ಇಂದು ಲಕ್ಷ ದೀಪೋತ್ಸವ: ಶರಣಬಸವೇಶ್ವರ ಜಾತ್ರಾ ಮಹೋತ್ಸವದ ವಿಶೇಷ ಆಕರ್ಷಣೆ

ಇಂದು ಲಕ್ಷ ದೀಪೋತ್ಸವ: ಶರಣಬಸವೇಶ್ವರ ಜಾತ್ರಾ ಮಹೋತ್ಸವದ ವಿಶೇಷ ಆಕರ್ಷಣೆ
ಕಲಬುರಗಿ, ಮಾ. 16: ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ಇಂದು (ಮಾ. 16) ಸಂಜೆ 6 ಗಂಟೆಗೆ ಮಹಾದಾಸೋಹಿ ಶರಣಬಸವೇಶ್ವರರ 203ನೇ ಜಾತ್ರಾ ಮಹೋತ್ಸವದ ನಿಮಿತ್ತ ಲಕ್ಷ ದೀಪೋತ್ಸವ ಜರುಗಲಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದ್ದಾರೆ.
ಈ ಐತಿಹಾಸಿಕ ದೀಪೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ಭಕ್ತಿ ಪೂರ್ವಕವಾಗಿ ದೀಪ ಬೆಳಗಿಸಲಿದ್ದಾರೆ. ಜಾತ್ರಾ ಮಹೋತ್ಸವದ ಭಾಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ದೇವಾಲಯದ ಆಡಳಿತ ಮಂಡಳಿಯು ಭಕ್ತರ ಸೌಕರ್ಯ ಹಾಗೂ ಭದ್ರತಾ ವ್ಯವಸ್ಥೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು
ದೀಪಾರಾಧನೆ ಹಾಗೂ ವಿಶೇಷ ಪೂಜೆಗಳು
ಸಂಜೆ 6 ಗಂಟೆಗೆ ಆರಂಭವಾಗುವ ದೀಪಾರಾಧನೆಯನ್ನು ಪಂಡಿತರು ಹಾಗೂ ಧಾರ್ಮಿಕ ಗುರುಗಳು , ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪಾ ಮತ್ತು 9ನೇ ಪೀಠಾಧಿಪತಿಗಳಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಹಾಗೂ ಪೂಜ್ಯ ಡಾ.ಮಾತೋಶ್ರೀ ದಾಕ್ಷಾಯಣಿ ಅಪ್ಪಾ ಅವರು ನೆರವೇರಿಸಲಿದ್ದಾರೆ. ಶಿವಭಕ್ತರು ದೀಪಗಳನ್ನು ಬೆಳಗಿಸಿ, ಶರಣಬಸವೇಶ್ವರರ ತತ್ವ ಮತ್ತು ತತ್ತ್ವದ ಬೆಳಕನ್ನು ಹರಡಲಿದ್ದಾರೆ.
ಜಾತ್ರೆಯ ಮಹತ್ವ
ಪ್ರತಿವರ್ಷ ನಡೆಯುವ ಶರಣಬಸವೇಶ್ವರರ ಜಾತ್ರಾ ಮಹೋತ್ಸವ ಶರಣಬಸವೇಶ್ವರ ತತ್ತ್ವದ ಪ್ರಚಾರ, ದಾಸೋಹ ಪರಂಪರೆಯ ಶ್ರದ್ಧಾ ಸಂಕೇತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಕ್ಷ ದೀಪೋತ್ಸವ ಈ ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.ಎಂದು ಡಾ.ಅಲ್ಲಮಪ್ರಭು ದೇಶಮುಖ್ ಹೇಳಿದರು
ವರದಿ ನಾಗರಾಜ ದಂಡಾವತಿ ವರದಿ ಮಾಡಿದ್ದಾರೆ