ವೃದ್ಧಾಶ್ರಮದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣೆ

ವೃದ್ಧಾಶ್ರಮದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣೆ
ಕಲಬುರಗಿ : ನಗರದಲ್ಲಿ ವಿಶ್ವ ಆಪ್ಟೋಮೇಟ್ರಿ ದಿನದ ಅಂಗವಾಗಿ ನವ ಭಾರತ ನೇತ್ರ ತಪಾಸಕರ ಹಾಗೂ ಕನ್ನಡಕ ಮಳಿಗೆಗಳ ಮಾಲಿಕರ ಸಂಘದ ಅಧ್ಯಕ್ಷ ಆನಂದ ವಾರಿಕ ಅವರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಭಾಗ್ಯಜ್ಯೋತಿ ವೃದ್ಧಾಶ್ರಮದ 20 ವೃದ್ಧ ಸದಸ್ಯರಿಗೆ ಮಹಾದೇವಿ ತಾಯಿ ವೃದ್ಧಾಶ್ರಮದ 25 ವೃದ್ಧ ಸದಸ್ಯರಿಗೆ ನೆಮ್ಮದಿ ವೃದ್ಧಾಶ್ರಮದ 25 ವೃದ್ಧ ಸದಸ್ಯರಿಗೆ ಉಚಿತ ಕಣ್ಣಿನ ತಪಾಸಣೆ ಮಾಡಿ ಕನ್ನಡಕ ವಿತರಿಸಲಾಯಿತು 13 ಶಿಬಿರಾರ್ಥಿಗಳಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ಕಳುಹಿಸಲಾಯಿತು ಇದೆ ಸಂದರ್ಭದಲ್ಲಿ ವೃದ್ಧಾಶ್ರಮದ ಗಂಗಮ್ಮ ಗುರಗೋಳ ,ಸಾಗರ ರಾಠೋಡ ಸಂಘದ ಪ್ರಧಾನ ಕಾರ್ಯದರ್ಶಿ ಶರದ ಕುಲಕರ್ಣಿ ಚಂದ್ರಶೇಖರ ಸ್ವಾಮಿ ಗಿರಿಧರ ಕುಲಕರ್ಣಿ ಪ್ರಭು ಮೂಲಿಮನಿ ಅಣವೀರ ಗದಗಿ ಭೀಮಾಶಂಕರ ದಶರಥ ಯಾದವ್ ಈರಣ್ಣ ಜಳಕೋಟಿ ಈರಯ್ಯ ಮಠಪತಿ ಕವಿತಾ ಶರಣು ರಾಜು ಉಪಸ್ಥಿತರಿದ್ದರು
.