ಜನ ವಿರೋಧಿ ಬಜೆಟ್.

ಜನ ವಿರೋಧಿ ಬಜೆಟ್.

ಜನ ವಿರೋಧಿ ಬಜೆಟ್. 

ಶಹಪುರ : ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ಬಾರಿ ಮಂಡಿಸಿದ ಬಜೆಟ್ ಜನ ವಿರೋಧಿ ಬಜೆಟ್,ಅಲ್ಲದೆ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಸವರಿದಂತೆ ಆಗಿದೆ ಎಂದು ಬಿಜೆಪಿ ಯುವ ಮುಖಂಡ ತಿರುಪತಿ ಹತ್ತಿಕಟಗಿ ಹೇಳಿದರು 

ಕಳೆದ ವರ್ಷ ಘೋಷಿಸಿದ ಫ್ರೀ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಹೆಣಗಾಡುತ್ತಿದೆ,ಈ ಬಾರಿ ಕಲ್ಯಾಣ ಕರ್ನಾಟಕಕ್ಕೆ ಬಜೆಟ್ ಘೋಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿ ಘೋಷಿಸಿದ ಬಜೆಟ್ ನಿಂದ ಸಾಮಾನ್ಯ ವರ್ಗದವರ ಹಾಗೂ ರೈತರ ಮೇಲೆ ತುಂಬಾ ಹೊರೆಯಾಗಲಿದೆ,ಒಟ್ಟಾರೆ ಹೇಳಬೇಕೆಂದರೆ ರಾಜ್ಯದ ಹಣಕಾಸು ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ನುಡಿದರು.