ಕಲಬುರಗಿ ಶರಣಬಸಪ್ಪಗೌಡಾ ದರ್ಶನಾಪುರ ದಂಪತಿಗಳು ಗಣೇಶನಿಗೆ ಪೂಜೆ ಸಲ್ಲಿಸಿದರು
ಕಲಬುರಗಿ ಶರಣಬಸಪ್ಪಗೌಡಾ ದರ್ಶನಾಪುರ ದಂಪತಿಗಳು ಗಣೇಶನಿಗೆ ಪೂಜೆ ಸಲ್ಲಿಸಿದರು
ಕಲಬುರಗಿ: ನಗರದ ಸದಾಶಿವನಗರ,ನವಜೀವನ ನಗರ,ಗಾಬರೇ ಲೇಔಟ,ಮೋಹನ ನಗರದಲ್ಲಿ ಬರುವ ಶ್ರೀ ಗಣೇಶ ಮಂದಿರದಲ್ಲಿ ವಿಜ್ರಂಭಣೆಯಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು, ಸದಾಶಿವ ನಗರ ಬಡಾವಣೆಯ ನಿವಾಸಿಗಳು ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪಗೌಡಾ ದರ್ಶನಾಪುರ ದಂಪತಿಗಳು ಪೂಜಾ ಕಾರ್ಯದಲ್ಲಿ ಭಾಗವಹಿಸಿ ಗಣೇಶನ ಆಶಿರ್ವಾದದಿಂದ ನಾಡು ಸುಖ ಸಮೃದ್ದಿ ಕಾಣಲಿ ಎಂದು ಹೇಳಿದರು,
ಸುಮಾರು ವರ್ಷಗಳಿಂದ ಆಚರಿಸುವ ಗಣೇಶ ಉತ್ಸವವು ಮೂರು ದಿನಗಳ ಕಾಲ ವಿಜ್ರಂಬಣೆಯಿಂದ ಆಚರಿಸಲಾಗುತ್ತದೆ ,ಎಸ್.ಎಸ್.ಎಲ್.ಸಿ.ದ್ವಿತೀಯ ಪಿ.ಯು.ಸಿ.ಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಬಡಾವಣೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ,ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವದು.ವಿಸರ್ಜನೆಯ ಮೂರನೆ ದಿನದಂದು ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಸಚಿವರು,ಹಾಗೂ ಮೇಯರ್ ಅವರು ಬಹುಮಾನಗಳನ್ನು ವಿತರಿಸುವರು .ಇಲ್ಲಿಯ ಗಣೇಶನ ವಿಶೇಷತೆಯೆಂದರೆ ಮಣ್ಣಿನಿಂದ ತಯಾರಿಸಿದ ಗಣಪ ಹಾಗೂ ಯಾವುದೇ ಭಾಜಾ ಭಜಂತ್ರಿ ಡಿಜೆ ಕುಣಿತಗಳ ಆಡಂಬರವಿಲ್ಲದೇ ಸರಳವಾಗಿ ಅರ್ಥಪೂರ್ಣವಾಗಿ ಗಣೇಶೋತ್ಸವ ಆಚರಿಸುವದು ಇಲ್ಲಿನ ವಿಶೇಷತೆಯಾಗಿದೆ.
ಪ್ರತಿದಿನ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷರಾದ ಹಾವೇಂದ್ರ ಪುಣ್ಯಶೆಟ್ಟಿ,ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಚಿಕ್ಕಪಾಟೀಲ,,ಲಕ್ಚ್ಮೀಕಾಂತ ಪಲ್ಲಾ,ಅಮರೇಶಗೌಡ ದರ್ಶನಾಪೂರ,ಡಾ.ರಾಜೇಂದ್ರ ಕೊಂಡಾ,ಡಾ.ಮಹೇಶ ಗಂವ್ಹಾರ, ಚನ್ನಬಸಪ್ಪಾ ಮುಧೋಳ,ಗಂಗಾಧರ ಡೋಣಿ,ಮಲ್ಲಿಕಾರ್ಜುನ ಸ್ವಾಮಿ,ನರಸಣ್ಣ ತಂಬುರಿ,ಸುಭಾಷ ಮೋತಕಪಲ್ಲಿ,ಡಾ.ಮುದ್ದಾ,ಶರಬಣ್ಣಾ ದಿಡ್ಡಿ,ಸತ್ಯಶೀಲರಡ್ಡಿ ಪಲ್ಲಾ ಬಸವರಾಜ ಪಾಟೀಲ,ರಾಮು ರಾಠೋಡ,ಅರ್ಚಕ ವಿವೇಕ ಸ್ವಾಮಿ ಭಾಗವಹಿಸಿದ್ದರು