ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸೆ.28.ರಂದು

ವಿವಿಧ ಕ್ಷೇತ್ರದ ಸಾಧಕರಿಗೆ  ಪ್ರಶಸ್ತಿ ಪ್ರದಾನ ಸೆ.28.ರಂದು

ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸೆ.28.ರಂದು

ಶಿಕ್ಷಕರ ದಿನಾಚರಣೆಯ ಅಂಗವಾಗಿ ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಕಲಾ ಸಂಘ (ರಿ) ರಾಜಾಪೂರ ಕಲಬುರಗಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಿನಾಂಕ 28-09-2025 ರವಿವಾರ ದಂದು ಕಲಬುರಗಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಕ್ಕದಲ್ಲಿರುವ ರಂಗಾಯಣ ಸಭಾ ಭವನದಲ್ಲಿ ಶಿಕ್ಷಕರ ದಿನಾಚರಣೆ,ನಾಡಿನ ವಿವಿಧ ಜಿಲ್ಲೆಗಳ ಸಾಧಕ ಶಿಕ್ಷಕರಿಗೆ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ,ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ ವಿಶೇಷ ಸನ್ಮಾನ ಹಾಗೂ ಹಾಸ್ಯ, ಸಂಗೀತ, ಮತ್ತು ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  

ಡಾ. ದಯಾನಂದ ಎಸ್ ಬಸವಪಟ್ಟಣ ಕಲಬುರ್ಗಿ, ಡಾ. ವಿಜಯಕುಮಾರ ಶರಣಪ್ಪ ಕಲಬುರ್ಗಿ, ಡಾ. ನಾಗರತ್ನ ಎಸ್ ಕಲಬುರ್ಗಿ, ಮಹಾನಂದ. ವಿ.ಗಡ್ಡದ್ ಕಲಬುರ್ಗಿ, ಶ್ರೀದೇವಿ ಎಸ್ ಪಾಟೀಲ ಕಲಬುರ್ಗಿ, ಸಂಗೀತ.ಎ.ಉಪ್ಪಿನ ಕಲಬುರ್ಗಿ, ಶಹಾನಾ ಬೇಗಂ ರಾಯಚೂರು, ಕುಮಾರಿ ವಿದ್ಯಾ ಎಲ್ ಅಯ್ಯಾಳಕರ ಕಲಬುರ್ಗಿ, ಸುರೇಶ್ ಎಸ್ ಮಾಳಗೆ ಯಾದಗಿರಿ, ಕುಮಾರಿ ವಿದ್ಯಾಶ್ರೀ ಹೆಚ್ಚು ರಾಠೋಡ ವಿಜಯಪೂರ, ಮಾಣಿಕಪ್ಪ ಹೆಚ್ ಚಿಂಚೋಳಿ ಬೀದರ, ಪರಶುರಾಮ್ ಡಿ ಬಿರಾದಾರ ಕಲಬುರ್ಗಿ, ಭೀರು ಎಸ್ ಪೂಜಾರಿ ವಿಜಯಪೂರ ಇವರಿಗೆ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಲಾಗುವುದು. 

 ಕಿರಣಕುಮಾರ ಕಲಬುರ್ಗಿ, ಗುಂಡಪ್ಪ ಎನ್ ಚಿಂಚೋಳಿ, ಲಾಲಪ್ಪ ಎಸ್ ಜ್ಯೋತಿ ಚಿಂಚೋಳಿ, ಶಿವಪ್ರಕಾಶ್ ಎಂ ಕಟ್ಟಿಮನಿ ಚಿಂಚೋಳಿ, ಸುರೇಶ ಎಂ ತೇಗಲತಿಪ್ಪಿ ಕಾಳಗಿ, ಸಂತೋಷ ಹೊಸಳ್ಳಿ ಕಾಳಗಿ ಇವರಿಗೆ 

 ಸಮಾಜ ಸೇವ ರತ್ನ ಪ್ರಶಸ್ತಿ ನೀಡಲಾಗುವುದು. ಕುಮಾರಿ. ಸಾವಿತ್ರಾ ಹುಲೇಪ್ಪ ಗಾರಂಪಳ್ಳಿ ಚಿಂಚೋಳಿ ಇವರಿಗೆ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ವಿತರಿಸಲಾಗುವುದು. ಎಂದು ಸಂಘದ ಅಧ್ಯಕ್ಷರಾದ ಪ್ರೊ. ರಮೇಶ.ಬಿ.ಯಾಳಗಿ, ಕಾರ್ಯದರ್ಶಿಗಳಾದ ಯಲ್ಲಾಲಿಂಗ ದಂಡಿನ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.