ಜಿಲ್ಲಾ ಚಾಲಕರ ಸಂಘದಿಂದ (ದಸರಾ) ನವರಾತ್ರಿ ಮಹೋತ್ಸವದ

ಜಿಲ್ಲಾ ಚಾಲಕರ ಸಂಘದಿಂದ (ದಸರಾ) ನವರಾತ್ರಿ ಮಹೋತ್ಸವದ

ಜಿಲ್ಲಾ ಚಾಲಕರ ಸಂಘದಿಂದ (ದಸರಾ) ನವರಾತ್ರಿ ಮಹೋತ್ಸವದ

ಕಲಬುರಗಿ ಜಿಲ್ಲಾ ಚಾಲಕರ ಸಂಘದಿಂದ ಆಯುಧ ಪೂಜೆ ಅದ್ದೂರಿಯಾಗಿ ಆಚರಣೆ

ಕಲಬುರಗಿ ನಗರದ ಕೋಠಾರಿ ಭವನದ ಬಳಿ ಇರುವ ಟ್ಯಾಕ್ಸಿ ನಿಲ್ದಣದಲ್ಲಿ ಕಲಬುರಗಿ ಜಿಲ್ಲಾ ಚಾಲಕರ ಸಂಘದಿಂದ (ದಸರಾ) ನವರಾತ್ರಿ ಮಹೋತ್ಸವದ ನಿಮಿತ್ತ ಆಯುಧ ಪೂಜೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. 

ಕಲಬುರಗಿ ಜಿಲ್ಲಾ ಚಾಲಕರ ಸಂಘದ ನೇತೃತ್ವದಲ್ಲಿ ನಗರದ ಹೋಸ ಜೇವರ್ಗಿ ರಸ್ತೆಯ ಬಳಿ ಇರುವ ಕೊಠಾರಿ ಭವನದ ಟ್ಯಾಕ್ಸಿ ನಿಲ್ದಾಣ ಬಳಿ ವಾಹನಗಳಿಗೆ ಬಾಳೆ ದಿಂಡು ಕಟ್ಟಿ ವಿಷೇಶ ಅಲಂಕಾರ ಮಾಡುವ ಮೂಲಕ ಪೂಜೆ ನೆರವೇರಿಸಲಾಯಿತು. 

ಈ ವೇಳೆ ಮಾತನಾಡಿದ ಕಲಬುರಗಿ ಜಿಲ್ಲಾ ಚಾಲಕರ ಸಂಘದ ಸಂಸ್ಥಾಪಕ ಭೀಮರಾಯ ದೋರೆ ಅವರು, ಪ್ರತಿ ವರ್ಷದಂತೆ ಈ ಬಾರಿಯು ವಿಜಯದಶಮಿ ಆಯುಧ ಪೂಜೆಯನ್ನು ನೆರವೇರಿಸಲಾಗಿದೆ. ಕಳೆದ ೧೫ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಚಾಲಕರಿಗೆ ದೇವಿ ಒಳ್ಳೆಯ ಜೀವನ ನೀಡಲಿ ಎಂದು ಹಾರೈಸಿದರು. 

ಬಳಿಕ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ್ ದಿಗಸಂಗಿ ಅವರು ಮಾತನಾಡಿ ಕಳೆದ ಹಲವು ವರ್ಷಗಳಿಂದ ಕೋಠಾರಿ ಭವನ ಟ್ಯಾಕ್ಸಿ ನಿಲ್ದಾಣದ ಬಳಿ ಚಾಲಕರ ಸಂಘದಿAದ ಆಯುಧ ಪೂಜೆ ಅದ್ದೂರಿಯಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ. ಚಾಲಕರಿಗೆ ಹಾಗೂ ನಾಡಿನ ಜನತೆಗೆ ದೇವಿ ಸದಾ ಆಶಿರ್ವದಿಸಿ ಕಾಪಾಡಿಲಿ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಉಪಾಧ್ಯಕ್ಷ ಸುಶೀಲಕುಮಾರ್ ಸರಜೋಳಗಿ, ಸಂಘಟನಾ ಕಾರ್ಯದರ್ಶಿ ಶ್ರೀಶೈಲ್ ತೆಲ್ಲೂರ್, ಪ್ರಚಾರ ಸಮಿತಿ ಅಧ್ಯಕ್ಷ ರಾಹುಲ್ ಹಿರೇಮಠ್, ಖಜಾಂಚಿ ಅನಿಲಕುಮಾರ್ ಪಾಟೀಲ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.