ರಂಗಭೂಮಿಯ ದಾಖಲಾತಿ ಮತ್ತು ಚರಿತ್ರೆ ಕಟ್ಟಿಕೊಡುವ ಕೃತಿ : ಡಾ.ಪೆರ್ಲ

ರಂಗಭೂಮಿಯ ದಾಖಲಾತಿ ಮತ್ತು ಚರಿತ್ರೆ ಕಟ್ಟಿಕೊಡುವ ಕೃತಿ : ಡಾ.ಪೆರ್ಲ

ಮಹಿಪಾಲ ರೆಡ್ಡಿ ಮುನ್ನೂರು ಪುಸ್ತಕ "ರಂಗ ಸುನೇರಿ" ಅನಾವರಣ :

ರಂಗಭೂಮಿಯ ದಾಖಲಾತಿ ಮತ್ತು ಚರಿತ್ರೆ ಕಟ್ಟಿಕೊಡುವ ಕೃತಿ : ಡಾ.ಪೆರ್ಲ

ಸೇಡಂ : ರಂಗಭೂಮಿಗೆ ಅರ್ಪಣಾ ಮನೋಭಾವದಿಂದ ದುಡಿದ ಅನನ್ಯ ಕಲಾವಿದರು ಮತ್ತು ಪೋಷಕರನ್ನು ದಾಖಲು ಮಾಡಿ ಗ್ರಂಥ ರೂಪದಲ್ಲಿ ಕೊಟ್ಟಿರುವುದು ರಂಗಭೂಮಿಗೆ ನೀಡುವ ದೊಡ್ಡ ಕೊಡುಗೆಯಾಗಿದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹೇಳಿದರು. 

   ಸೇಡಂನ ಕೊತ್ತಲ ಬಸವೇಶ್ವರ ಪಂಚ ಮಂಡಳಿಯಿಂದ ನೂತನವಾಗಿ ನಿರ್ಮಿಸಲಾದ ಶ್ರೀ ಕೊತ್ತಲಬಸವ ಸಭಾಭವನ ಉದ್ಘಾಟನೆ ಸಮಾರಂಭದ ಅಂಗವಾಗಿ ನೃಪತುಂಗ ಅಧ್ಯಯನ ಸಂಸ್ಥೆಯಿಂದ ಸಾಹಿತಿ ಮಹಿಪಾಲರೆಡ್ಡಿ 300 ರಚಿತ "ರಂಗ ಸುನೇರಿ" ಕೃತಿ ಜನಾರ್ಪಣೆ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕವಿಗೋಷ್ಠಿ ನೃಪತುಂಗ ಅಧ್ಯಯನ ಸಂಸ್ಥೆಯ ನೂತನ ಅಧ್ಯಕ್ಷರ ಘೋಷಣೆ ಸಮಾರಂಭದಲ್ಲಿ ಕೃತಿ ಜನಾರ್ಪಣೆ ಮಾಡಿ ಅವರು ಮಾತನಾಡಿದರು. ಜಿಏನ್ ಮೋಹನ್ ಅವರ ಬಹುರೂಪಿ ಪ್ರಕಾಶನದಿಂದ ಬಹುಮುಖ್ಯ ವ್ಯಕ್ತಿತ್ವದ 300 ಅವರ ಪುಸ್ತಕ ಪ್ರಕಟಗೊಂಡಿದ್ದು ಶ್ಲಾಘನೀಯ ರಂಗಭೂಮಿಯ ಸೇವೆ ಮಾಡಿದ ಕಲಾವಿದರ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಡುವ ಮತ್ತು ಸಂಶೋಧನಕಾರರಿಗೆ ಉಪಯುಕ್ತ ಮಾಹಿತಿ ನೀಡುವ ಮಹತ್ವದ ಅಧ್ಯಯನ ಶೀಲ ಕೃತಿಯಾಗಿದೆ.ರಂಗ ಸುನೇರಿ ಪುಸ್ತಕದಲ್ಲಿ 18 ಜನ ಕಲಾವಿದರ ಬದುಕು ಸಾಧನೆ ಸಾಧನೆಯನ್ನು ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ. ಚಿಕಿತ್ಸಕ ಬುದ್ಧಿ ಮತ್ತು ಸೂಕ್ಷ್ಮ ಒಳ ನೋಟಗಳನ್ನು ಮನಮುಟ್ಟುವಂತೆ ಮುನ್ನೂರುವರು ಸರಳ ಭಾಷಾ ಶೈಲಿಯ ತನ್ನ ಬರಹದಲ್ಲಿ ಪಡಿಮೂಡಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಸತ್ವಯುತ ಶ್ರೇಷ್ಠ ಬರಹಗಾರರಿದ್ದರೂ ಕೂಡ ಪ್ರಚಾರ ಹಾಗೂ ಅವಕಾಶಗಳ ಕೊರತೆಯಿಂದ ಬೆಳಕಿಗೆ ಬರದಿರುವುದು ಕಳವಳಕಾರಿ ವಿಷಯ ಎಂದು ಡಾ. ಪೆರ್ಲ ಅಭಿಪ್ರಾಯ ಪಟ್ಟರು.

