ಭಗತ್ ಸಿಂಗ್ ವಿಚಾರಧಾರೆ ಯುವ ಜನತೆಗೆ ಆದರ್ಶ: ಲಕ್ಷ್ಮಣ ಮಂಡಲಗೇರ

ಭಗತ್ ಸಿಂಗ್ ವಿಚಾರಧಾರೆ ಯುವ ಜನತೆಗೆ ಆದರ್ಶ: ಲಕ್ಷ್ಮಣ ಮಂಡಲಗೇರ

ಭಗತ್ ಸಿಂಗ್ ವಿಚಾರಧಾರೆ ಯುವ ಜನತೆಗೆ ಆದರ್ಶ: ಲಕ್ಷ್ಮಣ ಮಂಡಲಗೇರ  

ಕಲಬುರಗಿ: ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರ ವಿಚಾರಗಳು ಇಂದಿಗೂ ಸಮಾಜವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ದೇಶಪ್ರೇಮಿ ಯುವಾಂದೋಲನ ಸಂಘಟನೆಯ ವಿಭಾಗೀಯ ಸಂಚಾಲಕರಾದ ಲಕ್ಷ್ಮಣ್ ಮಂಡಲಗೇರ ಹೇಳಿದರು.  

ನಗರದ ಜಿಡಿಎ ಬಡಾವಣೆಯ ಮೆಟ್ರಿಕ್ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್ ಅವರ ಹುತಾತ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.  

ಈ ವೇಳೆ ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕರಾದ ರಾಜೇಂದ್ರ ರಾಜವಾಳ ಮಾತನಾಡಿ, ಭಗತ್ ಸಿಂಗ್, ರಾಜ್‌ಗುರು, ಸುಖ್‌ದೇವ್ ಅವರ ತ್ಯಾಗವನ್ನು ಸ್ಮರಿಸುತ್ತಾ, ಅವರ ದೇಶಪ್ರೇಮ ಮತ್ತು ಬಲಿದಾನ ಯುವಜನತೆಗೆ ಸದಾ ಸ್ಫೂರ್ತಿ ನೀಡುತ್ತದೆ ಎಂದರು.  

ಅವರು, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ನಿರುದ್ಯೋಗ ಹಾಗೂ ಅಸಮರ್ಪಕ ಶಿಕ್ಷಣ ವ್ಯವಸ್ಥೆಗಳ ನಡುವಿನ ಇಂದಿನ ಸವಾಲುಗಳನ್ನು ಉಲ್ಲೇಖಿಸಿ, ಭಗತ್ ಸಿಂಗ್ ಅವರ ಸ್ವಾತಂತ್ರ್ಯ ದೃಷ್ಟಿಕೋಣ ಇಂದಿಗೂ ಪ್ರಸ್ತುತವಾಗಿದೆ ಎಂದರು.  

ಕಾರ್ಯಕ್ರಮದಲ್ಲಿ ದೇಶಪ್ರೇಮಿ ಯುವಾಂದೋಲನ ಸಂಘಟನೆಯ ಜಿಲ್ಲಾ ಸಂಚಾಲಕ ಮೈಲಾರಿ ದೊಡ್ಮನಿ, ವಸತಿ ನಿಲಯದ ಮೇಲ್ವಿಚಾರಕರಾದ ನೀಲಕಂಟ ಸಿಂಗೆ ಮತ್ತು ವಸತಿ ನಿಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.