ರಾಷ್ಟ್ರೀಯ ಶಿಕ್ಷಣ ಅಡಿಪಾಯ ಕಲಾಂ ಕೊಡುಗೆ ಅನನ್ಯ: ಡಾ.ಗವಿಸಿದ್ಧಪ್ಪ ಪಾಟೀಲ
ರಾಷ್ಟ್ರೀಯ ಶಿಕ್ಷಣ ಅಡಿಪಾಯ ಕಲಾಂ ಕೊಡುಗೆ ಅನನ್ಯ:ಡಾ.ಗವಿಸಿದ್ಧಪ್ಪ ಪಾಟೀಲ
ಕಲಬುರಗಿ: ಭಾರತದ ದೇಶದ ವರ್ಣಾಶ್ರಮ ಪದ್ಧತಿಯಲ್ಲಿ ಶಿಕ್ಷಣ ಸಮಾನವಾಗಿರಲಿಲ್ಪ,ಬ್ರಿಟಿಷ್ ರಿಂದ ಆದರು ಸ್ವಾತಂತ್ರ್ಯ ಹೊಂದಿದ ನಂತರ ಭಾರತ ದೇಶದ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ ಕೇಂದ್ರ ಶಿಕ್ಷಣ ಸಚಿವ
ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರು ಅಡಿಪಾಯ ಹಾಕಿದ ಶಿಕ್ಷಣ ತಜ್ಞ, ಪಿತಾಮಹ ಎಂದು ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಬಣ್ಣಿಸಿದರು.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ,ಜಿಲ್ಲಾ ಪಂಚಾಯತ, ಅಲ್ಪ ಸಂಖ್ಯಾತರ ಮೋರಾರ್ಜಿ ದೇಸಾಯಿ ಪದವಿ ಪೂರ್ವ ಬಾಲಕಿಯರ ವಸತಿ ಕಾಲೇಜು ಸಾವಳಗಿ ಯಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ
ಮೌಲಾನಾ ಅಬ್ದುಲ್ ಕಲಾಂ ಆಜಾದ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಶಿಕ್ಷಣ ದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮೌಲಾನಾ ಅವರೊಬ್ಬ ಉರ್ದು ಭಾಷಾ ಸಾಹಿತ್ಯದ ವಿದ್ವಾಂಸರು, ಸ್ವಾತಂತ್ರ್ಯ ಹೋರಾಟಗಾರರು,ಪತ್ರಕರ್ತ, ಸಂಪಾದಕರು, ಬಹು ಮುಖ ಚಿಂತಕ, ಹಿಂದು ಮುಸ್ಲಿಂ ಸಾಮರಸ್ಯ ತಂದವರು.ಶಿಕ್ಷಣ ನೀತಿ ರೂಪಿಸಿ ತಂತ್ರಜ್ಞಾನ, ಎಎಸ್ಐಟಿ, ಮೊದಲಾದ ನೀತಿ ಜಾರಿಗೊಳಿಸಿ, ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣ ಯುಜಿಸಿ, ದವರೆಗೂ ಮಾಡಿದ ಸಾಧನೆ ಅಗಾಧವಾದುದು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಜಿಲ್ಲಾ ಅಧಿಕಾರಿ ಸಂಗಮೇಶ ಮಾತನಾಡಿ ಅಂಕಗಳಿಸುವುದೇ ಮುಖ್ಯ ಅಲ್ಲ ಅದರೊಂದಿಗೆ ಸಂಸ್ಕಾರ ಮುಖ್ಯ ಅಂದು ಮಾಡಿದ ಕಲಾಂ ಅವರ ಸಾಧನೆ ಇವತ್ತಿಗೂ ಪ್ರಸ್ತುತವಾಗಿವೆ ಎಂದರು.ಮುಖ್ಯಾತಿಥಿಗಳಾಗಿ
ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ ಕಣಕೊಂಡ ಇವತ್ತು ಈ ವಸತಿ ಕಾಲೇಜು ಉನ್ನತ ವಿಚಾರದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಮಹಾತ್ಮರ ಚಿಂತನ ಹೇಳುತ್ತಿರುವುದು ಸಂತಸ ತಂದಿದೆ ಎಂದರು. ಗ್ರಾ.ಪಂ. ಸದಸ್ಯ ಶಿವಾನಂದ,ವಸತಿ ಶಾಲೆ ಪ್ರಾಂಶುಪಾಲ ಶ್ರೀಮತಿ
ಶಕುಪುನ್ನಿಸಾ,ಪ್ರಾಂಶುಪಾಲ ಆನಂದ ಕುಂಬಾರ ಉಪಸ್ಥಿತಿ ಇದ್ದರು. ಮಹಾಲಕ್ಷ್ಮಿ ಮತ್ತು ರತ್ನಮ್ಮ ಪ್ರಾರ್ಥಿಸಿದರು, ಪ್ರೊ.ಅಶೋಕ ನಿವೃತ್ತಿ ಸ್ವಾಗತಿಸಿದರು ಪ್ರೊ.ಎಸ್.ಎಸ್. ಭಾವಿಕಟ್ಟಿ ನಿರೂಪಿಸಿದರು.
ಜಿಲ್ಲಾ ಮಟ್ಟದ ಭಾಷಣ,ಚರ್ಚೆ,ಪ್ರಬಂಧ,ಚಿತ್ರಕಲೆಗಳ ಸ್ಪರ್ಧೆಯಲ್ಲಿ ಪ್ರಥಮ ಪಡೆದ ಕನ್ನಡ, ಹಿಂದಿ,ಉರ್ದು, ಇಂಗ್ಲಿಷ್ ಭಾಷೆಯ ವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಲಾಯಿತು.ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರುಬ ಪಾಲ್ಗೊಂಡಿದ್ದರು.
