30 ರಂದು,ರಂಗ ಯುಗಾದಿ ಸಮಾರಂಭ

30 ರಂದು,ರಂಗ ಯುಗಾದಿ ಸಮಾರಂಭ

30 ರಂದು,ರಂಗ ಯುಗಾದಿ ಸಮಾರಂಭ

ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗ ಸಂಗಮ ಕಲಾ ವೇದಿಕೆ ಸಹಯೋಗದಲ್ಲಿ "ರಂಗ ಯುಗಾದಿ" ಕಾರ್ಯಕ್ರಮವು ಕಲಾಮಂಡಳ ಅನ್ನಪೂರ್ಣ ಕ್ರಾಸ್ ಕಲಬುರಗಿ ಸಭಾಂಗಣದಲ್ಲಿ ಮಾರ್ಚ್ 30, 2025, ಸಂಜೆ 6 ಗಂಟೆಗೆ ಅದ್ದೂರಿಯಾಗಿ ನಡೆಯಲಿದೆ.

 ಈ ಕಾರ್ಯಕ್ರಮದಲ್ಲಿ ರಂಗಭೂಮಿ ಗಾಯಕರು ಮತ್ತು ನಾಟಕ ಪ್ರದರ್ಶನಗಳು ಪ್ರಮುಖ ಆಕರ್ಷಣೆಯಾಗಲಿವೆ.

 ಕಾರ್ಯಕ್ರಮ ಉದ್ಘಾಟನೆಯನ್ನು ಕಲಬುರಗಿಯ ,ಗುಲ್ಬರ್ಗ ವಿಶ್ವವಿದ್ಯಾಲಯ ಕುಲಸಚಿವ ಡಾ. ರಮೇಶ ಲಂಡನ್ಕರ್ ವಹಿಸಲಿದ್ದಾರೆ.

 ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಮತ್ತು ವಿಮರ್ಶಕರಾದ ಎನ್.ಎಸ್. ಬಸವಪ್ರಭು ವಹಿಸಲಿದ್ದಾರೆ.

 ಕಲ್ಯಾಣ ಕಹಳೆ ಪತ್ರಿಕೆಯ ಸಂಪಾದಕ ಶರಣಗೌಡ ಪಾಟೀಲ ಪಾಳಾ, ಗುರುಪದೇಶ ಪತ್ರಿಕೆಯ ಸಂಪಾದಕ ಸಿದ್ದಣಗೌಡ ಪಾಟೀಲ ಕಡಣಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಕರ್ನಾಟಕ ರಂಗಾಯಣ ಕಲಬುರ್ಗಿ ನಿರ್ದೇಶಕರಾದ ,ಡಾ ಸುಜಾತಾ ಜಂಗಮಶೆಟ್ಟಿ, ರಂಗ ಸಂಗಮ ಕಲಾ ವೇದಿಕೆಯ ಕಾರ್ಯದರ್ಶಿ ಅನಿಕೇತ ಎಮ್.ಮಡಕಿ ಉಪಸ್ಥಿತಿ ವಯಿಸಲಿದ್ದಾರೆ.

ಪ್ರಾಸ್ತಾವಿಕ ಭಾಷಣವನ್ನು ಡಾ. ಶಿಶ್ವರಾಜ ಪಾಟೀಲ ನೀಡಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಜಲೀಲ ಪಟೇಲ 

ರಾಯಚೂರಿನ,ಗಾಯಕಿ ತಾರಾ ಕುಲಕರ್ಣಿ ಅವರಿಂದ ರಂಗಗೀತೆ ಹಾಡಲಿದ್ದಾರೆ.

ಸಂಗೀತ ಗಾಯನವನ್ನು ಅಣ್ಣಾರಾಯ ಮತ್ತಿಮೂಡ ಅವರ ಗಾಯನ ಕಾರ್ಯಕ್ರಮವು ಪ್ರೇಕ್ಷಕರನ್ನು ರಂಜಿಸಲಿದ್ದರೆ, 

ನಾಟಕ ಕೊನೆ ಅಂಕ, ರಚನೆ ಯೋಗೇಶ್ , ನಿರ್ದೇಶನ ಡಾ.ವಿಶ್ವರಾಜ ಪಾಟೀಲ,ಅಭಿನಯ ಅಭೀಷೇಕ ಎಸ್.ಕೆ. ಅವರಿಂದ ನಾಟಕ ಪ್ರದರ್ಶನವು ಕಲಾಸಕ್ತರಿಗೆ ಒಂದು ವಿಭಿನ್ನ ಅನುಭವ ನೀಡಲಿದೆ.

ಸಾರ್ವಜನಿಕರು ಈ ರಂಗ ಯುಗಾದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಕೃತಿಯ ಸೊಗಡನ್ನು ಅನುಭವಿಸಲು ಅವಕಾಶವಿದೆ. ಎಂದು ಶಿವಗೀತ ಬಸವಪ್ರಭು,ಅನಿಕೇತ ಎಮ್. ಮಡಕಿ ತಿಳಿಸಿದರು.