ಭೀ.ಗುಡಿ ಕೆಬಿಜೆಎನ್ಎಲ್ ಕಚೇರಿ ಗೋಡೆಯ ದುಸ್ಥಿತಿ

ಭೀ.ಗುಡಿ ಕೆಬಿಜೆಎನ್ಎಲ್ ಕಚೇರಿ ಗೋಡೆಯ ದುಸ್ಥಿತಿ

ಭೀ.ಗುಡಿ ಕೆಬಿಜೆಎನ್ಎಲ್ ಕಚೇರಿ ಗೋಡೆಯ ದುಸ್ಥಿತಿ

 ಶಹಾಪುರ : ಕರ್ನಾಟಕ ರಾಜ್ಯ ನಾಗರೀಕರ ಸೇವಾ ನಿಯಮಗಳ ವತಿಯಿಂದ ಸಾರ್ವಜನಿಕ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ತರಹದ ಮಾದಕ ವಸ್ತು ಮತ್ತು ಧೂಮಪಾನ ಸೇವೆಯನ್ನು ಸರ್ಕಾರ ಶಾಸನಾತ್ಮಕವಾಗಿ ನಿಷೇಧಿಸಿ ಎಚ್ಚರಿಕೆ ನೀಡಿ ಆದೇಶ ಹೊರಡಿಸಿದ್ದರು, ಇಲ್ಲಿನ ಕಚೇರಿಯ ಆಡಳಿತ ಸಿಬ್ಬಂದಿ ವರ್ಗದವರು ಕಾನೂನು ಉಲ್ಲಂಘಿಸಿ ಧೂಮಪಾನ ಮಾಡಿ ಗುಟ್ಕಾ (ತಂಬಾಕು) ಸೇವನೆ ಮಾಡಿ ಎಲ್ಲೆಂದರಲ್ಲಿ ಜಿಗಿದಿರುವ ದೃಶ್ಯ ಕಂಡು ಬಂತು.

ತಾಲೂಕಿನ ಭೀಮರಾಯನ ಗುಡಿಯ ಕೃಷ್ಣ ಭಾಗ್ಯ ಜಲ ನಿಗಮದ ಕಚೇರಿಯ ಗೋಡೆಗೆ ಗುಟ್ಕಾ ತಿಂದು ಗಲೀಜು ಮಾಡಿದ್ದಾರೆ. ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಸರ್ಕಾರ ಸಂಪೂರ್ಣವಾಗಿ ತಂಬಾಕು ಸೇವನೆ ನಿಷೇಧಿಸಲಾಗಿದೆ,ಸರಕಾರಿ ಕಚೇರಿಗಳಲ್ಲಿ ಯಾರೇ ಧೂಮಪಾನ,ತಂಬಾಕು ಉತ್ಪನ್ನ ಸೇವಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜರುಗಿಸಬೇಕು.

ಕಾಡಾ ಆಡಳಿತಾಧಿಕಾರಿಗಳ ಕಚೇರಿಯ ಪಕ್ಕದ ಗೋಡೆಗೆ ಗುಟ್ಕಾ ತಿಂದು ಜಿಗಿದಿರುವುದು ಅಧಿಕಾರಿಗಳ ಗಮನಕ್ಕೂ ಬಂದರೂ ಯಾವುದೇ ಕ್ರಮಕೈಗೊಂಡಿರುವುದಿಲ್ಲ,ಮುಂದಿನ ದಿನಗಳಲ್ಲಿ ಸರ್ಕಾರಿ ಕಚೇರಿ ಸ್ವಚ್ಛತೆ ಕಾಪಾಡದಿದ್ದರೆ,ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ

ದಯವಿಟ್ಟು ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಹಾಗೂ ಶಾಂತತೆಯ ಜೊತೆಗೆ ಉತ್ತಮ ಪರಿಸರ ಕಾಪಾಡಬೇಕೆಂದು ಪ್ರಗತಿಪರರು ಆಗ್ರಹಿಸಿದ್ದಾರೆ.