ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಕಲಬುರಗಿ ರೈತರ ಸಂಘ ನಿಯೋಗ ಭೇಟಿ

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಕಲಬುರಗಿ ರೈತರ ಸಂಘ ನಿಯೋಗ ಭೇಟಿ

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಕಲಬುರಗಿ ರೈತರ ಸಂಘ ನಿಯೋಗ ಭೇಟಿ 

ಕಲಬುರಗಿ ಸಚಿವರು ಸ್ಪಂದಿಸದ್ದಕ್ಕೆ ರೈತ ಮುಖಂಡರು ಅಸಮಾಧಾನ 

ಬೆಂಗಳೂರು : ಮಾ,20, ಕಲಬುರಗಿ ಜಿಲ್ಲೆ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರಕ್ಕಾಗಿ ನಿಯೋಗ ಬೆಂಗಳೂರು ನಗರಕ್ಕೆ ಆಗಮಿಸಿದರು,ಕಲಬುರ್ಗಿ ಜಿಲ್ಲೆ ರೈತ ಸಮಿತಿಯವರನ್ನು   ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲರು   ರೈತರ ಸಂಘದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿಸಿ ,ತೋಗರಿ ನೆಟೆ ರೋಗ ಪರಿಹಾರ ಕುರಿತು ಮಾಹಿತಿ ನೀಡಿದರು.ರೈತ ನಿಯೋಗ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿತು. ಅಧಿವೇಶನ ಮುಗಿದ ನಂತರ ತೊಗರಿ ನೆಟೆ ಪರಿಹಾರ ಸಂಬಂಧ ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ,ಎಂದು ಭರವಸೆ ನೀಡಿದರು.

ಅಲ್ಲದೆ, ಶಶಿಲ್ ಜಿ. ನಮೋಶಿ, ಎನ್. ರವಿ ಕುಮಾರ್,ತಿಪ್ಪಣಪ್ಪ ಕಮಕನೂರ ,ಮತ್ತಿಮಡು ಮತ್ತು ಸಚಿವ ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರೈತರ ನಿಯೋಗವು ಭೇಟಿಯಾಗಿ ತೊಗರಿ ಬೆಳೆಗಾರರ ಸಂಕಷ್ಟಗಳ ಕುರಿತು ಮನವಿ ಸಲ್ಲಿಸಿತು.

ಈ ನಡುವೆ, ಕಲಬುರಗಿಯಲ್ಲಿ ಮೂರು ದಿನಗಳ ಕಾಲ ಎತ್ತು ಬಂಡಿ ಟ್ಯಾಕ್ಟರ್ ಸೇರಿದಂತೆ ನಿರಂತರ  ಹೋರಾಟ ನಡೆಸಿದ ರೈತರ ಸಮಸ್ಯೆಗಳನ್ನು ಮುಖ್ಯಮಂತ್ರಿಯ ಗಮನಕ್ಕೆ ತರಲಾಗದಿರುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ  ಅವರನ್ನು ರೈತ ನಿಯೋಗ  ಖಂಡಿಸಿತು .ಬೆಂಗಳೂರಿಗೆ ತೆರಳಿದ ರೈತರ ನಿಯೋಗವನ್ನು ಸರ್ಕಾರವು ನಿರ್ಲಕ್ಷ್ಯದಿಂದ ನೋಡಿದ ಹಿನ್ನೆಲೆಯಲ್ಲಿ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಕಲಬುರಗಿ ಜಿಲ್ಲಾ ರೈತ ಹೋರಾಟ ಸಮಿತಿಯ ಸದಸ್ಯರಾದ ಭೀಮ ಶೆಟ್ಟಿ ಮುಕ್ಕಾ, ಅವ್ವಣ್ಣ ಮ್ಯಾಕೇರಿ , ದಯಾನಂದ ಪಾಟೀಲ, ಬಸವರಾಜ ಇಂಗಿನ,ಮಲ್ಲಣ್ಣ ಕುಲಕರ್ಣಿ ಕೋಳಕೂರ,ಗಿರೇಪ್ಪಗೌಡ ಪಾಟೀಲ, ಶಿವಲಿಂಗಪ್ಪ ಟೆಂಗಳಿ, ಮಲ್ಲಿನಾಥ ಕೊಳ್ಳೂರ ಮೇಳಕುಂದಾ, ಮಹೇಶ ಪಾಟೀಲ,ಕುಶಾಲದೇವ ಪಾಟೀಲ, ಮಲ್ಲಿಕಾರ್ಜುನ ಸೀತನೂರ, ಬಸವರಾಜ ಪಾಟೀಲ,ರಾಜು ಜೈನ, ಸುಧೀರ್ ಉಪಾಧ್ಯಾಯ ಸೇರಿದಂತೆ ಅನೇಕ ರೈತರು ಇದ್ದರು 

-ಕಲಬುರಗಿ ಪ್ರತಿನಿಧಿ

ಸಚಿವ ಈಶ್ವರ್ ಕಂಡ್ರೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು