ಮಾಲಾ ಕಣ್ಣಿಗೆ ಶರಣರತ್ನ ಪ್ರಶಸ್ತಿ

ಮಾಲಾ ಕಣ್ಣಿಗೆ ಶರಣರತ್ನ ಪ್ರಶಸ್ತಿ
ಕಲಬುರಗಿ: ಪರಮ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಹವ್ಯಾಸಿ ಕಲಾ ಬಳಗದಿಂದ ನೀಡಲಾಗುವ ಶ್ರೀ ಶರಣರತ್ನ ಪ್ರಶಸ್ತಿಗೆ ಕಲಬುರ್ಗಿಯ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥೆ ಹಾಗೂ ಮಹಿಳಾಪರ ಚಿಂತಕಿ ಮಾಲಾ ಕಣ್ಣಿ ಆಯ್ಕೆಯಾಗಿದ್ದಾರೆ.
ಪ್ರತಿ ವರ್ಷ ನೀಡಲಾಗುವ ಈ ಗೌರವ ಪ್ರಶಸ್ತಿಗೆ 11 ಜನರನ್ನು ಆಯ್ಕೆ ಮಾಡಲಾಗಿದ್ದು, ಮಾಲಾ ಕಣ್ಣಿಯವರು ಅವರಲ್ಲೊಬ್ಬರಾಗಿದ್ದಾರೆ. ಮಾರ್ಚ್ 30ರಂದು ಸಾಯಂಕಾಲ 6:30 ಗಂಟೆಗೆ ಕಲಬುರ್ಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಈ ಪ್ರಶಸ್ತಿ ಸಮಾರಂಭದಲ್ಲಿ ಗಣ್ಯರು, ಕಲಾವಿದರು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ.