ಚಿಮ್ಮೇಗಾಂವದಲ್ಲಿ ವಸತಿ ಶಾಲೆ ಸ್ಥಳ ಪರಿಶೀಲನೆ; ಪ್ರಭು ಚವ್ಹಾಣ

ಚಿಮ್ಮೇಗಾಂವದಲ್ಲಿ ವಸತಿ ಶಾಲೆ ಸ್ಥಳ ಪರಿಶೀಲನೆ; ಪ್ರಭು ಚವ್ಹಾಣ

 ಚಿಮ್ಮೇಗಾಂವದಲ್ಲಿ ವಸತಿ ಶಾಲೆ ಸ್ಥಳ ಪರಿಶೀಲನೆ; ಪ್ರಭು ಚವ್ಹಾಣ

ಕಮಲನಗರ: ಕಮಲನಗರ ತಾಲೂಕಿನ ಚಿಮ್ಮೇಗಾಂವ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿರುವ ಡಾ. ಬಿ ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನಿರ್ಮಾಣ ಸ್ಥಳಕ್ಕೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ ಚವ್ಹಾಣ್ ಅವರು ಬುಧವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಕಟ್ಟಡ ನಿರ್ಮಿಸಲು ಯೋಜಿಸಿರುವ ಸ್ಥಳದಲ್ಲಿ ಸಂಚರಿಸಿ ಅಧಿಕಾರಿಗಳಿಂದ ವಿವರಣೆ ಪಡೆದರು. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಮಾತನಾಡಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಅವಶ್ಯಕ ಪ್ರಕ್ರಿಯೆಗಳನ್ನು ಬೇಗ ಆರಂಭಿಸಬೇಕು ಎಂದು ತಿಳಿಸಲಾಗಿತ್ತು ಎಂದು ಹೇಳಿದರು.

ದಾಬಕಾ ಹೋಬಳಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ವಸತಿ ಶಾಲೆ ನಿರ್ಮಿಸಬೇಕಂಬುದು ಬಹುದಿನಗಳ ಬೇಡಿಕೆಯಾಗಿತ್ತು .ಸಾರ್ವಜನಿಕರ ಬೇಡಿಕೆಯು ಸಾಕಷ್ಟಿತ್ತು .ಇದಕ್ಕಾಗಿ ಸತತ ಐದು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ದಾಬಕಾ ಗ್ರಾಮದಲ್ಲಿ ಜಮೀನು ಲಭ್ಯವಿಲ್ಲದ ಕಾರಣ ವಿಳಂಬವಾಗಿದೆ. ಚಿಮ್ಮೇಗಾಂವನಲ್ಲಿ ಜಮೀನು ಒದಗಿಸಿದ ನಂತರ ವಸತಿ ಶಾಲೆಗೆ ಅನುದಾನ ಒದಗಿಸಬೇಕೆಂದು ಸರ್ಕಾರದ ಮೇಲೆ ಸಾಕಷ್ಟು ಒತ್ತಡ ತಂದಿದ್ದೆ. ನಿರಂತರ ಪ್ರಯತ್ನದ ಫಲವಾಗಿ ಸರ್ಕಾರವು ಚಿಮ್ಮೇಗಾಂವ ಗ್ರಾಮದಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು ,10 ಎಕರೆ ಜಮೀನಿನಲ್ಲಿ 22 ಕೋಟಿ ವೆಚ್ಚದ ಭವ್ಯವಾದ ವಸತಿ ಶಾಲೆ ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು.

 ಈ ವಸತಿ ಶಾಲೆಯಿಂದ ದಾಬಕಾ ಹಾಗೂ ಏಕಂಬಾ ಹೋಬಳಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಡಾ. ಬಿ.ಆರ್ ಅಂಬೇಡ್ಕರ್ ಅವರ ಆಶೆಯದಂತೆ ಶಿಕ್ಷಣದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದು ಎಲ್ಲಾ ಭಾಗಗಳಲ್ಲಿ ಮೊರಾರ್ಜಿ ದೇಸಾಯಿ, ಕಿತ್ತೂರಾಣಿ ಚನ್ನಮ್ಮ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ,ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ .ಗ್ರಾಮಗಳಲ್ಲಿ ವಸತಿ ಶಾಲೆಗಳ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಗ್ರಾಮದಲ್ಲಿಯೂ ವಸತಿ ಶಾಲೆ ನಿರ್ಮಾಣ ಕೆಲಸ ಶೀಘ್ರ ಆರಂಭವಾಗಲಿದೆ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ತಹಶೀಲ್ದಾರರಾದ ಅಮೀತಕುಮಾರ ಕುಲಕರ್ಣಿ ಮುಖಂಡರಾದ ಅನಿಲ್ ಬಿರಾದಾರ್ ಧೊಂಡಿಬಾಯಿ ವಿಲಾಸ್ ,ಸಂಜು ಪಾಟೀಲ ಚಿಮ್ಮೇಗಾಂವ, ಜ್ಞಾನದೇವ ಬಿರಾದಾರ್ ,ಸಚಿನ್ ಬಿರಾದಾರ್ ,ಕಿಶೋರ್ ಪಾಟೀಲ್ ಯಶವಂತ್ ಪಾಟೀಲ್ ರಮೇಶ್ ಪಾಟಿಲ್ ನಾರಾಯಣ್ ಮೂಳೆ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತಿ ಇದ್ದರು.