ಮರಾಠಿ ನೆಲದಲ್ಲಿ ಕನ್ನಡದ ಸೊಬಗು: ಸ್ವಚ್ಛತೆ ಮತ್ತು ಸುಂದರತೆಗೆ ಜಿಲ್ಲಾ ಮಟ್ಟದ ಗೌರವ

ಮರಾಠಿ ನೆಲದಲ್ಲಿ ಕನ್ನಡದ ಸೊಬಗು: ಸ್ವಚ್ಛತೆ ಮತ್ತು ಸುಂದರತೆಗೆ ಜಿಲ್ಲಾ ಮಟ್ಟದ ಗೌರವ

ಮರಾಠಿ ನೆಲದಲ್ಲಿ ಕನ್ನಡದ ಸೊಬಗು: ಸ್ವಚ್ಛತೆ ಮತ್ತು ಸುಂದರತೆಗೆ ಜಿಲ್ಲಾ ಮಟ್ಟದ ಗೌರವ

ಮರಾಠಿ ನೆಲದಲ್ಲಿ ಕನ್ನಡದ ಕಂಪು

ಜಿಲ್ಲಾ ಮಟ್ಟದ ಸ್ವಚ್ಛ ಶಾಲೆ ಸುಂದರ ಶಾಲೆ ಪ್ರಶಸ್ತಿ ಗಿಟ್ಟಿಸಿದ ಗಡಿಭಾಗದ ಅಕ್ಕಲಕೋಟೆ ತಾಲೂಕಿನ ನಾಗಣಸೂರ ಸರಕಾರಿ ಕನ್ನಡ ಬಾಲಕಿಯರ ಶಾಲೆ

 ಸೊಲ್ಲಾಪುರ:ಮಹಾನೆಲದಲ್ಲಿ ಕನ್ನಡದ ಕಂಪು ಬೀರುತ್ತಾ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ನಾಗಣಸೂರ ಸರಕಾರಿ ಕನ್ನಡ ಬಾಲಕಿಯರ ಶಾಲೆ ಛತ್ರಪತಿ ಶಿವಾಜಿ ಸಾಂಸ್ಕೃತಿಕ ಮತ್ತು ಕ್ರೀಡಾ ಮಂಡಳಿ ಮರವಡೆ (ತಾ. ಮಂಗಳವೇಢೆ )ಯ ೨೫ ನೆಯ ವಾರ್ಷಿಕ ಸಂಸ್ಥಾಪನೆ ದಿನಾಚರಣೆಯ ನಿಮಿತ್ತವಾಗಿ ಪ್ರತಿ ವರ್ಷ ಕೊಡಮಾಡುವ ಜಿಲ್ಲಾ ಮಟ್ಟದ ಸ್ವಚ್ಛ ಶಾಲೆ ಸುಂದರ ಶಾಲೆ ಪ್ರಶಸ್ತಿಯನ್ನು ತನ್ನ ಮುಡಿಗೆ ಏರಿಸಿ ಮಹಾ ನೆಲದಲ್ಲಿ ಕನ್ನಡದ ಕಂಪನ್ನು ಚೆಲ್ಲಿದ್ದಾರೆ.

  ಮರವಡೆ (ತಾ.ಮಗಳವೇಢೆ ) ಲತಿಫಭಾಯಿ ಸಾಂಸ್ಕೃತಿಕ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಪ್ರಶಸ್ತಿ ವಿತರಣೆ ಸಮಾರಂಭದ ಅಧ್ಯಕ್ಷತೆ ಪ್ರೊ.ಶಿವಾಜಿ ಕಾಳು೦ಗೆ ವಹಿಸಿದ್ದರು ವೇದಿಕೆಯಲ್ಲಿ ಮಹಾರಾಷ್ಟ್ರದ ಪ್ರಸಿದ್ಧ ಕವಿ ಇಂದ್ರಜಿತ್ ಭಾಲೇರಾವ,ಛತ್ರಪತಿ ಪರಿವಾರದ ಮುಖ್ಯಸ್ಥ ಸುರೇಶ ಪವಾರ,ರಾಜನ ಸಾವಂತ,ರಂಗನಾಥ ಕಾಕಡೆ,ಜ್ಯೋತಿ ಕಲಬುರ್ಮೆ,ಪ್ರಸಿದ್ಧ ಚಿತ್ರಕಾರ ಅಮಿತ್ ಬೋರಖಡೆ,ಶಿಲ್ಪಕಾರ ರಾಹುಲ್ ಲೊಂಢೆ ಇದ್ದರು.

