ಶೌಚಾಲಯ ಗಳಿಲ್ಲದ ಬಡವಾಣೆಗಳಿಗೆ ಬಯಲು ಶೌಚಕ್ಕೆ ದಂಡದ ಬೆದರಿಕೆ ಬಿಜೆಪಿ ಅಧ್ಯಕ್ಷ ಯಾರಿ ಆಕ್ರೋಶ.

ಶೌಚಾಲಯ ಗಳಿಲ್ಲದ ಬಡವಾಣೆಗಳಿಗೆ ಬಯಲು ಶೌಚಕ್ಕೆ ದಂಡದ ಬೆದರಿಕೆ ಬಿಜೆಪಿ ಅಧ್ಯಕ್ಷ ಯಾರಿ ಆಕ್ರೋಶ.

ಶೌಚಾಲಯ ಗಳಿಲ್ಲದ ಬಡವಾಣೆಗಳಿಗೆ ಬಯಲು ಶೌಚಕ್ಕೆ ದಂಡದ ಬೆದರಿಕೆ ಬಿಜೆಪಿ ಅಧ್ಯಕ್ಷ ಯಾರಿ ಆಕ್ರೋಶ.

ವಾಡಿ:ಸಾರ್ವಜನಿಕರು ಬಯಲು ಶೌಚಕ್ಕೆ ಹೋದರೆ ಸ್ವಚ್ಛ ಭಾರತ ಮಿಷಿನ ಅಡಿ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ದಂಡ ವಿಧಿಸಲಾಗುವುದು ಎಂದು ವಾಡಿ ಪಟ್ಟಣದ ಮುಖ್ಯ ಅಧಿಕಾರಿಗಳಾದ ಸಿ ಫಕ್ರುದ್ದೀನ್ ಸಾಬ್ ಎಚ್ಚರಿಕೆ ನೀಡಿದ್ದಾರೆ. 

ಇದು ಸರಿಯಾದ ಸೂಚನೆ ಆದರೆ ಶೌಚಾಲಯ ನಿರ್ಮಾಣದ ಹಣ ಲಪಟಾಯಿಸಿ ಈ ರೀತಿ ಹೇಳಿಕೆ ನೀಡಿದ್ದು ಎಷ್ಟು ಸಮಂಜಸ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಬಹುತೇಕ ಕಡೆ ವೈಯಕ್ತಿಕ ಶೌಚಾಲಯ ಸಾರ್ವಜನಿಕ ಶೌಚಾಲಯ ಗಳು ಇಲ್ಲ, ಕೆಲವೊಂದು ಕಡೆ ಇದ್ದರು ಕೂಡಾ ಸರಿಯಾದ ನಿರ್ವಹಣೆ ಇಲ್ಲದೆ ಇರುವುದು ನಾವು ಗಮನಿಸಿ ಬಹುದು.

ಮನೆ ಮನೆಗೆ ಶೌಚಾಲಯ ಎಂದು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ಲಕ್ಷಾಂತರ ಹಣವನ್ನು ನಕಲಿ ಬಿಲ್ ಗಳ ಮೂಲಕ ಶೌಚಾಲಯದ ಹಣವನ್ನು ಪುರಸಭೆಯವರು ಕಬಳಿಸಿರುವ ಬಗ್ಗೆ ಸುಮಾರು ಸಲ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ.

ಈಗ ಪುರಸಭೆ ಅಧಿಕಾರಿಗಳು ಬಯಲು ಶೌಚಾಲಯ ಕ್ಕೆ ದಂಡ ವಿಧಿಸಲು ಮುಂದಾಗಿದ್ದಾರೆ.

ತಮ್ಮ ಕರ್ತವ್ಯದ ಅರಿವೇ ಇಲ್ಲದ ಅಧಿಕಾರಿಗಳು ಶೌಚಾಲಯಗಳೆ ಇಲ್ಲದ ವಾರ್ಡ್ ಗಳನ್ನು ಬಯಲು ಶೌಚ ಮುಕ್ತ ಬಡಾವಣೆಗಳೆಂದು ಘೋಷಿಸಿದ್ದಾರೆ. 

ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಮತ್ತೊಮ್ಮೆ ದೂರು ನೀಡಿ ಇಂತಹ ಅಧಿಕಾರಿಗಳ ವಿರುದ್ಧ ಕಾನೂನಿನ ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು.

ಉದಯವಾಣಿ ಪತ್ರಿಕೆಯಲ್ಲಿ ಪುರಸಭೆ ಅಧಿಕಾರಿಗಳ ಹೇಳಿಕೆ ಇಂದು ಪ್ರಕಟವಾಗಿದೆ