  ಕಾರ್ಯಕ್ರಮವನ್ನು ಉದ್ಘಾಟಿಸಿದ ಕತೆಗಾರ ಮಹಾಂತೇಶ ನವಲಕಲ್ ಮಾತನಾಡಿ ಸೇಡಂ ಇಡೀ ರಾಷ್ಟ್ರದ ಗಮನ ಸೆಳೆದ ಇತಿಹಾಸ ಪ್ರಸಿದ್ಧ ನೆಲವಾಗಿದೆ. ಆದರೆ ಇಲ್ಲಿನ ಇತಿಹಾಸವನ್ನು ಬೇಕಾಬಿಟ್ಟಿ ಅರ್ಥೈಸಿಕೊಂಡು ರಚಿಸಲಾಗಿದೆ. ಅದಕ್ಕಾಗಿ ಇತಿಹಾಸದ ಮರು ಸೃಷ್ಟಿ ಸಾಹಿತಿಗಳಿಂದ ಮತ್ತು ಅಧ್ಯಯನಕಾರರಿಂದ ಪ್ರಾಮಾಣಿಕವಾಗಿ ನಡೆಯಬೇಕಾಗಿದೆ ಎಂದರು. ನೃಪತುಂಗ ಅಧ್ಯಯನ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆ ಹೊಂದಿದ ಜಗದೀಶ ಕಡಬಗಾಂವ ಅವರಿಗೆ ನಿಕಟ ಪೂರ್ವ ಅಧ್ಯಕ್ಷರಾದ ಪ್ರಭಾಕರ್ ಜೋಶಿ ಅಧಿಕಾರ ಹಸ್ತಾಂತರಿಸಿದರು. 

   ಕವಿಗೋಷ್ಠಿಯಲ್ಲಿ ಲಿಂಗಾರೆಡ್ಡಿ ಶೇರಿ, ಡಾ. ಬಿ ಆರ್ ಅಣ್ಣ ಸಾಗರ್ ಡಾ. ಪಲ್ಲವಿ ಪಾಟೀಲ್ ಡಾ. ಅಮರಮ್ಮ ಪಾಟೀಲ್, ಡಾ. ಸುವರ್ಣ ಅಳ್ಳೊಳ್ಳಿ, ಆರತಿ ಕಡಗಂಚಿ, ಪ್ರಕಾಶ್ ಗೋಣಗಿ, ಮುರುಗಪ್ಪ ಹಣಸಮಳ್ಳಿ, ರುಕ್ಮಿಣಿ ಕಾಳಗಿ, ವಿಜಯ ಭಾಸ್ಕರ ರೆಡ್ಡಿ ರಾಜೇಶ್ವರಿ ಸಾತನೂರು, ಜ್ಯೋತಿ ಲಿಂಗಂಪಳ್ಳಿ, ಶರಣಕುಮಾರ ತಳ್ಳಳ್ಳಿ ಹಾಗೂ ಇತರರು ಭಾಗವಹಿಸಿದ್ದರು. ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿ ಸೇಡಂನ ಇತಿಹಾಸವನ್ನು ಜನಮಾನಸಕ್ಕೆ ತಿಳಿಸುವ ದೊಡ್ಡ ಜವಾಬ್ದಾರಿ ಲೇಖಕರಿಗೆ ಎಂದರು ಕವಿ ಕೆರಳ್ಳಿ ಗುರುನಾಥ ರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷರಾದ ಸಿದ್ದಪ್ಪ ತಳ್ಳಳ್ಳಿ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣದ ಮಾಜಿ ನಿರ್ದೇಶಕರಾದ ಪ್ರಭಾಕರ್ ಜೋಶಿ ಲೇಖಕ ಮಹಿಪಾಲ ರೆಡ್ಡಿ ಮಾತನಾಡಿದರು. ಅಂಜನಾ ಭೋವಿ ಮತ್ತು ತಂಡದವರು ಪ್ರಾರ್ಥನ ಗೀತೆ ಹಾಡಿದರು. ಜಗದೀಶ ಕಡಬಗಾಂವ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ವರಿ ಕಾರ್ಯಕ್ರಮವನ್ನು ನಿರೂಪಿಸಿದರು