"ಬಕೆಟ್ ಹಿಡಿಯುವವರಿಗೂ ಮಣೆ ಹಾಕುತ್ತಿರುವ ಬಿಜೆಪಿ: ಯತ್ನಾಳ ಅಭಿಮಾನಿಗಳು ಆರೋಪ"
ಬಕೆಟ್ ಹಿಡಿಯುವವರಿಗೆ ಮಣೆ ಹಾಕುತ್ತಿರು ಬಿಜೆಪಿ ಪಕ್ಷ : ಆರೋಪ
ಬಸವನಗೌಡ ಪಾಟೀಲ ಯತ್ನಾಳ ಮತ್ತೇ ಪಕ್ಷಕ್ಕೆ ಸ್ವಾಗತಿಸಿಕೊಳ್ಳಲು ಅಭಿಮಾನಿಗಳು ಕರೆ
ಚಿಂಚೋಳಿ :ರಾಜ್ಯದ ಬಿಜೆಪಿ ಪಕ್ಷ ಕುಟುಂಬ ರಾಜಕೀಯದಿಂದ ಪಕ್ಷ ಗಬ್ಬು ವಾಸನೆ ಹೊಡೆಯುತ್ತಿದೆ. ಕುಟುಂಬ ರಾಜಕಾರಣದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಪಕ್ಷ ಮತ್ತು ಕಾರ್ಯಕರ್ತರ ಉಳಿವಿಗಾಗಿ ಬಕೆಟ್ ಹಿಡಿಯುವವರಿಗೆ ಮಣೆ ಹಾಕುವವರ ವಿರುದ್ಧ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಬಿಜಾಪೂರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರು ಧ್ವನಿ ಎತ್ತಿದಕ್ಕೆ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿರುವುದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಅಧ್ಯಕ್ಷ ವೀರಣ್ಣ ಗಂಗಾಣಿ ಅವರು ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬಿಜೆಪಿ ಪಕ್ಷದ ಶಕ್ತಿ ಬಸವನಗೌಡ ಪಾಟೀಲ ಯತ್ನಾಳ ಅವರು ಆಗಿದ್ದಾರೆ. ಅವರು ಹಿಂದು ಸಮಾಜಕ್ಕೆ ಬೆನ್ನಲುಬಾಗಿ ಜೀವ ಮುಡುಪಾಗಿಟ್ಟವರು. ಕುಟುಂಬ ರಾಜಕಾರಣದಿಂದ ಪಕ್ಷವನ್ನು ಹೋರ ತರಲು ಮತ್ತು ವಕಫ್, ಕಾಂಗ್ರೆಸ್ ಪಕ್ಷದೊಂದಿಗಿನ ಹೊಂದಾಣಿಕೆ ರಾಜಕೀಯ, ಭ್ರಷ್ಟಚಾರದ ವಿರುದ್ಧ ಹಾಗೂ ರೈತರ ಪರವಾಗಿ ಧ್ವನಿ ಎತ್ತಿದ ತಪ್ಪಿಗೆ ಕೇಂದ್ರ ಬಿಜೆಪಿ ನಾಯಕರು ಬಸವನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟನೆಯ ಅಸ್ತ್ರ ಪ್ರಯೋಗ ಮಾಡಿದ್ದು, ಪಕ್ಷದಿಂದ ಕಿತ್ತಿ ಹಾಕಿರುವುದು ಅಭಿಮಾನಿಗಳಿಗೆ ನೋವು ತಂದಿದೆ. ಪಕ್ಷ ತಂದೆ – ಮಗನ ಕೈಗೊಂಬೆಯಾಗಿ ಕುಣಿಯುತ್ತಿದೆ. ನಿಷ್ಠಾವಂತರ ಮತ್ತು ನೆರೆ ನುಡಿಗಳಿಂದ ಗುರುತಿಸಿಕೊಳ್ಳುವವರನ್ನು ಪಕ್ಷದಿಂದ ಹೋರ ಹಾಕುವ ಕೆಲಸ ಮಾಡುತ್ತಿದೆ. ಯತ್ನಾಳ ಅವರಿಗೆ ಉಚ್ಚಾಟನೆಯ ಅಸ್ತ್ರದ ಆದೇಶ ಪ್ರಯೋಗನವನ್ಉ ಹಿಂಪಡೆದು ಪಕ್ಷಕ್ಕೆ ಮತ್ತೆ ಸ್ವಾಗತಿಸಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ 60 ಸ್ಥಾನಗಳಿಗೆ ಸಿಮಿತವಾಗಿರುವ ಪಕ್ಷ 6 ಸ್ಥಾನಕ್ಕೆ ಇಳಿಯುವಲ್ಲಿ ಯಾವುದೇ ಅನುಮಾನವಿಲ್ಲ ಮತ್ತು ತೆಗೆದುಕೊಂಡ ಆದೇಶದ ವಿರುದ್ಧ ಜಿಲ್ಲೆ ಮತ್ತು ತಾಲೂಕ ಮಟ್ಟದಲ್ಲಿ ಉಗ್ರವಾದ ಹೋರಾಟಕ್ಕೆ ಕಾರ್ಯಕರ್ತರು ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ಹಾಗೂ ಅಭಿಮಾನಿ ವೈಜಿನಾಥ ಕೊಂಡಾ ಪಸ್ತಾಪೂರ, ಗೌತಮ್ , ಶ್ರೀನಿವಾಸ ಪೂಜಾರಿ, ರಾಘವೇಂದ್ರ ಶಿರೋಳ್ಳಿ ಅವರು ಉಪಸ್ಥಿತರಿದರು.