ಶ್ರೀ ಕರಿಬಸವೇಶ್ವರ ಶಾಲೆಯಲ್ಲಿ ಕಲಿಕಾ ಸಾಮಗ್ರಿ ವಿತರಣೆ ಮತ್ತು ಬಿಳ್ಕೋಡುಗೆ ಸಮಾರಂಭ

ಶ್ರೀ ಕರಿಬಸವೇಶ್ವರ ಶಾಲೆಯಲ್ಲಿ ಕಲಿಕಾ ಸಾಮಗ್ರಿ ವಿತರಣೆ ಮತ್ತು ಬಿಳ್ಕೋಡುಗೆ ಸಮಾರಂಭ

ಶ್ರೀ ಕರಿಬಸವೇಶ್ವರ ಶಾಲೆಯಲ್ಲಿ ಕಲಿಕಾ ಸಾಮಗ್ರಿ ವಿತರಣೆ ಮತ್ತು ಬಿಳ್ಕೋಡುಗೆ ಸಮಾರಂಭ 

ಕಲಬುರಗಿ: ಶ್ರೀ ಕರಿಬಸವೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಟ್ರಸ್ಟ್ ವತಿಯಿಂದ ಶ್ರೀ ಕರಿಬಸವೇಶ್ವರ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ ಹಾಗೂ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭವನ್ನು ಚಾರ್ಟರ್ಡ ಅಕೌಂಟೆಂಟ್ ಪರ್ವತಕುಮಾರ ಬಿಜಾಸ್ಪೂರ ಅವರು ಉದ್ಘಾಟಿಸಿದರು.  

ಈ ಕಾರ್ಯಕ್ರಮದಲ್ಲಿ ಕಲ್ಮಠದ ಪೂಜ್ಯ ಶ್ರೀ ಕರಸಿದ್ದೇಶ್ವರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಚಾರ್ಟರ್ಡ ಅಕೌಂಟೆಂಟ್ ಮನುಕುಮಾರ ಪೂಜಾರಿ ಅವರು ಭಾಗವಹಿಸಿದ್ದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇವಣಸಿದ್ದಪ್ಪಾ ಮಾಲಿಪಾಟೀಲ ವಹಿಸಿದ್ದರು. ವೇದಿಕೆಯಲ್ಲಿ ಟ್ರಸ್ಟ್‌ನ ಆಡಳಿತ ಮಂಡಳಿಯ ಸದಸ್ಯರು ಮತ್ತು ಮುಖ್ಯಗುರುಗಳು ಉಪಸ್ಥಿತರಿದ್ದರು.  

ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಪ್ರೇರಣೆ ನೀಡಲಾಯಿತು. ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಭವಿಷ್ಯದ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗಲಿ ಎಂಬ ಶುಭಾಶಯಗಳು ವ್ಯಕ್ತವಾದವು.