ಜಯನಗರ ಮಹಿಳೆಯರಿಂದ ಸಂಭ್ರಮದ ಹೋಳಿ ಹಬ್ಬ ಆಚರಣೆ

ಜಯನಗರ ಮಹಿಳೆಯರಿಂದ ಸಂಭ್ರಮದ ಹೋಳಿ ಹಬ್ಬ ಆಚರಣೆ

ಜಯನಗರ ಮಹಿಳೆಯರಿಂದ ಸಂಭ್ರಮದ ಹೋಳಿ ಹಬ್ಬ ಆಚರಣೆ 

ಕಲಬುರಗಿ:ಜಯನಗರ ಶಿವಮಂದಿರ ಆವರಣದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಮಹಿಳಾ ಘಟಕದ ವತಿಯಿಂದ ಬಣ್ಣ ಎರಚಿ ಸಂಭ್ರಮದ ಹೋಳಿ ಹಬ್ಬ ಆಚರಿಸಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಧುಲಂಡಿ ದಿನವಾದ ಶುಕ್ರವಾರ ಬೆಳಗ್ಗೆ ಟ್ರಸ್ಟ್ ಮಹಿಳಾ ಸದಸ್ಯರು ಹಾಗೂ ಬಡಾವಣೆಯ ಮಹಿಳೆಯರು,ಮಕ್ಕಳು ಹಾಡುಗಳನ್ನು ಹಾಡಿ ಅದಕ್ಕೆ ತಕ್ಕಂತೆ ಕುಣಿದು, ಒಬ್ಬರಿಗೊಬ್ಬರು ವಿವಿಧ ರೀತಿಯ ಬಣ್ಣ ಹಚ್ಚಿ ಬೊಬ್ಬೆ ಹೊಡೆಯುವ ಮೂಲಕ ಅತಿ ವಿಜೃಂಭಣೆಯಿಂದ ಆಚರಿಸಿದರು.ಇದರಲ್ಲಿ ಮಕ್ಕಳು ಭಾಗವಹಿಸಿ ಉಲ್ಲಾಸದಿಂದ ಆಡಿ‌ದ್ದು ಅವರ ಖುಷಿಗೆ ಪಾರವೇ ಇರಲಿಲ್ಲ.ನಂತರ ತಂಪು ಪಾನೀಯ ಸೇವನೆ ಮಾಡಿದರು.

ಟ್ರಸ್ಟ್ ಮಹಿಳಾ ಅಧ್ಯೆಕ್ಷೆ ಶೈಲಜಾ ವಾಲಿ, ಪ್ರಮುಖರಾದ ಅನುರಾಧ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ,ಪದಾಧಿಕಾರಿಗಳಾದ ಸುಷ್ಮಾ ಮಾಗಿ, ವಿಜಯಾ ದಂಡೋತಿ, ಲತಾ ತುಪ್ಪದ,ಸುರೇಖಾ ಬಾಲಕೊಂದೆ, ಪಾರ್ವತಿ ರಠಕಲ,ಶಕುಂತಲಾ ಮರಡಿ, ಗೀತಾ ಸಿರಗಾಪೂರ, ಅಶ್ವಿನಿ ಪಾಟೀಲ್, ದೀಪಾ ಪಾಟೀಲ್, ಪಾರ್ವತಿ ಶೆಟ್ಟಿ, ಸುಶೀಲಾ ಬೋಮ್ಮಣ,ಗಂಗಾ ಕುಲ್ಕರ್ಣಿ, ಶೋಭಾ ಮಾಲಿಬೀರಾದಾರ, ಗೀತಾ ಹುಡುಗಿ, ಸರಸ್ವತಿ ಬಾಲಕೊಂದೆ ಸೇರಿದಂತೆ ಅನೇಕ ಮಹಿಳೆಯರು, ಮಕ್ಕಳು ಧುಲಂಡಿಯಲ್ಲಿ ಪಾಲ್ಗೊಂಡಿದ್ದರು.