕ್ಲೇವ್ ಆಯೋಜಿಸಲಾಗಿದೆ. ಭೂಮಿ ಪೂಜೆಯಿಂದ ವಾಸ್ತು ಪೂಜೆ ವರೆಗೆ ಹಾಗೂ ಕಟ್ಟಡ ನಿರ್ಮಾಣದ ಸಾಮಗ್ರಿಗಳ ಸಮಗ್ರ ಮಾಹಿತಿ ವಸ್ತುಗಳ ಪ್ರದರ್ಶನ ವಿಚಾರಗೋಷ್ಠಿ ನಡೆಯಲಿದ್ದು ಮೇ 2 ರಂದು ಬೆಳಿಗ್ಗೆ 10.30 ಕ್ಕೆ (ಇಂದು) ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಚಾಲನೆ ನೀಡಲಿದ್ದಾರೆ ಎಂದು ಸಂಘಟನಾ ಸಮಿತಿಯ ಅಧ್ಯಕ್ಷರಾದ ವೈಭವ್ ನವಣಿ ಹಾಗೂ ಪ್ರಧಾನ ಕಾರ್ಯದರ್ಶಿ ಭರತ್ ಭೂಷಣ್ ತಿಳಿಸಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ, ಬಾಬು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭ0ವರ್ ಸಿಂಗ್ ಮೀನಾ ಉಪಸ್ಥಿತರಿರಲಿದ್ದಾರೆ. ಭಾರತೀಯ ಆರ್ಕಿಟೆಕ್ಟ್ ಇನ್ಸ್ಟಿಟ್ಯೂಟ್ನ ರಾಜ್ಯಾಧ್ಯಕ್ಷರಾದ ಬಿ ಆರ್ ಮೋಹನ್ ಪಾರಂಪರಿಕ ಗ್ಯಾಲರಿಯನ್ನು ಉದ್ಘಾಟಿಸಲಿದ್ದಾರೆ ನಂತರ ವಿನ್ಯಾಸ ಕ್ಷೇತ್ರದ ಕುರಿತಾಗಿ ವಿಶೇಷ ಸಮಾದಗೋಷ್ಠಿ ನಡೆಯಲಿದೆ. ಮೇ ಮೂರರಂದು ಬೆಳಿಗ್ಗೆ 9:30ಕ್ಕೆ ನಮ್ಮ ದೃಷ್ಟಿ- ನಿಮ್ಮ ಸೃಷ್ಟಿ-2035 ಈ ಕುರಿತಾಗಿ ವಿಶೇಷ ಸಂವಾದ ಗೋಷ್ಠಿ ನಡೆಯಲಿದ್ದು ರಾಜ್ಯದ ವೈದ್ಯಕೀಯ ಶಿಕ್ಷಣ ಖಾತೆಯ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಚಾಲನೆ ನೀಡಲಿದ್ದಾರೆ ಮಹಾನಗರ ಪಾಲಿಕೆಯ ಆಯುಕ್ತಾರಾದ ಶಿಂಧೆ ಅವಿನಾಶ್ ಸಂಜೀವನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ನಡೆಯುವ ವಿಶೇಷ ಸಂವಾದ ಗೋಷ್ಠಿಯಲ್ಲಿ ನಗರದ ಘನ ತ್ಯಾಜ್ಯ ನಿರ್ವಹಣೆ ಕುರಿತಾಗಿ ಮಹಾರಾಷ್ಟ್ರದ ಥಾಣೆಯ ಡಾ. ಲತಾ ಕಮಲ್ ಘನಶಾಮ್ನಿ ಉಪನ್ಯಾಸ ನೀಡಲಿರುವರು ಬಳಿಕ ನಡೆಯುವ ವಿಚಾರಗೋಷ್ಠಿಯಲ್ಲಿ ವಿನ್ಯಾಸ ತಂತ್ರಜ್ಞಾನ ಕಲಿಕೆಯ ಅಗತ್ಯ ಕುರಿತಾಗಿ ರಾಯಚೂರಿನ ಲತಾ ಗುಜಾರ್ ವಿಶೇಷ ಉಪನ್ಯಾಸ ನೀಡುವರು.
