ನಮ್ಮ ಸಂವಿಧಾನವೇ ಶ್ರೇಷ್ಠ ; ನ್ಯಾಯವಾದಿ ದ್ಯಾಮನಕರ್

ನಮ್ಮ ಸಂವಿಧಾನವೇ ಶ್ರೇಷ್ಠ ; ನ್ಯಾಯವಾದಿ ದ್ಯಾಮನಕರ್

"ನಾಲವಾರದಲ್ಲಿ ಅಸ್ಪೃಶತೆ ನಿವಾರಣೆ ಕುರಿತು ಜಾಗೃತಿ ಕಾರ್ಯಕ್ರಮ ಬೀದಿ ನಾಟಕ"

ನಮ್ಮ ಸಂವಿಧಾನವೇ ಶ್ರೇಷ್ಠ ; ನ್ಯಾಯವಾದಿ ದ್ಯಾಮನಕರ್

ಕಲಬುರಗಿ: ಚಿತ್ತಾಪೂರ ತಾಲೂಕಿನ ನಾಲವಾರ (ಹೋಬಳಿ)ಯಲ್ಲಿರುವ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಕಲಬುರಗಿ ಗೌತಮ ಯುವ ಜನ ಸಾಂಸ್ಕೃತಿಕ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಅಸ್ಪೃಶತೆ ನಿವಾರಣೆ ಕುರಿತು ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮ ಹಾಗೂ ವಿಚಾರ ಸಂಕೀರ್ಣ, ಬೀದಿ ನಾಟಕವನ್ನು ಗ್ರಾ.ಪಂ. ಅಧ್ಯಕ್ಷ ಇಂದ್ರಾಮ ಹಣಮಂತ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಮೂಢ ನಂಬಿಕೆ. ಕಂದಾಚಾರ ಇವು ಸಮಾಜಕ್ಕೆ ಮಾರಕವಾದವು ಇವುಗಳನ್ನು ಹೋಗಲಾಡಿಸಲು ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ಶ್ಲಾಘನಿಯವಾಗಿದೆ ಎಂದರು.

ನ್ಯಾಯವಾದಿ ಧೂಳಪ್ಪಾ ದ್ಯಾಮನಕರ ಮಾತನಾಡಿ ಭಾರತದಲ್ಲಿ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ನಮ್ಮ ಸಂವಿಧಾನದ ಮೂಲ ತತ್ವಗಳು ಕಾರಣವಾಗಿದೆ. ಸಮಾಜದಲ್ಲಿ ಸಮಾನತೆಯಿಂದ ಬದಕಲು ನಮ್ಮ ಸಂವಿಧಾನವೇ ಶ್ರೇಷ್ಠ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.

ಕಲಾವಿದ ಪ್ರಭುಲಿಂಗ ಕಿಣಗಿ ಮಾತನಾಡಿ ತಮ್ಮ ಬೀದಿ ನಾಟಿಕದ ಕಲೆ ಮೂಲಕ ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಹಾಕಲು ಬೀದಿ ನಾಟಕದ ಕಲೆಯ ಪ್ರಮುಖ ಸಾಧನವಾಗಿದೆ ಎಂದು ತಿಳಿಸಿದರು.

ವಿಚಾರಗೋಷ್ಠಿ ಉದ್ದೇಶಿಸಿ, ಸಮಾಜ ಸೇವಕ ಶಿವು ಪಾಟೀಲ್ ಮಾತನಾಡಿ ಮಹಿಳಾ ಹಕ್ಕು ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಅರಿವು ಗ್ರಂಥಾಲಯದ ಮೇಲ್ವಿಚಾರಕರಾದ ಸಿದ್ರಾಮಪ್ಪ ಅವರು ಮಾತನಾಡಿ, ಸಾಮಾಜಿಕ ಕಂದಾಚಾರಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಪಿಡಿಓ ಕಲ್ಲಪ್ಪ ಕುಂಬಾರ, ಮಲ್ಲಿಕಾರ್ಜುನ, ಗ್ರಾಮ ಪಂಚಾಯತ ಸದಸ್ಯರಾದ ಭೋಜಮ್ಮಾ ಬಾಳಪ್ಪಾ ಹಾಗೂ ಮಹಿಳಾ ಸಂಘದ ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕೊನೆಯಲ್ಲಿ ನೀಲಮ್ಮ ಅವರ ಅಕ್ಕ ಮಹಿಳಾ ಕಲಾವಿದರ ಸಂಘದಿAದ ಬೀದಿ ನಾಟಕ ಪ್ರಸ್ತುತಪಡಿಸಿದರು.