ಕಾಂಗ್ರೆಸ್ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ
ಆಳಂದ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ.ಇದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ.ಖರ್ಚು ಮಾಡಿದ್ದು ಈಗ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಮಾಡುವ ಪ್ರೋತ್ಸಾಹಧನಕ್ಕೂ ಕೂಡಾ ಕತ್ತರಿ ಹಾಕಿ ಕಾಂಗ್ರೆಸ್ ಪಕ್ಷ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಳಂದ ತಾಲೂಕು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ರಾಜಕುಮಾರ ಘೋಳ ಅಪಾದಿಸಿದ್ದಾರೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೃಹಲಕ್ಷ್ಮೀ ಯೋಜನೆಗೆ 600ಕೋಟಿ ರೂ. ಅಲ್ಲದೇ ಇತರೆ ಗ್ಯಾರಂಟಿಗಳಿಗೆ 1600ಕೋಟಿ ರೂ. ಗಳನ್ನು ದಲಿತ ಕೋಟಾದಿಂದ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದನ್ನು ಖಂಡಿಸುವ ಕಾಂಗ್ರಸ್ಸಿನ ಎಸ್‌ಸಿ/ಎಸ್ಟಿ ಶಾಸಕರು, ಸಚಿವರು ಮೌನವಾಗಿರುವುದು ಆಶ್ಚರ್ಯವಾಗಿದೆ ಎಂದಿದ್ದಾರೆ.
ಪ್ರಬುದ್ಧ ಯೋಜನೆಯಡಿ ದಲಿತರಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು 100 ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಅವಕಾಶವಂತೆ. ಅಲ್ಪಸಂಖ್ಯಾತರಿಗೆ ಗ್ಲೋಬಲ್ టెలిటో 500 ಯುನಿವರ್ಸಿಟಿಗಳಲ್ಲಿ ಪಿ.ಎಚ್‌ಡಿಗೆ 500 ವಿದ್ಯಾರ್ಥಿಗಳಿಗೆ, ಒಬಿಸಿ ವಿದ್ಯಾರ್ಥಿಗಳಿಗೆ 1000 ಯುನಿವರ್ಸಿಟಿಗಳಲ್ಲಿ ಅವಕಾಶ ಇದ್ದರೆ ದಲಿತರಿಗೆ ಕೇವಲ 100 ಯುನಿವರ್ಸಿಟಿಗಳಲ್ಲಿ ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ದಲಿತ ಕಾರ್ಯಕರ್ತರಿಗೆ ಯಾವುದೇ ಕೆಲಸ ಕೊಡದೆ ಅವರನ್ನು ವಂಚಿಸುವ ಹುನ್ನಾರ ನಡೆದಿದೆ ಕಾಂಗ್ರೆಸ್ ಪಕ್ಕದ ಈ ನಡೆ ದಲಿತ ವಿರೋಧಿಯಾಗಿದೆ ಎಂದು ಕೀಡಿಕಾರಿದ್ದಾರೆ