ಲಿಂಗಕ್ಕೆ ಶ್ರೀ ಮ.ನಿ.ಪ್ರ.ನಿರಂಜನ ಮಹಾಸ್ವಾಮಿಗಳವರ 15ನೇ ಪುಣ್ಯಸ್ಮರಣೋತ್ಸವ

ಲಿಂಗಕ್ಕೆ ಶ್ರೀ ಮ.ನಿ.ಪ್ರ.ನಿರಂಜನ ಮಹಾಸ್ವಾಮಿಗಳವರ 15ನೇ ಪುಣ್ಯಸ್ಮರಣೋತ್ಸವ

ಕಮಲನಗರ :ತಾಲೂಕಿನ ಸೋನಾಳ ಗ್ರಾಮದಲ್ಲಿ ಶ್ರೀ ವಿರಕ್ತ ಮಠದ ಲಿಂಗಕ್ಕೆ ಶ್ರೀ ಮ.ನಿ.ಪ್ರ.ನಿರಂಜನ ಮಹಾಸ್ವಾಮಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ನೂತನ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಪೂಜ್ಯರ 15ನೇ ಪುಣ್ಯಸ್ಮರಣೋತ್ಸವ ಮತ್ತು ರಾಜ್ಯಮಟ್ಟದ ನಿರಂಜನ ಪ್ರಭು ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಜರುಗಲಿದೆ.

 ಇದೆ ತಿಂಗಳು 20 -12 - 2024 ರಿಂದ 21-12-2024 ಈ ಎರಡು ದಿನಗಳಲ್ಲಿ ಲಿಂ ಶ್ರೀ ಮ.ನಿ.ಪ್ರ. ನಿರಂಜನ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ ಹೂವಿನ ಶಿಗ್ಲಿ ಹಾಗೂ ಸೋನಾಳ ಮಠಾಧ್ಯಕ್ಷರಾದ ಶ್ರೀ ಮ.ನಿ.ಪ್ರ. ಚನ್ನವೀರ ಮಹಾಸ್ವಾಮಿಗಳವರ ಅಪ್ಪಣೆಯ ಮೇರೆಗೆ ಹಾಗೂ ಸದ್ಭಕ್ತರ ಸದಿಚ್ಚೆಯಂತೆ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲ್ಲಾಗಿದೆ 

ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಇಷ್ಟಲಿಂಗ ದೀಕ್ಷೆ 20-12-2024ರಂದು ಬೆಳಿಗ್ಗೆ 7ಗಂಟೆಗೆ ಮಠಾಧ್ಯಕ್ಷರಾದ ಶ್ರೀ ಮ.ನಿ.ಪ್ರ.ಚನ್ನವೀರ ಮಹಾಸ್ವಾಮಿಗಳವರು, ಸೋನಾಳ ಇವರ ಅಮೃತ ಹಸ್ತದಿಂದ ನೆರವೇರಲಿದೆ.

ಮಧ್ಯಾಹ್ನ 3:00ಗೆ ಲಿಂಗಕ್ಕೆ ಶ್ರೀ ಮ.ನಿ.ಪ್ರ.ನಿರಂಜನ ಮಹಾಸ್ವಾಮಿಗಳವರ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳ ಮುಖಾಂತರ ಸಾಗಿಸಲಾಗುತ್ತದೆ ತದನಂತರ ಸಾಯಂಕಾಲ 7:00 ಪ್ರವಚನ ಮಹಾಮಂಗಲ ಕಾರ್ಯಕ್ರಮ ನೆರವೇರುತ್ತದೆ.

 ಈ ಕಾರ್ಯಕ್ರಮದ ಸಾನಿಧ್ಯ ಪರಮಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು ಹಿರೇಮಠ ಸಂಸ್ಥಾನ ಭಾಲ್ಕಿ ,ಅಧ್ಯಕ್ಷತೆ ಶ್ರೀ ಮ.ನಿ. ಪ್ರ.ಅಭಿನವ ಚನ್ನಬಸವ ಮಹಾಸ್ವಾಮಿಗಳು ವಿರಕ್ತಮಠ ಮಲ್ಲನಕೇರಿ ಜಿಲ್ಲಾ ವಿಜಯನಗರ, ನೇತೃತ್ವ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ದೇವಣಿ ಹಾಗೂ ಪೂಜ್ಯ ಶ್ರೀಷ.ಬ್ರ ಗುರುಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಗುರುನಂಜೇಶ್ವರ ಮಠ ಕೂಡಲ ಹಾವೇರಿ ಗುರುವಂದನಾ ಶ್ರೀ ಮ.ಘ.ಚ. ಅಭಿನವ ರುದ್ರಮುನಿ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಚಾಂಬೋಳ ಮುಖ್ಯ ಅತಿಥಿಗಳಾಗಿ ಶ್ರೀ ಶಿವರಾಜ್ ಎಂ ಬೋಳಶೆಟ್ಟಿ ಮತ್ತು ಶ್ರೀ ಭದ್ರಪ್ಪ ಜಿ ಹುಡಗೆ ನಿರೂಪಕರಾಗಿ ಶ್ರೀ ಪಂಚಾಕ್ಷರಿ ಶಾಸ್ತ್ರಿಗಳು ಹಿರೇಮಠ ಸಾ!!ಕದಮನಹಳ್ಳಿ ಗದಗ ಇವರು ನಡೆಸಿ ಕೊಡುತ್ತಾರೆ.ಮಹಾಪ್ರಸಾದ ಸೇವೆ ಶ್ರೀಮತಿ ಗೌರಮ್ಮ ಪ್ರಭುರಾವ ಪಾಟೀಲ್ ಸೋನಾಳ ವಹಿಸಿಕೊಂಡಿದ್ದಾರೆ ಹೀಗೆ ದಿನ ನಿತ್ಯದ ಕಾರ್ಯಕ್ರಮ ಜರುಗಲಿದೆ ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.