ಗುಲ್ಬರ್ಗ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಸಂಘದಿಂದ ಅನಿರ್ದಿಷ್ಠಾವಧಿ ಸತ್ಯಾಗ್ರಹ..
ಗುಲ್ಬರ್ಗ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಸಂಘದಿಂದ ಅನಿರ್ದಿಷ್ಠಾವಧಿ ಸತ್ಯಾಗ್ರಹ..
ಯುಜಿಸಿ ನಿಯಮದಂತೆ ವೇತನ ನೀಡಿ
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿಯಂತೆ ತಿಂಗಳಿಗೆ ಕನಿಷ್ಠ ೫೦ ಸಾವಿರ ರೂ ವೇತನ ನೀಡಬೇಕು ಎಂದು ತರಗತಿಗಳನ್ನು ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ವಿಶ್ವವಿದ್ಯಾಲಯದ ಕಾರ್ಯಸೌಧದ ಎದುರು ಕುಲಪತಿಗಳು, ಕುಲಸಚಿವರ ವಿರುದ್ಧ ಘೋಷಣೆ ಕೂಗಿ ಬುಧವಾರ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಯುಜಿಸಿ ನಿಯಮಾವಳಿ ಪ್ರಕಾರ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಯುಜಿಸಿ ನಿಯದಂತೆ ಗಂಟೆಗೆ ೧೫೦೦ ರಂತೆ ಗರಿಷ್ಠ ತಿಂಗಳಿಗೆ ೫೦ ಸಾವಿರ ರೂ. ವೇತನ ನೀಡುತ್ತಿಲ್ಲ. ಪ್ರವೇಶ ಮತ್ತು ಪರೀಕ್ಷಾ ಪ್ರಕ್ರಿಯೆಯಲ್ಲಿಯೂ ದುಡಿಸಿಕೊಂಡು ವರ್ಷದ ೧೨ ತಿಂಗಳು ವೇತನ ನೀಡದೆ ಕೇವಲ ೬ ರಿಂದ ೭ ತಿಂಗಳು ಮಾತ್ರವೇ ವೇತನ ನೀಡಲಾಗುತ್ತಿದೆ. ಉಳಿದ ೫ ರಿಂದ ೬ ತಿಗಳು ವೇತನವಿಲ್ಲದೆ ಅತಿಥಿ ಉಪನ್ಯಾಸಕರು ಬಾರಿ ಸಂಕಷ್ಠ ಎದುರಿಸುವ ಪರಿಸ್ಥಿತಿ ಎದುರಾಗಿದೆ.
ಅತಿಥಿ ಉಪನ್ಯಾಸಕರು ಪ್ರತಿವರ್ಷ ನ್ಯಾತಯುತ ಬೇಡಿಕೆಗಳನ್ನು ಕುಲಪತಿ, ಕುಲಸಚಿವರು ಹಾಗೂ ಅಧಿಕಾರಿಗಳ ಮುಂದೆ ಮನವಿ ಮಾಡಿದರೆ ನಯವಾಗಿ ಮಾತನಾಡಿ ವಿಳಂಬ ನೀತಿ ಅನುಸರಿಸಿ ಅತಿಥಿ ಉಪನ್ಯಾಸಕರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಶೈಕ್ಷಣಿಕ ವರ್ಷದ ವೇಳಾಪಟ್ಟಿ ನಿಯಮ ಹಾಗೂ ಪರೀಕ್ಷೆ ಮತ್ತು ಪ್ರವೇಶ ಅವಧಿಯಲ್ಲೂ ದುಡಿಸಿಕೊಂಡು ವೇತನ ನೀಡುತ್ತಿಲ್ಲ.
ಅತಿಥಿ ಉಪನ್ಯಾಸಕರಿಗೆ ಆಗುತ್ತಿರುವ ಅನ್ಯಾಯ ಹಾಗೂ ವೇತನ ಬಿಡುಗಡೆಯ ವಿಳಂಬ ನೀತಿಯ ಬಗೆ ಕುಲಪತಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ. ಘಟಿಕೋತ್ಸವದಂದು ಕಪ್ಪು ಬಟ್ಟೆ ಪ್ರದರ್ಶಿಸಿ ರಾಜ್ಯಪಾಲರ ಎದುರು ನ್ಯಾಯ ಒದಗಿಸುವಂತೆ ಪ್ರತಿಭಟಿಸುತ್ತೇವೆ ಎಂದು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಅರುಣಕುಮಾರ ಕುರ್ನೆ ಎಚ್ಚರಿಸಿದರು.