 ಸರಕಾರಿ ಕನ್ನಡ ಬಾಲಕಿಯರ ಶಾಲೆಯ ಮುಖ್ಯ ಗುರುಗಳು,ಶಿಕ್ಷಕರು ಕಳೆದ ಅನೇಕ ವರ್ಷಗಳಿಂದ ವಿಧ್ಯಾರ್ಥಿಗಳ ಸರ್ವಾಂಗೀಣ ವಿಕಾಸ ಹಾಗೂ ಶಾಲೆಯ ಸಮಗ್ರ ವಿಕಾಸ ಸಾಧಿಸುವ ಸಲುವಾಗಿ ಮುಖ್ಯಮಂತ್ರಿ ನನ್ನ ಶಾಲೆ ಸ್ವಚ್ಛ ಶಾಲೆ ಸುಂದರ ಶಾಲೆ,ನನ್ನ ಸಮೃದ್ಧ ಶಾಲೆ,ಜನರ ಸಹಭಾಗಿತ್ವದಲ್ಲಿ ಶಾಲೆಯ ಪ್ರಗತಿ,ಪ್ಲಾಸ್ಟಿಕ್ ಮುಕ್ತ ಶಾಲೆ,ವಿಧ್ಯಾರ್ಥಿ ವಿವಿಧ ಸ್ಪರ್ಧೆಗಳಲ್ಲಿ ಸಹಭಾಗ,ಕ್ರೀಡಾ ಸ್ಪರ್ಧೆಯಲ್ಲಿ ಸಹಭಾಗ,ಕಂಪ್ಯೂಟರ ಶಿಕ್ಷಣ,ವೃಕ್ಷ ಸಂವರ್ಧನೆ,ಶೈಕ್ಷಣಿಕ ಪ್ರವಾಸ,ಸಾಂಸ್ಕೃತಿಕ,ಸಾಹಿತ್ಯಿಕ ಚಟುವಟಿಕೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಗಳಿಸಿದ ಯಶಸ್ಸು ,ವಾರ್ಷಿಕ ಸ್ನೇಹ ಸಮ್ಮೇಳನ,ಶಾಲೆಯ ಮಾಜಿ ವಿಧ್ಯಾರ್ಥಿಗಳ ಸಹಭಾಗ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಮಾಡಿದ ಕಾರ್ಯವನ್ನು ಗುರುತಿಸಿ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿದ್ದಾರೆ.

ಪ್ರಶಸ್ತಿಗೆ ಭಾಜನರಾದ ಮುಖ್ಯ ಗುರುಗಳು ಶ್ರೀಶೈಲ ದೊಡಮನಿ,ಶಾಂತಾ ತೋಳನುರೆ,ಶರಣಪ್ಪ ಫುಲಾರಿ,ಲಕ್ಷ್ಮೀಕಾಂತ ತಳವಾರ,ರಾಜಶೇಖರ ಖಾನಾಪುರೆ,ರಾಜಶೇಖರ ಕುರ್ಲೇ,ರಾಜಕುಮಾರ ನರುಣೆ ಇವರನ್ನು ಸೊಲ್ಲಾಪುರ ಜಿಲ್ಲೆಯ ಸಿಇಓ ಕುಲದೀಪ ಜಂಗಮ, ಇಓ ಕಾದರ ಶೇಖ,ಬಿಇಓ ಪ್ರಶಾಂತ ಅರಬಾಳೆ, ಎಇಓ ಸೋಮಶೇಖರ ಸ್ವಾಮಿ, ರತಿಲಾಲ ಭೂಸೆ,ಕೇಂದ್ರ ಪ್ರಮುಖ ಶಿವಾಜಿ ಶಿಂದೆ,ಕೇಂದ್ರೀಯ ಮುಖ್ಯ ಗುರು ವಿದ್ಯಾಧರ ಗುರವ, ಶಾಲಾ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು,ಉಪಾಧ್ಯಕ್ಷರು ಸರ್ವ ಸದಸ್ಯರು, ಗ್ರಾಮಪಂಚಾಯತಿ ಅಧ್ಯಕ್ಷರು,ಉಪಾಧ್ಯಕ್ಷರು,ಎಲ್ಲಾ ಸದಸ್ಯರು ಬಸವರಾಜ ಸ್ವಾಮಿ,ಬಸವರಾಜ ಖಿಲಾರಿ, ಶಂಕರ ಅಜಗೊಂಡ,ರಾಜಶೇಖರ ಅಂಬರಾಣಿಕರ ,ಎಲ್ಲಾ ಮುಖ್ಯ ಗುರುಗಳು,ಶಿಕ್ಷಕರು ,ಪಾಲಕರು,ಗ್ರಾಮಸ್ಥರು ಅಭಿನಂದಿಸಿ ಶ್ಲಾಘಿಸಿದ್ದಾರೆ.

ಫೋಟೋ ಸಾಲು :-

ಜಿಲ್ಲಾ ಮಟ್ಟದ ಸ್ವಚ್ಛ ಶಾಲೆ ಸುಂದರ ಶಾಲೆ ಪ್ರಶಸ್ತಿ ಪ್ರಸಿದ್ಧ ಕವಿ ಇಂದ್ರಜಿತ್ ಭಾಲೇರಾವ ಇವರಿಂದ ಸ್ವೀಕರಿಸುತ್ತಿರುವಾಗ ನಾಗಣಸೂರ ಸರಕಾರಿ ಕನ್ನಡ ಬಾಲಕಿಯರ ಶಾಲೆಯ ಮುಖ್ಯ ಗುರುಗಳು,ಶಿಕ್ಷಕ ವೃಂದ ಹಾಗೂ ದೀಪಾಲಿ,ಸಾರಿಕಾ,ಮನುಜಾ,ಸಮೃದ್ಧಿ,ಅಂಬಿಕಾ..