ಮಾದಿಗರಿಗೆ ಬೆಳಕಾದ ಸುಪ್ರೀಂ ಕೋರ್ಟ್ ತೀರ್ಪು' ಅಂಬಾರಾಯ ಚಲಗೇರಾ
ಕಲಬುರಗಿ: 'ಒಳಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕತ್ತಲಲ್ಲಿ ಇದ್ದ ಮಾದಿಗರಿಗೆ ಬೆಳಕು ನೀಡಿದೆ' ಎಂದು ಕಲಬುರಗಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ಮುಖಂಡ ಅಂಬಾರಾಯ ಚಲಗೇರಾ ಬಣ್ಣಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
'ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಮಾದಿಗ ಸಮುದಾಯಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಇದೆಲ್ಲ ಮೂರು ದಶಕಗಳ ಹೋರಾಟದ ಫಲವಾಗಿದೆ. ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿಯೂ ಈ ಕುರಿತು ಹೋರಾಟ ನಡೆದಿತ್ತು. ಇದೀಗ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೆ ಕೂಡಲೇ ಕ್ರಮ ವಹಿಸಬೇಕು. ವಿವಿಧ ಹುದ್ದೆಗಳ ಬರ್ತಿಗೆ ಪ್ರಗತಿಯಲ್ಲಿರುವ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಒಳ ಮೀಸಲಾತಿ ವರ್ಗಿಕರಣ ಮಾಡಿದ ಬಳಿಕ ನೇಮಕಾತಿ ನಡೆಸಬೇಕು ಎಂದು ಒತ್ತಾಯಿಸಿದರು.
ಗುಂಡಪ್ಪ ಸಿರಾಡೋಣ ಮಾತನಾಡಿದರು. ಅನಿಲ್ ಕುಮಾರ್ ಡೊಂಗರಗಾಂವ ,ರಾಜು ಕಟ್ಟಿಮನಿ, ಮಲ್ಲು ಜಿನಕೇರಿ, ಗುಂಡು ಸಂಗವಾರ ಇದ್ದರು