ಶ್ರೀ ಮಂಜುನಾಥ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯ ಗಣರಾಜ್ಯೋತ್ಸವ

ಶ್ರೀ ಮಂಜುನಾಥ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯ ಗಣರಾಜ್ಯೋತ್ಸವ

ಶ್ರೀ ಮಂಜುನಾಥ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯ ಗಣರಾಜ್ಯೋತ್ಸವ

ಗದಗ ಜಿಲ್ಲೆ, ಗಜೇಂದ್ರಗಡ ತಾಲೂಕು ನರೇಗಲ್ಲ ಪಟ್ಟಣದ ಪ್ರಖ್ಯಾತ ಶಿಕ್ಷಣ ಸಂಸ್ಥೆಯಾದ ಶ್ರೀ ಮಂಜುನಾಥ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬ್ರಹ್ಮಕುಮಾರಿ ಸವಿತಕ್ಕನವರು ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಅಶೋಕ ಅಪ್ಪಣವರ ವಹಿಸಿದ್ದರು.

ಅತಿಥಿಗಳಾಗಿ,ಶ್ರೀಮತಿ ಶೋಭಾ ಉಪಾಧ್ಯ, ಶ್ರೀ ರೋಶನ್ ಬಿ. ಅಬಾಜಿನಾಯ್ಕರ್ ಭಾಗವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಚನ್ನಪ್ಪಗೌಡ್ರ,ಶ್ರೀಮತಿ ಸವಿತಾ ಮುಧೋಳ ಉಪಸ್ಥಿತರಿದ್ದರು.

ಬ್ರಹ್ಮಕುಮಾರಿ ಸವಿತಕ್ಕನವರು ಮಾತನಾಡಿ, ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಜಾತಿ, ಮತ, ಪಂಥಗಳ ನಡುವೆಯೂ ‘ನಾವು ಭಾರತೀಯರು’ ಎಂಬ ಧ್ಯೇಯ ವಾಕ್ಯ ನಮ್ಮೆಲ್ಲರ ಏಕತೆಗಾಗಿ ಪ್ರತಿಬಿಂಬಿಸುತ್ತದೆ. ಶಾಂತಿ, ನೆಮ್ಮದಿ ಹಾಗೂ ಸಮೃದ್ಧ ಜೀವನಕ್ಕಾಗಿ ಪ್ರೀತಿ, ಸಹಕಾರ ಮತ್ತು ಭಗವಂತನ ಕೃಪೆ ಅಗತ್ಯ ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣದಲ್ಲಿ ಶ್ರೀಮತಿ ನೇತ್ರಾವತಿ ಅಶೋಕ ಅಪ್ಪಣವರ ಅವರು, ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಮಕ್ಕಳಲ್ಲಿ ಸಂಸ್ಕಾರ, ಶಿಕ್ಷಣ ಹಾಗೂ ಶಿಸ್ತು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಇಂದಿನ ಮಕ್ಕಳು ನಾಳಿನ ಭಾರತದ ಪ್ರಜೆಗಳು. ತಮ್ಮ ಭವಿಷ್ಯವನ್ನು ರೂಪಿಸುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಶಾಲೆಯ ಶಿಕ್ಷಕ–ಶಿಕ್ಷಕಿಯರು ಪಠ್ಯ ಶಿಕ್ಷಣದ ಜೊತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ನವೋದಯ, ಮೊರಾರ್ಜಿ ದೇಸಾಯಿ ಹಾಗೂ ಆದರ್ಶ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸುಜಾತ ಒಂಕಲಕುಂಟಿ ಗುರುಮಾತೆಯರು, ಪ್ರಾರ್ಥನೆಯನ್ನು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಶಿಕ್ಷಕರು,ಸ್ವಾಗತವನ್ನು ಶ್ರೀಮತಿ ಸ್ನೇಹಲತಾ ಸಾಲಿಮಠ ಗುರುಮಾತೆಯರು ಹಾಗೂ ವಂದನಾರ್ಪಣೆಯನ್ನು ಶ್ರೀಮತಿ ವೀಣಾ ವೀರೇಶ ಜಂತ್ಲಿ ಗುರುಮಾತೆಯರು ನೆರವೇರಿಸಿದರು.

ಮಕ್ಕಳಿಂದ ಭಾಷಣ, ದೇಶಭಕ್ತಿ ಗೀತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದವು.

ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಗುರುಮಾತೆಯರು ಹಾಗೂ ಪಾಲಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.

ವರದಿ : ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ, ಗದಗ