ಕಮಲನಗರದಲ್ಲಿ ರೈಲು ನಿಲುಗಡೆಗಾಗಿ ಸಂಸದ ಖಂಡ್ರೆಗೆ ಮನವಿ

ಕಮಲನಗರದಲ್ಲಿ ರೈಲು ನಿಲುಗಡೆಗಾಗಿ ಸಂಸದ ಖಂಡ್ರೆಗೆ ಮನವಿ

ಕಮಲನಗರದಲ್ಲಿ ರೈಲು ನಿಲುಗಡೆಗಾಗಿ ಸಂಸದ ಖಂಡ್ರೆಗೆ ಮನವಿ

 ಕಮಲನಗರ:ಪಟ್ಟಣದ ರೈಲು ನಿಲ್ದಾಣದಿಂದ ಹಾದು ಹೋಗುವ ಎಲ್ಲಾ ಎಕ್ಸಪ್ರೆಸ್ ರೈಲುಗಳು ನಿಲುಗಡೆಗೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಮಲನಗರ ತಾಲ್ಲೂಕ ಅಧ್ಯಕ್ಷ ಗೊವಿಂದರಾವ ತಾಂದಳೆ ನೇತೃತ್ವದಲ್ಲಿ ಮತ್ತು ಸಂಘಟನೆಯ ಪದಾಧಿಕಾರಿಗಳು ಸಂಸದರಾದ ಸಾಗರ ಈಶ್ವರ ಖಂಡ್ರೆ ಇವರಿಗೆ ಮನವಿ ಪತ್ರ ಸಲ್ಲಿಸಿದರು.

ಕಳೆದ ಹಲವಾರು ವರ್ಷಗಳಿಂದ ಕಮಲನಗರ ರೈಲು ನಿಲ್ದಾಣದಲ್ಲಿ ಎಲ್ಲಾ ತಡೆ ರಹಿತ ರೈಲುಗಳು ನಿಲುಗಡೆಗಾಗಿ ಸಂಸದರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೂ, ಮನವಿ ಪತ್ರ ಸಲ್ಲಿದರೂ, ಯಾವುದೇ ಪ್ರಯೋಜನವಾಗಿಲ್ಲ. ಎಕ್ಷಪ್ರೆಸ್ ರೈಲುಗಳು ಕಮಲನಗರ ರೈಲ್ವೇ ನಿಲ್ದಾ ಣದಲ್ಲಿ ನಿಲ್ಲದ ಕಾರಣ ಪ್ರಯಾಣಿಕರು ಭಾಲ್ಕಿ ಪಟ್ಟಣಕ್ಕೆ ಅಥವಾ ಮಹಾರಾಷ್ಟ್ರದ ಉದಗೀರ ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ನಿಲುಗಡೆ ಮಾಡಿದರೆ ವ್ಯಾಪಾರಿಗಳಿಗೆ,ಪ್ರಯಾಣಿಕರಿಗೆ, ವಿದ್ಯಾರ್ಥಿ ,ವಿದ್ಯಾರ್ಥಿನಿಯರಿಗೆ, ತುಂಬಾ ಅನುಕೂಲವಾಗುತ್ತದೆ ಎಂದು ಗೋವಿಂದ ತಾಂದಳೆ ಹೇಳಿದರು .

ರೈಲು ರೊಕೊ ಚಳುವಳಿ ಎಚ್ಚರಿಕೆ: ತಾ. ಸಹ.ಸಂ.ಅಮೂಲ ಸೂರ್ಯವಂಶಿ ಮಾತನಾಡಿ ಶಿರಡಿ ಹೋಗುವ ಮತ್ತು ಬರುವ ಒಂದು ತಿಂಗಳಿನಿಂದ ಬಂದ್ ಆಗಿವೆ.ಔರಾಂಗಾಬಾದನಿಂದ ಹೈದರಾಬಾದ್ ರೈಲು,ಆದರೆ ಕಮಲನಗರ ರೈಲು ನಿಲ್ದಾಣದಲ್ಲಿ ನಿಲ್ಲುತ್ತಿಲ್ಲ, ಇದಕ್ಕೆ ಈ ಎಲ್ಲಾ ರೈಲುಗಳು 15 ದಿವಸದ ಒಳಗೆ ನಿಲುಗಡೆ ಆಗಬೇಕು. ಇಲ್ಲವಾದಲ್ಲಿ ರೈಲು ರೊಕೊ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಸದರಾದ ಸಾಗರ ಖಂಡೆಯವರು ಮನವಿ ಪತ್ರ ಸ್ವೀಕರಿಸಿ, ರೈಲ್ವೇ ಇಲಾಖೆಯ ಅಧಿಕಾರಿಗಳಿಗೆ ಹಾಗೂ ರೈಲ್ವೇ ಸಚಿವರಿಂದ ಮಾಹಿತಿ ಪಡೆದು ಆದಷ್ಟು ಬೇಗ ಪ್ರಯಾಣಿಕರಿಗೆ ಅನೂಕೂಲವಾಗುವ ಉದ್ದೇಶಿದಿಂದ ಎಲ್ಲಾ ರೈಲುಗಳ ನಿಲುಗಡೆಗೆ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಸಾಯಿನಾಥ ಕಾಂಬಳೆ,, ಆಯುಬ ಖುರೇಷಿ, ಸಿಹಿಂದರ ತಾಂಬೊಳಯರ, ಕಲ್ಯಾಣರಾವ ಬಿರಾದಾರ, ಪ್ರಶಾಂತ ಗಾಯಕವಾಡ ಹಾಗೂ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.