ಜಿಲ್ಲೆಯ ಐತಿಹಾಸಿಕ‌ ಸ್ಮಾರಕ‌ಗಳ ಸಂರಕ್ಷಣೆಗೆ ಡಿ.ಸಿ. ಕರೆ

ಜಿಲ್ಲೆಯ ಐತಿಹಾಸಿಕ‌ ಸ್ಮಾರಕ‌ಗಳ  ಸಂರಕ್ಷಣೆಗೆ  ಡಿ.ಸಿ. ಕರೆ

ಜಿಲ್ಲೆಯ ಐತಿಹಾಸಿಕ‌ ಸ್ಮಾರಕ‌ಗಳ ಸಂರಕ್ಷಣೆಗೆ ಡಿ.ಸಿ. ಕರೆ

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಇತ್ತೀಚೆಗೆ ಕಲಬುರಗಿ ನಗರ ಮತ್ತು ಕಮಲಾಪುರ ತಾಲೂಕಿನ ಹೊಳಕುಂದಾ ಐತಿಹಾಸಿಕ‌ ಸ್ಮಾರಕಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಳಿವಿನ ಅಂಚಿನಲ್ಲಿರುವ ಇವುಗಳ ಸಂರಕ್ಷಣೆಗೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.

ಕಲಬುರಗಿ ನಗರದ ಖಲಂದರ್ ಖಾನ್ ಮಸೀದಿ, ಹೀರಾ ಮಸೀದಿ, ಅಲ್ಲಾವುದ್ದೀನ್ ಹಾಸಗಂಗು ಮಸೀದಿ ಮತ್ತು ಚೋರ್ ಗುಂಬಜ್ ಹಾಗೂ ಕಮಲಾಪುರ ತಾಲ್ಲೂಕಿನ ಹೊಳಕುಂದ‌ ವಿಠ್ಠಲ್ ರುಕ್ಮಿಣಿ ದೇವಸ್ಥಾನಗಳಿಗೆ ಭೇಟಿ ನೀಡಿದ ಅವರು, ತಿಥಿಲಾವಸ್ಥೆಯಲ್ಲಿರುವ ಈ ಸ್ಮಾರಕಗಳನ್ನು ಸಂರಕ್ಷಿಸಿದಲ್ಲಿ ಮಾತ್ರ ಮುಂದಿನ ಪೀಳಿಗೆಗೆ ಪರಿಚಯಿಸಲು ಮತ್ತು ಅದರ ಇತಿಹಾಸ ಅರಿಯಲು ಸಾಧ್ಯ ಎಂದರು.

ಸ್ಮಾರಕ ಸಂರಕ್ಷಣೆಗೆ ಕಾರ್ಪೋರೇಟ್ ಕಂಪನಿಗಳ ಸಿ‌.ಎಸ್.ಅರ್ ನಿಧಿ ಪಡೆಯುವ ಚಿಂತನೆ ನಡೆದಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ‌ ಸಭೆಯಲ್ಲಿ ಜಿಲ್ಲೆಯ ಪ್ರವಾಸಿ, ಸ್ಮಾರಕ ಗಳ ಅಭಿವೃದ್ದಿಗೆ ಸಂಪುಟ ಅನುಮೋದನೆ ದೊರೆತಿರುವುದರಿಂದ ಕೂಡಲೆ ಆಡಳಿತಾತ್ಮಕ ಮಂಜೂರಾತಿ ಪಡೆದು ಸ್ಮಾರಕ ಸಂರಕ್ಷಣೆ‌ ಮತ್ತು ಪ್ರವಾಸಿ ಸ್ಥಾನಗಳ ಮೂಲಸೌಕರ್ಯ ಬಲಪಡಿಸಬೇಕೆಂದು ಡಿ.ಸಿ ಸೂಚಿಸಿದರು.

ಕರ್ನಾಟಕ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಸೇರಿದಂತೆ ಇನ್ನಿತರ ಅಧಿಕಾರಿಗಳಿದ್ದರು.