ಶಹಾಬಾದ : ಸಂವಿಧಾನ ಗೌರವ ಅಭಿಯಾನದ ಪೂರ್ವಭಾವಿ ಸಭೆ

ಶಹಾಬಾದ : ಸಂವಿಧಾನ ಗೌರವ ಅಭಿಯಾನದ ಪೂರ್ವಭಾವಿ ಸಭೆ

ಶಹಾಬಾದ : ಸಂವಿಧಾನ ಗೌರವ ಅಭಿಯಾನದ ಪೂರ್ವಭಾವಿ ಸಭೆ |

ಕಾಂಗ್ರೆಸ್ ನವರ ಸಂವಿಧಾನದ ಪ್ರೀತಿ ಜನರ ದಾರಿ ತಪ್ಪಿಸುವ ಪ್ರಯತ್ನವಾಗಿದೆ :.. 

ಶಹಾಬಾದ : - ಬಿಜೆಪಿ ವತಿಯಿಂದ ಸಂವಿಧಾನದ ಗೌರವ ಅಭಿಯಾನ ಕಾರ್ಯಕ್ರಮ ಜ. 24 ರಂದು ಕಲಬುರಗಿಯಲ್ಲಿ ಜರುಗುತ್ತಿರುವ ಪ್ರಯುಕ್ತ ಶಹಾಬಾದ ಮಂಡಲ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ಜರುಗಿತು.

ಜಿಲ್ಲಾ ಪ್ರಭಾರಿಗಳಾದ ಧರ್ಮಣ್ಣ ಇಟಗಿ, ಮಾತನಾಡಿ, ಸಂವಿಧಾನ ರಚನೆಯಾಗಿ 75 ವರ್ಷವಾದ ಹಿನ್ನೆಲೆಯಲ್ಲಿ ಬಿಜೆಪಿಯು ಈಗಾಗಲೇ ಸಂವಿಧಾನ ಗೌರವ ಅಭಿಯಾನ ವನ್ನು ಹಮ್ಮಿಕೊಂಡಿದೆ, ದೇಶದ ಎಲ್ಲಾ ರಾಜಕೀಯ ಪಕ್ಷಗಳ ವೋಟ್‌ ಬ್ಯಾಂಕ್‌ ಎಂದೇ ಪರಿಗಣಿತವಾಗಿರುವ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಸಮುದಾಯದ ಜನರನ್ನು ಸಂವಿಧಾನದ ಅರಿವು ಮತ್ತು ಬಿಜೆಪಿ ಪಕ್ಷ ಈ ಸಮುದಾಯದ ಜನರ ಹಾಗೂ ಸಂವಿಧಾನ ರಕ್ಷಣೆಗೆ ಕಟಿಬದ್ಧವಾಗಿದೆ ಎಂದು ಹೇಳಿದರು. 

ಸಭೆಯಲ್ಲಿ ಅಧ್ಯಕ್ಷರಾದ ನಿಂಗಣ್ಣ ಹುಳಗೊಳಕರ ಅಧ್ಯಕ್ಷತೆ ವಹಿಸಿ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಸಂವಿಧಾನವನ್ನು ಪ್ರಚಾರ ಮಾಡುವ ಮೂಲಕ ಸಾರ್ವಜನಿಕರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಖಾರವಾಗಿ ನುಡಿದರು.

ಜಿಲ್ಲಾ ಪ್ರಭಾರಿಗಳಾದ ಎಸ.ಜಿ.ಭಾರತಿ, ಗುರುರಾಜ ಸೂಲಳ್ಳಿ ಸಭೆಯಲ್ಲಿ ಇದ್ದರು. 

ಈ ಸಂಧರ್ಭದಲ್ಲಿ ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ನಾರಾಯಣ ಕಂದಕೂರ, ಅರುಣ ಪಟ್ಟಣಕರ, ಕನಕಪ್ಪ ದಂಡಗುಲಕರ, ಶೀವಕುಮಾರ ಇಂಗಿನಶೆಟ್ಟಿ, ಅಶೋಕ ಜಿಂಗಾಡೆ, ಬಸವರಾಜ ಬಿರಾದಾರ, ದುರ್ಗಪ್ಪ ಪವಾರ, ಯಲ್ಲಪ್ಪ ದಂಡಗುಲಕರ, ಶ್ರೀನೀವಾಸ ನೇದಲಗಿ, ಗೋವಿಂದ ಕುಸಾಳೆ, ಜ್ಯೋತಿ ಶರ್ಮ, ಶಶಿಕಲಾ ಸಜ್ಜನ, ಪದ್ಮಾ ಕಟಗೆ, ನಂದಾ ಗುಡೂರ, ಉಮೇಶ್ ನಿಂಬಾಳಕರ, ಲೋಹಿತ ಮಳಖೇಡ, ಅವಿನಾಶ್ ಸಾಳುಂಕೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ದೇವದಾಸ ಜಾಧವ ಸ್ವಾಗತಿಸಿ, ನಿರೂಪಿಸಿದರು, ದೀನೇಶ ಗೌಳಿ ವಂದಿಸಿದರು.

ಶಹಾಬಾದ:-ಸುದ್ದಿ ನಾಗರಾಜ್ ದಂಡಾವತಿ