ಆರಪಿಐ ಪಕ್ಷದ ಪದಾದಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ದತ್ತು ಹೀರಾಪೂರ ನೇಮಕ :..

ಆರಪಿಐ ಪಕ್ಷದ ಪದಾದಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ದತ್ತು ಹೀರಾಪೂರ ನೇಮಕ :..

ಆರಪಿಐ ಪಕ್ಷದ ಪದಾದಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ದತ್ತು ಹೀರಾಪೂರ ನೇಮಕ :..

ನಾಗರಾಜ್ ದಂಡಾವತಿ ವರದಿ ಶಹಾಬಾದ : - ಆರ್.ಪಿ.ಐ (ರಿಪಬ್ಲಿಕ್‌ನ ಪಾರ್ಟಿ ಆಫ್ ಇಂಡಿಯಾ) (ಅಂಬೇಡ್ಕರ) ಜಿಲ್ಲಾ ಘಟಕದ ವತಿಯಿಂದ ನಗರದ ಪ್ರವಾಸ ಮಂದಿರದಲ್ಲಿ ತಾಲೂಕ ಮಟ್ಟದ ಸಭೆ ಹಮ್ಮಿಕೊಳ್ಳಲಾಗಿತ್ತು. 

ಸಭೆಯಲ್ಲಿ ಆರಪಿಐ(ಅ) ಜಿಲ್ಲಾಧ್ಯಕ್ಷರಾದ ರಮೇಶ ನಾಟೇಕರ ಹಾಗೂ ಜಿಲ್ಲಾ ಯುವ ಅಧ್ಯಕ್ಷರಾದ ಅಭಿಷೇಕ ಚಕ್ರವರ್ತಿ ಯವರ ಅಧ್ಯಕ್ಷತೆಯಲ್ಲಿ ಶಹಾಬಾದ ತಾಲೂಕ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ದತ್ತು ಹೀರಾಪೂರ, ಉಪಾಧ್ಯಕ್ಷರಾಗಿ ಸಂಗಪ್ಪ ಆಂದೋಲ, ವಸಂತ ಕಲಾಲ, ಪ್ರಧಾನ ಕಾರ್ಯದರ್ಶಿಯಾಗಿ ರವಿ ಮಯೂರ, ಸಹ ಕಾರ್ಯದರ್ಶಿಯಾಗಿ ಆನಂದ ಹಳ್ಳಿ, ಮುನಿಯಪ್ಪ ಜೇವರ್ಗಿ, ಖಜಾಂಚಿಯಾಗಿ ಅಮರೇಶ ರೆಡ್ಡಿ ಯವರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶರಣಪ್ಪ ವಾಡೇಕರ ತಿಳಿಸಿದ್ದಾರೆ ಮತ್ತು ಪಕ್ಷದ ಸಿಂದ್ಧಾತಗಳು ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿರುವ ಬಗ್ಗೆ ಹೋರಾಟ ಮಾಡಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಹೇಳಿದ್ದಾರೆ. 

ಪಕ್ಷಕ್ಕೆ ಸೇರ್ಪಡೆ : ವಿವಿದ ಪಕ್ಷಗಳನ್ನು ತೊರೆದು ಅನೇಕ ಜನ ಯುವಕರು ರಿಪಬ್ಲಿಕ್‌ನ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ) ಪಕ್ಷಕ್ಕೆ ಸೆರ್ಪಡೆಗೊಂಡರು.