ಕೊನೆಯ ದಿನ ಮೇ 4ರಂದು ಬೆಳಿಗ್ಗೆ 9:30ಕ್ಕೆ ನಡೆಯುವ ಕಾನ್ ಕ್ಲೇವ್ನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರು ಹಾಗೂ ಕಲಬುರಗಿ ಜಿಲ್ಲೆ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆಯವರು ಭಾಗವಹಿಸಲಿದ್ದಾರೆ. ಶಾಸಕಿ ಖನಿಜ ಫಾತಿಮಾ ಮೇಯರ್ ಎಲ್ಲಪ್ಪ ನಾಯ್ಕೋಡಿ ಜೆಡಿಎಸ್ ಅಧ್ಯಕ್ಷ ಮಜರ್ ಅಲಂಖಾನ್ ಮುಖ್ಯ ಅತಿಥಿಗಳಾಗಿ ಹಾಗೂ ಪ್ರಾದೇಶಿಕ ಆಯುಕ್ತರದ ಕೃಷ್ಣ ಭಾಜಪಾಯಿ ಜಿಲ್ಲಾಧಿಕಾರಿ ಫೌಜಿಯ ತರುಣಂ ಪೊಲೀಸ್ ಆಯುಕ್ತರಾದ ಡಾ. ಶರಣಬಸಪ್ಪ ಎಸ್ ಟಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿರುವರು. ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅಧ್ಯಕ್ಷತೆ ವಹಿಸಲಿರುವರು.
ಬಳಿಕ ನಡೆಯಲಿರುವ ವಿಚಾರಗೋಷ್ಠಿಯಲ್ಲಿ ಭೂಕಂಪನ ನಿರೋಧಕ ಕಟ್ಟಡ ನಿರ್ಮಾಣ ಕುರಿತಾಗಿ ಮಹಾರಾಷ್ಟ್ರದ ಡಾ. ದಫೇದಾರ್ ಜೆ ಬಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಹಾಗೂ ವಿನ್ಯಾಸದ ತಂತ್ರಜ್ಞಾನ ಪಾತ್ರದ ಕುರಿತಾಗಿ ತೆಲಂಗಾಣದ ಅನಿಲ್ ಮಿತ್ರ ಉಪನ್ಯಾಸ ನೀಡುವರು.
150ಕ್ಕೂ ಹೆಚ್ಚು ಮಳಿಗೆಗಳು
ರತನ್ ಟಾಟಾ ವಸ್ತು ಪ್ರದರ್ಶನ ಮಳಿಗೆಯಲ್ಲಿ ಭೂಮಿ ಖರೀದಿಯಿಂದ ಫ್ಲಾಟ್ ಪೂಜೆಯವರೆಗೆ ನಿರ್ಮಾಣ ಕುರಿತಾಗಿ ಹಾಗೂ ಕಟ್ಟಡ ಸಾಮಗ್ರಿಗಳ ಕುರಿತಾಗಿ ಮಾಹಿತಿ ನೀಡುವ ಸುಮಾರು 150ಕ್ಕೂ ಹೆಚ್ಚು ಮಳಿಗೆಗಳ ವಸ್ತು ಪ್ರದರ್ಶನಕ್ಕೆ ಸಜ್ಜಾಗಿದ್ದು ಸಾರ್ವಜನಿಕರು ಉಚಿತವಾಗಿ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.ವಾಸ್ತುಶಿಲ್ಪದ ಅಧ್ಯಯನವನ್ನು ಪ್ರೋತ್ಸಾಹಿಸುವುದು, ವಾಸ್ತುಶಿಲ್ಪ ವೃತ್ತಿಯ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ಭಾರತದಾದ್ಯಂತ ವಾಸ್ತುಶಿಲ್ಪಿಗಳ ಆಸಕ್ತಿಯನ್ನು ಉತ್ತೇಜಿಸುವುದು ನಮ್ಮ ಧ್ಯೇಯವಾಗಿದೆ ಎಂದು ಸಂಘಟನಾ ಸಮಿತಿಯ ಅಧ್ಯಕ್ಷರಾದ ವೈಭವ್ ನವಣಿ ಹಾಗೂ ಪ್ರಧಾನ ಕಾರ್ಯದರ್ಶಿ, ಭರತ್ ಭೂಷಣ್ ತಿಳಿಸಿದ್ದಾರೆ