ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ' ಹರಿದಾಸ ಸಾಹಿತ್ಯ ಸುಧಾಕರ 'ಬಿರುದು ಪ್ರದಾನ

ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ' ಹರಿದಾಸ ಸಾಹಿತ್ಯ ಸುಧಾಕರ 'ಬಿರುದು ಪ್ರದಾನ

ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ' ಹರಿದಾಸ ಸಾಹಿತ್ಯ ಸುಧಾಕರ 'ಬಿರುದು ಪ್ರದಾನ

ಬೆಂಗಳೂರು ಶ್ರೀನಗರ ರಾಯರ ಮಠದಲ್ಲಿ ಪರಮ ಪೂಜ್ಯ ಶ್ರೀ ವಿದ್ಯಾ ವಿಜಯ ತೀರ್ಥ ಶ್ರೀಪಾದರು ನಡೆಸಿದ ಶ್ರೀ ವ್ಯಾಸರಾಜಗುರು ಸಾರ್ವಭೌಮರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಉತ್ತರಾಧನೆಯ ದಿನ ಬಾಳೆಗಾರು ಮಠದ ಪೂಜ್ಯ ಶ್ರೀ ಅಕ್ಷೋಭ್ಯ ರಾಮ ಪ್ರಿಯ ತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಹಲವು ವಿದ್ವಜ್ಜನರ ಸಮ್ಮುಖದಲ್ಲಿ ಶ್ರೀಮಠದ ಶಿಷ್ಯರಾದ ಅಂಕಣಕಾರ,ಪ್ರಣವ ಮೀಡಿಯಾ ಹೌಸ್ ಕಾರ್ಯನಿರ್ವಾಹಕ, ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರ ಅನನ್ಯ ಸಾರಸ್ವತ ಸೇವೆಯನ್ನು ಗುರುತಿಸಿ ಉತ್ತರಾಧಿಕಾರಿಗಳು ಶ್ರೀವ್ಯಾಸರಾಜ ಮಠ ಸೋಸಲೆಯ ಶ್ರೀಗಳವರು' ಹರಿದಾಸ ಸಾಹಿತ್ಯ ಸುಧಾಕರ ' ಎಂಬ ಉಪಾಧಿಯನ್ನಿತ್ತು ಅನುಗ್ರಹಿಸಿದರು.

 ತಿರುಮಲಾಧೀಶ ಶ್ರೀ ಶ್ರೀನಿವಾಸನ ಪರಮಾನುಗ್ರಹ, ಶ್ರೀ ಸ್ವಾಮಿಯನ್ನು ಪೂಜಿಸಿದ ಶ್ರೀ ವ್ಯಾಸರಾಜರ ಆಶೀರ್ವಾದ, ಆ ಪರಂಪರೆಯಲ್ಲಿ ಬಂದಂತಹ ಶ್ರೀ ಗೋವಿಂದ ಒಡೆಯರ ಮತ್ತು ಶ್ರೀ ರಾಯರ ಮಠದ ಶ್ರೀ ಸುಯತೀoದ್ರ ತೀರ್ಥ ಶ್ರೀಪಾದರ ಆರಾಧನಾ ಪರ್ವಕಾಲದಲ್ಲಿ ಈ 50ನೇ ಪ್ರಶಸ್ತಿ ದೊರೆತಿರುವುದು ನನ್ನ ಪುಣ್ಯ ವಿಶೇಷವೆಂದೇ ಭಾವಿಸುತ್ತೇನೆ ಎಂದು ಪ್ರಶಸ್ತಿ ಸ್ವೀಕರಿಸಿದ ನಂತರ ತಿಳಿಸಿದರು.