ಕಲಬುರಗಿಯಲ್ಲಿ ಪ್ರಥಮ ಕಲ್ಯಾಣ ಕರ್ನಾಟಕ ಪತ್ರಕರ್ತರ ಸಮ್ಮೇಳನ ಭವ್ಯಾರಂಭ

ಕಲಬುರಗಿಯಲ್ಲಿ ಪ್ರಥಮ ಕಲ್ಯಾಣ ಕರ್ನಾಟಕ ಪತ್ರಕರ್ತರ ಸಮ್ಮೇಳನ ಭವ್ಯಾರಂಭ
ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಪ್ರಜಾ ಸಿದ್ದಿ ಕನ್ನಡ ದಿನಪತ್ರಿಕೆಯ 15 ನೇ ಸಂಭ್ರಮಾಚರಣೆ ಅಂಗವಾಗಿ ಕಲ್ಯಾಣ ಕರ್ನಾಟಕ ಪ್ರಥಮ ಪತ್ರಕರ್ತರ ಸಮ್ಮೇಳನ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮಕ್ಕೆ ಶಾಸಕರಾದ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿ, ಪತ್ರಕರ್ತರು ಸಮಾಜದ ಕಣ್ಣು, ಕಿವಿ ಎಂಬಂತೆ ನಿರಂತರ ಹೋರಾಟದ ಮೂಲಕ ಜನರ ಧ್ವನಿಯನ್ನು ಸರ್ಕಾರದವರೆಗೆ ತಲುಪಿಸುತ್ತಿದ್ದಾರೆ ಎಂದು ಹಿಗ್ಗಾಮುಗ್ಗವಾಗಿ ಪ್ರಶಂಸಿಸಿದರು.
ಸಮ್ಮೇಳನಾಧ್ಯಕ್ಷ ಡಾ. ನಿರಂಜನ್ ಸತ್ಯಂಪೇಟೆ ಅವರು ಭಾಷಣ ಮಾಡಿ, ಪತ್ರಕರ್ತರ ಪಾತ್ರ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಅವಿಭಾಜ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರಜಾ ಸಿದ್ದಿ ದಿನಪತ್ರಿಕೆಯ ಸಂಪಾದಕರಾದ ಶರಣಬಸಪ್ಪ ಸೂಗೂರ, ಹಿರಿಯ ಪತ್ರಕರ್ತರಾದ ಪ್ರಭಾಕರ ಜೋಶಿ, ಮಹಿಪಾಲ ರೆಡ್ಡಿ ಮುನ್ನೂರ, ಸುರೇಶ ಬಡಿಗೇರ, ಬಾಬುರಾವ ಕೋಬಾಳ , ಕಲ್ಯಾಣ ಕರ್ನಾಟಕ ಸಂಘದ ಅಧ್ಯಕ್ಷ ಗುರುರಾಜ ಕುಲಕರ್ಣಿ, ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಪತ್ರಿಕಾ ಹಾಗೂ ಸಾಮಾಜಿಕ ಕ್ಷೇತ್ರದ ಮುಖಂಡರಾದ ಹಣಮಂತ ಹಳ್ಳಿಕೇರಿ, ವಿಜಯಕುಮಾರ ತೇಗಲತಿಪ್ಪಿ, ಗವಿಸಿದ್ದಪ್ಪ ಪಾಟೀಲ, ಡಾ. ಚಿದಾನಂದ ಕುಡ್ಡನ, ಡಾ. ರಾಜಕುಮಾರ ಮಾಳಗೆ, ಡಾ. ಸಿದ್ದಪ್ಪ ಹೋಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಜಾ ಸಿದ್ದಿ ಪತ್ರಿಕೆಯ 15 ವರ್ಷಗಳ ಪಯಣವನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿ ಕನ್ನಡ ಪತ್ರಿಕೋದ್ಯಮವನ್ನು ಉತ್ತೇಜಿಸಲು ವಿವಿಧ ಅಭಿಯಾನಗಳನ್ನು ಕೈಗೊಳ್ಳುವುದಾಗಿ ಪ್ರಕಟಿಸಲಾಯಿತು.