ಆಧುನಿಕ ಭಾರತದ ಶ್ರೇಷ್ಠ ನಾಯಕ ಅಂಬೇಡ್ಕರ್: ಅಷ್ಠಗಿ

ಆಧುನಿಕ ಭಾರತದ ಶ್ರೇಷ್ಠ ನಾಯಕ ಅಂಬೇಡ್ಕರ್: ಅಷ್ಠಗಿ

ಆಧುನಿಕ ಭಾರತದ ಶ್ರೇಷ್ಠ ನಾಯಕ ಅಂಬೇಡ್ಕರ್: ಅಷ್ಠಗಿ

ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ರವರು ಆಧುನಿಕ ಭಾರತದ ಶ್ರೇಷ್ಠ ನಾಯಕರಾಗಿದ್ದಾರೆ ಎಂದು ಬಿಜೆಪಿ ಯುವ ನಾಯಕ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಹೇಳಿದರು.

ಅವರು ಕಲಬುರಗಿ ತಾಲ್ಲೂಕಿನ ಬಬಲಾದ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ. ಬಿಆರ್ ಅಂಬೇಡ್ಕರ್ ರವರ ೧೩೪ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಮಾನತೆಯ ಸಂಕೇತವಾದ ನೀಲಿ ಧ್ವಜಾರೋಹಣವನ್ನು ನೆರವೇರಿಸಿ, ವಿಶೇಷವಾಗಿ ಮಾತನಾಡಿ ಅಂಬೇಡ್ಕರ್ ಸಂವಿಧಾನ ಮೂಲಕ ಭಾರತದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಹಕ್ಕುಗಳು, ಸಮಾನ ಅವಕಾಶಗಳನ್ನು ಕಲ್ಪಿಸಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡಿದ ಮಹಾನ್ ನಾಯಕ ಅಂಬೇಡ್ಕರ್ ರವರು ಎಂದರು. ಕೆಲವರು ಅಂಬೇಡ್ಕರ್ ದಲಿತ ನಾಯಕ ಎಂದು ಹೇಳುತ್ತಾರೆ ಆದರೆ ಅವರು ಕೇವಲ ದಲಿತರು ಹಿಂದುಳಿದವರಷ್ಠೇ ಅಲ್ಲ, ಮಹಿಳೆಯರು ಸೇರಿದಂತೆ ಮುಂದುವರಿದ ಎಲ್ಲ ಜಾತಿಯ ಜನರ ಸಮಾನತೆಗಾಗಿ, ಏಳಿಗೆಗಾಗಿ ಶ್ರಮಿಸಿದ ಏಕೈಕ ನಾಯಕರಾಗಿದ್ದಾರೆಂದು ಹೇಳಿದರು.

ಅಖಂಡ ಭಾರತ ಅಂಬೇಡ್ಕರ್ ಕನಸಾಗಿತ್ತು ಅದಕ್ಕಾಗಿಯೇ ಪ್ರತ್ಯೇಕ ರಾಷ್ಟ್ರದ ಪರಿಕಲ್ಪನೆಯಲ್ಲಿದ್ದ ಹೈದರಾಬಾದ್ ನಿಜಾಮರು ಭಾರತ ಒಕ್ಕೂಟ ಸೇರದಿದ್ದಾಗ ಆಪರೇಷನ್ ಪೋಲೋ ಮಾಡಲು ಅಂಬೇಡ್ಕರ್ ರವರೆ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಸೂಚಿಸಿದರು. ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ದ್ವಜ, ಪ್ರತ್ಯೇಕ ಸಂವಿಧಾನ ಮತ್ತು ಪ್ರತ್ಯೇಕ ಪ್ರಧಾನ ನೀಡುವುದನ್ನು

ಅಂಬೇಡ್ಕರ್ ರವರು ವಿರೋಧಿಸಿದರು ಅದನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರದ್ದುಗೊಳಿಸಿ ಅವರ ಕನಸನ್ನು ನನಸು ಮಾಡಿದ್ದಾರೆ ಎಂದರು.

ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದ ಯುವ ಮುಖಂಡ ಶರಣು ಅಲ್ಲಮಪ್ರಭು ಪಾಟೀಲ್ ಅವರು, ಅಂಬೇಡ್ಕರ್ ರವರು ಶಿಕ್ಷಣಕ್ಕೆ ತುಂಬಾ ಮಹತ್ವ ಕೊಟ್ಟಿದ್ದರು ಆದರೆ ನಮ್ಮ ಭಾಗದಲ್ಲಿ ಶಿಕ್ಷಣ ಕುಂಟಿತಗೊಳ್ಳುತ್ತಿದೆ ಪಿಯುಸಿ ಎಸ್ಎಸ್ಎಲ್ಸಿ ಫಲಿತಾಂಶವೆ ಉದಾಹರಣೆ. ಹೆಚ್ಚು ಮಕ್ಕಳ ಶಿಕ್ಷಣಕ್ಕೆ ಅಂಬೇಡ್ಕರ್ ಒತ್ತು ಕೊಟ್ಟಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷಯನ್ನು ಸಾವಳಗಿ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ಕನಗೊಂಡ ವಹಿಸಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ವಿಜೇತರಿಗೆ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಂತೋಷ ಪಾಟೀಲ್ ದಣ್ಣೂರ ಬಹುಮಾನ ವಿತರಿಸಿದರು.

ಕಾರ್ಯಕ್ರಮದ ವೇದಿಕೆ ಮೇಲೆ ತಾ.ಪಂ ಮಾಜಿ ಸದಸ್ಯ ಮಡಿವಾಳಪ್ಪ ಮಡಿವಾಳ, ಕಾಂಗ್ರೆಸ್ ಮುಖಂಡ ಬಸವರಾಜ್ ವಾಲಿ, ಯಮನಯ್ಯ ಗುತ್ತೇದಾರ್, ಭೂ ನ್ಯಾಯ ಮಂಡಲಿ ಸದಸ್ಯ ಚನ್ನಪ್ಪ ಮರಬ, ಮುಖಂಡರಾದ ರಾಮಚಂದ್ರ ಪೋಲಿಸ್ ಪಾಟೀಲ್, ಪಂಡಿತ್ ನಡಗೇರಿ, ಅಸ್ಲಂ ಜವಳಗಿ, ಶಾಂತಪ್ಪ ಕೋರಿ, ಶಿವಕುಮಾರ್ ಕಾಳೆ, ನಿಂಗಣ್ಣ ಆಂದೇಲಿ, ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಕಾಂತ ವಾಲಿ, ರಾಘವೇಂದ್ರ ಕಾಳೆ, ಬಿರಣ್ಣ ಆಂದೇಲಿ, ಪರಮೇಶ್ವರ ಜಾನೆ, ಜಯಂತಿ ಉತ್ಸವ ಸಮಿತಿ ಸುದರ್ಶನ ವಾಲಿ, ರಮೇಶ್ ವಾಲಿ, ಚಂದ್ರಕಾಂತ ಜಾನೆ(ಮೀಸಿ) ಅಭಿಷೇಕ್ ಜ್ಯೋತಿಕರ್, ರಾಜಕುಮಾರ ವಾಲಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತವನ್ನು ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಸಂತೋಷ ಜಾನೆ, ನಿರೂಪಣೆಯನ್ನು ನಿಂಗಣ್ಣ ವಾಲಿ, ವಂದನಾರ್ಪಣೆಯನ್ನು ಸಚಿನ ವಾಲಿ ನೆರವೇರಿಸಿದರು.