ಶಾಸಕಿ ಖನೀಜ್ ಪಾತಿಮಾ ಅವರ ನೇತೃತ್ವದಲ್ಲಿ ಇಫ್ತಾರ್ ಕೂಟದಲ್ಲಿ ಸಾವಿರಾರು ಸರ್ವಧರ್ಮಿಯರು ಭಾಗಿ

ಶಾಸಕಿ ಖನೀಜ್ ಪಾತಿಮಾ ಅವರ ನೇತೃತ್ವದಲ್ಲಿ ಇಫ್ತಾರ್ ಕೂಟದಲ್ಲಿ ಸಾವಿರಾರು ಸರ್ವಧರ್ಮಿಯರು  ಭಾಗಿ

ಶಾಸಕಿ ಖನೀಜ್ ಪಾತಿಮಾ ಅವರ ನೇತೃತ್ವದಲ್ಲಿ ಇಫ್ತಾರ್ ಕೂಟದಲ್ಲಿ ಸಾವಿರಾರು ಸರ್ವಧರ್ಮಿಯರು ಭಾಗಿ

ಕಲಬುರಗಿ: ನಗರದ ಎ. ಎನ್. ಬ್ಯಾಂಕ್ವೆಟ್ ಫಂಕ್ಷನ್ ಹಾಲಿನಲ್ಲಿ ಉತ್ತರ ಮತಕ್ಷೇತ್ರದ ಜನಪ್ರಿಯ ಶಾಸಕಿ ಖನಿಜ ಪಾತಿಮಾ ಅವರಿಂದ ಪವಿತ್ರವಾದ ರಂಜಾನ್ ತಿಂಗಳ ಇಫ್ತಾರ್ ಕೂಟ ಹಮ್ಮಿಕೊಳ್ಳಲಾಯಿತು.

ಮಾಜಿ ಸಚಿವರಾದ ದಿವಂಗತ ಖಮರ್ ಉಲ್ ಇಸ್ಲಾಮ್ ಅವರು ಪ್ರಾರಂಭ ಮಾಡಿದ ಇಫ್ತಾರ್ ಕೂಟ ಆಯೋಜನೆ ಇಂದಿಗೂ ಕೂಡ ದಿವಂಗತ ಖಮರ್ ಉಲ್ ಇಸ್ಲಾಮ್ ಅವರ ಧರ್ಮ ಪತ್ನಿ ಹಾಗೂ ಉತ್ತರ ಮತಕ್ಷೇತ್ರದ ಜನಪ್ರಿಯ ಶಾಸಕಿ ಖನೀಜ್ ಪಾತಿಮಾ ಅವರ ನೇತೃತ್ವದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಆಯೋಜನೆ ಮಾಡಿದ ಇಫ್ತಾರ್ ಕೂಟದಲ್ಲಿ ಸಾವಿರಾರು ಸರ್ವಧರ್ಮಿಯರು ಭಾಗಿಯಾಗಿ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು.

ಒಂದು ತಿಂಗಳ ಕಾಲ ಉಪವಾಸ ವೃತ ಮಾಡಿದ ನಮ್ಮ ಮುಸ್ಲಿಂ ಸಮುದಾಯದ ಬಾಂಧವರಿಗೆ ಭಾಂದವ್ಯದ ಅಪ್ಪುಗೆ ನಿಡಿ ಸರ್ವಧರ್ಮಗಳ ಸಂಕೇತದ ಬಿಂಬವಾಗಿ ಸಮಾಜಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ ಉತ್ತರ ಮತಕ್ಷೇತ್ರದ ಜನಪ್ರಿಯ ಶಾಸಕಿ ಅವರ ಸುಪುತ್ರರಾದ ಫರಾಜ್ ಉಲ್ ಇಸ್ಲಾಮ್ ರವರ ನೇತೃತ್ವದಲ್ಲಿ ಇಫ್ತಾರ್ ಕೂಟ ಅತಿ ವಿಜೃಂಭಣೆಯಿAದ ನಡೆಯಿತು. ರಂಜಾನ್ ಹಬ್ಬದ ಪ್ರಯುಕ್ತ ವಿಶೇಷವಾಗಿ ಇಫ್ತಾರ್ ಕೂಟದಲ್ಲಿ ಮುಸ್ಲಿಂ ಸಮುದಾಯದೊಂದಿಗೆ ಔತಣಕೂಟದಲ್ಲಿ ಭಾಗವಹಿಸಿ ಹಣ್ಣು ಹಂಪಲು ಮತ್ತು ಉಪಹಾರ ಸೇವನೆ ಮಾಡಿದ್ದರು.

ಆಯೋಜನೆ ಮಾಡಿದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಸಂಸದ ರಾಧಾಕೃಷ್ಣ ದೊಡ್ಡನಿ, ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಚಂದ್ರಶೇಖರ ಹುಮನಾಬಾದ್, ಕಾಂಗ್ರೆಸ್ ಯುವ ನಾಯಕ ಫರಾಜ್ ಉಲ್ ಇಸ್ಲಾಂ, ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್, ಕಾಂಗ್ರೆಸ್ ಪಕ್ಷದ ಮುಖಂಡರಾದ ನೀಲಕಂಠರಾವ ಮುಲಗೆ, ಪ್ರವೀಣ್ ಪಾಟೀಲ್ ಹರವಾಳ. ಡಾ. ಕಿರಣ್ ದೇಶಮುಖ್, ಐಮರ್ ಉಲ್ ಇಸ್ಲಾಮ್ ಸೇರಿದಂತೆ ಇತರರು ಇದ್ದರು.