ವಾಲಿದ ವಿದ್ಯುತ್ ಕಂಬ, ಆತಂಕದಲ್ಲಿ ಜನರು.
ವಾಲಿದ ವಿದ್ಯುತ್ ಕಂಬ, ಆತಂಕದಲ್ಲಿ ಜನರು.
ಶಹಪುರ : ಬೀದರ ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ತಾಲೂಕಿನ ಹುಲಕಲ್ ಗ್ರಾಮದ ಹೊರವಲಯದ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬ ಸಂಪೂರ್ಣ ವಾಲಿ ಅಪಘಾತಕ್ಕೆ ಆಹ್ವಾನಿಸುತ್ತಿದೆ. ಇದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ಸಾರ್ವಜನಿಕರು ಆತಂಕದಲ್ಲಿ ಬದುಕುತ್ತಿದ್ದಾರೆ.
ಇಂತಹ ಕಂಬಗಳಿಂದ ಜೋರಾದ ಗಾಳಿ ಅಥವಾ ಮಳೆ ಬಿದ್ದು ಪ್ರಾಣ ಹಾನಿ ಮತ್ತು ವಿದ್ಯುತ್ ಅವಘಡಗಳು ಸಂಭವಿಸಬಹುದು, ಆದ್ದರಿಂದ ಕೂಡಲೇ ಜೆಸ್ಕಾಂ ಮೇಲಾಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡು ವಾಲಿರುವ ವಿದ್ಯುತ್ ಕಂಬವನ್ನು ಸರಿಪಡಿಸಬೇಕೆಂದು ಗ್ರಾಮದ ಪ್ರಜ್ಞಾವಂತ ಯುವಕ ಶಂಕರ ಹುಲಕಲ್ ಆಗ್ರಹಿಸಿದ್ದಾರೆ.
ಇದರಿಂದ ಜಮೀನಿನಲ್ಲಿ ರೈತರಿಗೂ ವ್ಯವಸಾಯ ಹಾಗೂ ಕೃಷಿ ಚಟುವಟಿಕೆಗಳು ಮಾಡುವುದಕ್ಕೆ ತುಂಬಾ ತೊಂದರೆಯಾಗುತ್ತಿದೆ, ಹಲವು ವರ್ಷಗಳಿಂದ ಅಳವಡಿಸಿದ ಈ ವಿದ್ಯುತ್ ಕಂಬಗಳು ಹಳೆಯದಾಗಿವೆ,ಹೊಸ ಕಂಬಗಳು ಅಳವಡಿಸಬೇಕೆಂದು ಗ್ರಾಮದ ರೈತರು ಹಾಗೂ ಪ್ರಮುಖರು ಒತ್ತಾಯಿಸಿದ್ದಾರೆ.
