ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ - ಬಸನಗೌಡ ಮಾಲಿಪಾಟೀಲ್

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ - ಬಸನಗೌಡ ಮಾಲಿಪಾಟೀಲ್

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ - ಬಸನಗೌಡ ಮಾಲಿಪಾಟೀಲ್

ಶಹಾಪುರ : ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಬಹಳ ಮುಖ್ಯ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಮಾಲಿ ಪಾಟೀಲ್ ಹೇಳಿದರು.

ಸಗರದ ಶ್ರೀ ಚರಬಸವೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 36 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು, ಕೇವಲ ಅಂಕಗಳಿಗಾಗಿ ಕಷ್ಟಪಟ್ಟು ಓದುವುದಕ್ಕಿಂತ ಜ್ಞಾನಾರ್ಜನೆಗಾಗಿ ಇಷ್ಟಪಟ್ಟು ಓದಿದಾಗ ಮಾತ್ರ ವಿದ್ಯಾರ್ಥಿಗಳು ತಮ್ಮ ಜೀವನ ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು. 

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗಣ್ಣ ಪಡಶೆಟ್ಟಿ ಮಾತನಾಡಿ ನಾವು ಎಷ್ಟೇ ಜ್ಞಾನ ಪಡೆದರು ಗ್ರಾಮೀಣ ಸೊಗಡಿನ ಸಂಸ್ಕೃತಿ ಹಾಗೂ ಹೆತ್ತ ತಂದೆ ತಾಯಿ,ಕಲಿಸಿದ ಗುರುಗಳನ್ನ ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಮರುಳ ಮಹಾಂತ ಶಿವಾಚಾರ್ಯರು ಮಾತನಾಡಿ ಇಂದಿನ ಮಕ್ಕಳು ಅತಿಯಾಗಿ ಮೊಬೈಲ್ ಬಳಸುವುದರಿಂದ ಮಾನವೀಯ ಮೌಲ್ಯಗಳು ಕುಸಿಯುವುದರ ಜೊತೆಗೆ ಮಾನವ ಕುಲಕ್ಕೆ ಬಹುದೊಡ್ಡ ಪೆಟ್ಟು ಬೀಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು,

ಸಂಸ್ಥೆಯ ಮುಖ್ಯ ಗುರುಗಳಾದ ಚಂದಣ್ಣ ಎಸ್,ಚೌಡಗುಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆ ಮೇಲೆ ಸಿ, ಆರ್,ಪಿ,ಮೈಲಾರಪ್ಪ,ಎನ್,ಪಿ,ಎಸ್, ಜಿಲ್ಲಾಧ್ಯಕ್ಷ ರಾಮನಗೌಡ ಖಾನಾಪುರ,ಯಾದಗಿರಿ ಜಿಲ್ಲಾ ಅನುದಾನಿತ ಶಿಕ್ಷಕರ ನೌಕರ ಸಂಘದ ಜಿಲ್ಲಾಧ್ಯಕ್ಷ ಶಿವು ಪಾಟೀಲ್,ನಿವೃತ್ತ ಇಂಜಿನಿಯರ್ ನಿಂಗಣ್ಣ ಮುದ್ದಾ,ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಬಸವರಾಜ ಕನಗುಂಡ,ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿಡ್ಡಪ್ಪ ನಂದಿಕೋಲ,ಗ್ರಾಮ ಪಂಚಾಯತಿ ಸದಸ್ಯ ಮಲ್ಲಣ್ಣವಮ್ಮಾ,ಹಿರಿಯ ಪತ್ರಕರ್ತರಾದ ನಾರಾಯಣಾಚಾರ್ಯ ಸಗರ, ಶಹಪುರ ಚರಬಸವೇಶ್ವರ ಪ್ರೌಢಶಾಲೆಯ ಮುಖ್ಯ ಗುರುಗಳಾದ ತಿಪ್ಪಣ್ಣ ಜಮಾದಾರ, ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ದೇವೇಂದ್ರಪ್ಪ ಹಡಪದ,ವಿ.ಎಸ್.ಎಸ್.ಎನ್ ಮಾಜಿ ಅಧ್ಯಕ್ಷ ಚನ್ನಬಸಪ್ಪ ಜಾಯಿ, ಯುವ ಪತ್ರಕರ್ತ ಬಸವರಾಜ ಶಿಣ್ಣೂರ,ತಾಲೂಕ ಅಧ್ಯಕ್ಷ ಲಕ್ಕಪ್ಪ ಮಲ್ಲಾಬಾದ ಸೇರಿದಂತೆ ಅನೇಕರು ವೇದಿಕೆ ಮೇಲೆ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಈ ಶಾಲೆಯಲ್ಲಿ ಕಲಿತು ಪ್ರಸ್ತುತ ವಿವಿಧ ಕ್ಷೇತ್ರಗಳಲ್ಲಿ ಹುದ್ದೆ ಅಲಂಕರಿಸಿದ ಈರಣ್ಣ ಅರಿಕೇರಿ,ಮಲ್ಲಿಕಾರ್ಜುನ್ ಸಜ್ಜನ್, ಗಿರೀಶ್ ಎಸ್,ಸಿದ್ರಾ,ನಿರ್ಮಲಾ ಬಾಳಿ,ಸಂಗಮೇಶ ಕನಗುಂಡ, ಸೇರಿದಂತೆ ಅನೇಕ ಸಾಧಕರಿಗೆ ವಿಶೇಷವಾಗಿ ಸನ್ಮಾನ ಹಮ್ಮಿಕೊಳ್ಳಲಾಗಿತ್ತು,ನಂತರ ಮಕ್ಕಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿನಿ ಅನ್ನಪೂರ್ಣ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಬಸವರಾಜ್ ಎಂ ದೊರೆ ನಿರೂಪಿಸಿದರು,ಚಂದ್ರಶೇಖರ್ ಸಾಹು ಸ್ವಾಗತಿಸಿದರು,ಅಮರಮ್ಮ ಪಾಟೀಲ್ ವಾರ್ಷಿಕ ವರದಿ ವಾಚಿಸಿದರು,ನಿಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು, ವಂದಿಸಿದರು