ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಸಮಾರೋಪ: ಶಿಸ್ತು ಮತ್ತು ನಾಯಕತ್ವ ಬೆಳೆಸುವ ಹಂತ

ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಸಮಾರೋಪ: ಶಿಸ್ತು ಮತ್ತು ನಾಯಕತ್ವ ಬೆಳೆಸುವ ಹಂತ

ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಸಮಾರೋಪ: ಶಿಸ್ತು ಮತ್ತು ನಾಯಕತ್ವ ಬೆಳೆಸುವ ಹಂತ

ಇಂದು ದಿನಾಂಕ 29.03.2025 ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಯ ಎಮ್ ಎಸ್ ಇರಾಣಿ ಪದವಿ ಮಹಾವಿದ್ಯಾಲಯ ಕಲಬುರಗಿ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಯ 2024-25ನೇ ಸಾಲಿನ ವಾರ್ಷೀಕ ವಿಶೇಷ ಶಿಬಿರ ದ ಸಮಾರೋಪ ಸಮಾರಂಭ ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಎನ್ . ಜಿ. ಕಣ್ಣೂರ, ಕುಲಸಚಿವರು ಮೌಲ್ಯಮಾಪನ ವಿಭಾಗ ಮತ್ತು ಸಂಯೋಜಕರು ರಾಷ್ಟ್ರೀಯ ಸೇವಾ ಯೋಜನಾ ಘಟಕ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಶಿಬಿರದಲ್ಲಿ ಭಾಗವಹಿಸುವುದರಿಂದ ಶಿಸ್ತು, ನಾಯಕತ್ವ ಗುಣಗಳನ್ನು ಬೆಳೆಯಲು ಮತ್ತು ನಿಮ್ಮಲ್ಲಿರು ಪ್ರತಿಭೆಗಳನ್ನು ಹೊರ ಹಾಕಲು ರಾಷ್ಟ್ರೀಯ ಸೇವಾ ಯೋಜನೆ ವೇದಿಕೆ ಬಹಳ ಸೂಕ್ತವಾದದ್ದು ಮತ್ತು ಸದೃಢವಾದ ದೇಶವನ್ನು ಕಟ್ಟುವುದರಲ್ಲಿ ಕೈ ಜೋಡಿಸಬೇಕು ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ರಾಷ್ಟ್ರೀಯ ಸೇವಾ ಯೋಜನೆ ಯ 2024-25ನೇ ಸಾಲಿನ ವಾರ್ಷೀಕ ವಿಶೇಷ ಶಿಬಿರದ ಒಂದು ವಾರದ ವರದಿಯನ್ನು ಡಾ. ಶಂಕ್ರಪ್ಪ ಪ್ರಸ್ತುತ ಪಡಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ರೋಹಿಣಿಕುಮಾರ ಎಸ್ ಹಿಳ್ಳಿ ವಹಿಸಿ ವಿದ್ಯಾರ್ಥಿಗಳನ್ನು ಉದೇಶಿಸಿ ಮಾತನಾಡಿ ಶುಭ ಹಾರೈಸಿದರು.

 ಕಾರ್ಯಕ್ರಮದ ಪ್ರಾಸ್ಥವಿಕ ನುಡಿಗಳು ಮತ್ತು ಸ್ವಾಗತವನ್ನು ಡಾ. ಪ್ರಾಣೇಶ ಎಸ್.‌ ರಾ.ಸೇ.ಯೋ. ಅಧಿಕಾರಿ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ನೀಲಕಂಠ ವಾಲಿ ನಿರ್ವಹಿಸಿದರು. ವಂದನಾರ್ಪಣೆಯನ್ನು ಡಾ. ಶಂಕ್ರಪ್ಪ ಕೆ. ರಾ.ಸೆ.ಯೋ. ಅಧಿಕಾರಿ ʼಬʼ ಘಟಕ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.