ಸಾಂಪ್ರದಾಯಿಕ ಬಟ್ಟೆಗಳು ಸಾಂಸ್ಕೃತಿಕ ಪರಂಪರೆಯ ಸಾರವನ್ನು ಸಾಕಾರಗೊಳಿಸುತ್ತವೆ ನಾಗಣ್ಣ ಘಂಟಿ

ಸಾಂಪ್ರದಾಯಿಕ ಬಟ್ಟೆಗಳು ಸಾಂಸ್ಕೃತಿಕ ಪರಂಪರೆಯ ಸಾರವನ್ನು ಸಾಕಾರಗೊಳಿಸುತ್ತವೆ ನಾಗಣ್ಣ ಘಂಟಿ

ಸಾಂಪ್ರದಾಯಿಕ ಬಟ್ಟೆಗಳು ಸಾಂಸ್ಕೃತಿಕ ಪರಂಪರೆಯ ಸಾರವನ್ನು ಸಾಕಾರಗೊಳಿಸುತ್ತವೆ ನಾಗಣ್ಣ ಘಂಟಿ 

ಸಾಂಪ್ರದಾಯಿಕ ಬಟ್ಟೆಗಳು ಸಾಂಸ್ಕೃತಿಕ ಪರಂಪರೆಯ ಸಾರವನ್ನು ಸಾಕಾರಗೊಳಿಸುತ್ತವೆ, ಇದು ಸಂಪ್ರದಾಯಗಳು, ನಂಬಿಕೆಗಳು ಮತ್ತು ತಲೆಮಾರುಗಳ ಮೂಲಕ ಹಾದುಹೋಗುವ ಮೌಲ್ಯಗಳ ಸ್ಪಷ್ಟವಾದ ಅಭಿವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರಪಂಚದಾದ್ಯಂತ, ಭಾರತದಿಂದ ಆಫ್ರಿಕಾದವರೆಗೆ, ಯುರೋಪ್‌ನಿಂದ ಜಪಾನ್‌ವರೆಗೆ, ಸಾಂಪ್ರದಾಯಿಕ ಉಡುಪುಗಳು ಆಳವಾದ ಮಹತ್ವವನ್ನು ಹೊಂದಿವೆ, ಇದು ಮಾನವ ಇತಿಹಾಸ ಮತ್ತು ಗುರುತಿನ ಶ್ರೀಮಂತ ವಸ್ತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ವಿಜ್ಞಾನ, ಕಲಾ, ವಾಣಿಜ್ಯ, ಕಾನೂನು ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಸಂಚಾಲಕರಾದ ನಾಗಣ್ಣ ಘಂಟಿ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಭಾರತೀಯ ಸಾಂಸ್ಕೃತಿಕ ಉಡುಗೆ ತೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಭಾರತದಲ್ಲಿ, ಸೀರೆಯು ಸ್ತ್ರೀತ್ವ ಮತ್ತು ಅನುಗ್ರಹದ ಶಾಶ್ವತ ಸಂಕೇತವಾಗಿದೆ. ಈ ಸಾಂಪ್ರದಾಯಿಕ ಉಡುಪು, ಭಾರತೀಯ ಸಂಸ್ಕೃತಿಯ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ಉತ್ತರ ಪ್ರದೇಶದ ಮಹಿಳೆಯರಿಗೆ ಬನಾರಸಿ ರೇಷ್ಮೆ ಸೀರೆಯಿಂದ ತಮಿಳುನಾಡಿನ ರೋಮಾಂಚಕ ಕಂಜೀವರಂ ರೇಷ್ಮೆ ಸೀರೆಯವರೆಗೆ , ಪ್ರತಿಯೊಂದು ಶೈಲಿಯು ಸಂಪ್ರದಾಯ, ಕರಕುಶಲತೆ ಮತ್ತು ಪ್ರಾದೇಶಿಕ ಗುರುತಿನ ಕಥೆಯನ್ನು ಹೇಳುತ್ತದೆ ಎಂದು ಹೇಳಿದರು 

ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಅನೀಲಕುಮಾರ ಮರಗೋಳ ಮಾತನಾಡಿ ಭಾರತದ ವಿಶಾಲ ಮತ್ತು ವೈವಿಧ್ಯಮಯ ಖಂಡದಾದ್ಯಂತ, ಸಾಂಪ್ರದಾಯಿಕ ಉಡುಪುಗಳು ಸಂಸ್ಕೃತಿಗಳು, ಭಾಷೆಗಳು ಮತ್ತು ಸಾಂಪ್ರದಾಯಿಕ ಬಟ್ಟೆಗಳ ಶ್ರೀಮಂತ ವಸ್ತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ ರೋಹಿಣಿ ಕುಮಾರ್ ಹಿಳ್ಳಿ ಮಾತನಾಡಿ ಭಾರತದಲ್ಲಿ ಹಲವಾರು ಧರ್ಮ ಭಾಷೆ ಜನಾಂಗಗಳು ಇದ್ದರೂ ಸಹ ನಮ್ಮ ಭಾರತದ ವಿಶೇಷವೇನೆಂದರೆ ವೈವಿಧ್ಯತೆಯಲ್ಲಿ ಏಕತೆ. ಧರ್ಮ ಸಹಿಷ್ಣತೆ ಇದು ನಮ್ಮ ಭಾರತದ ಹೆಮ್ಮೆಯ ಸಂಸ್ಕೃತಿ. ಹಲವಾರು ಧರ್ಮ ಜನಾಂಗಗಳ ರೀತಿ-ನೀತಿ, ವಿನ್ಯಾಸ, ಆಹಾರ, ಉಡುಪು ಭಿನ್ನ-ಭಿನ್ನವಾಗಿದ್ದರು ವೈವಿಧ್ಯತೆಯಲ್ಲಿ ಏಕತೆ ಕಾಯ್ದುಕೊಂಡು ಹೋಗುವುದೇ ನಮ್ಮ ಭಾರತೀಯ ಸಂಸ್ಕೃತಿಯ ವಿಶೇಷತೆ ಎಂದು ಹೇಳಿದರು 

ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಶಿಲ್ಪಾ ಅಲ್ಲದ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಾಲೇಜಿನ ಸಾಂಸ್ಕೃತಿಕ ಸಂಚಾಲಕರಾದ ಡಾ ಮೈತ್ರಾದೇವಿ ಹಳಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕರಾದ

ಪ್ರಿಯಾಂಕ ಚವಾಣ್ ನಿರೂಪಿಸಿದರು ಮತ್ತು ಶ್ರೀಮತಿ ರೂಪಾಲಿ ಭೀಮಳ್ಳಿ ವಂದಿಸಿದರು. ವಿಧ್ಯಾರ್ಥಿನಿ ನಾಗರತ್ನ ಬಿ ಪ್ರಾರ್ಥಿಸಿದರು