ರಾಮುಲು ದೊರಟಿ ನೇಮಕ
ರಾಮುಲು ದೊರಟಿ ನೇಮಕ
ಕಲಬುರಗಿ ಜಿಲ್ಲಾ ಕೂಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರಾದ ರವಿರಾಜ ಕೊರವಿ ಅವರ ಆದೇಶದ ಮೇರೆಗೆ ಕೂಲಿ ಸಮಾಜದ ಕಲಬುರಗಿ ಜಿಲ್ಲಾ ಉಪಾಧ್ಯಕ್ಷರಾಗಿ ರಾಮುಲು ದೊರಟಿ ಅವರನ್ನು ಆಯ್ಕೆ ಮಾಡಲಾಯಿತು.
ರವಿರಾಜ ಕೊರವಿ ಮಾತನಾಡಿ ಮುಂದಿನ ದಿನಗಳಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ಕೂಲಿ ಸಮಾಜದ ಬಾಂಧವರ ಏಳಿಗೆಗಾಗಿ, ಒಳಿತಿಗಾಗಿ ಹಾಗೂ ಸಮಾಜದ ಉದ್ಧಾರಕ್ಕಾಗಿ ಹಗಲಿರುಳು ಎನ್ನದೆ ತಮ್ಮ ಸೇವೆಯನ್ನು ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ್ ಪಾಟೀಲ್, ಚಿಂಚೋಳಿ ತಾಲೂಕ ಯುವ ಘಟಕ ಅಧ್ಯಕ್ಷ ಝರಣಪ್ಪ ಬಿ ತಳವಾರ ಸೇರಿದಂತೆ ಸಮಾಜದ ಮುಖಂಡರು ಇದ್ದರು.
