ಕೇಂದ್ರಗೃಹ ಸಚಿವ ಅಮಿತ ಷಾ ಹೇಳಿಕೆಗೆ : ಪ್ರವೀಣ ಮೊದಲೆ ಖಂಡನೆ

ಕೇಂದ್ರಗೃಹ ಸಚಿವ ಅಮಿತ ಷಾ ಹೇಳಿಕೆಗೆ : ಪ್ರವೀಣ ಮೊದಲೆ ಖಂಡನೆ
ಆಳಂದ: ಅಮಿತ ಷಾ ರವರು ಸಂಸತ್ತಿನಲ್ಲಿ ಅಂಬೇಡ್ಕರ ಅಂಬೇಡ್ಕರ ಅಂಬೇಡ್ಕರ ಅನ್ನುವುದು ಫ್ಯಾಶನ ಆಗಿದೆ ಅವರ ಹೆಸರನ್ನು ಬಳಸಿದ್ದಷ್ಟು ದೇವರ ಹೆಸರನ್ನು ಬಳಸಿದರೆ ಏಳು ಜನ್ಮದಲ್ಲಿ ಪುಣ್ಯ ಸಿಗುತಿತ್ತು ಎಂದು ಹೇಳಿದ್ದಾರೆ ಇದು ನೋವಿನ ವಿಷಯ ಡಾ.ಬಾಬಾಸಾಹೇಬ ಅಂಬೇಡ್ಕರ ಸಂವಿಧಾನ ರಚಿಸದಿದ್ದರೆ ನೀವು ಗುಜರಿ ವ್ಯಾಪಾರಿಗಳಾಗಿ ಕೆಲಸ ಮಾಡುತ್ತಿದ್ದಿರಿ ಮೋದಿ ಚಹಾ ಮಾರ್ತಿದ್ದರು ನೀವು ಬಾಬಾಸಾಹೇಬ್ ಅಂಬೇಡ್ಕರ ಸಂವಿಧಾನದ ಮೂಲಕ ರಾಜಕೀಯ ಲಾಭ ಪಡೆದು ಮಂತ್ರಿಗಳಾಗಿ ಆಯ್ಕೆ ಆಗ್ತಿರಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡ್ತಿರಿ ಈಗ ರೀತಿ ಹೇಳಿಕೆ ನೀಡ್ತಿರಿ ಇದು ನಿಮಗೆ ಶೋಭೆ ತರುವುದಿಲ್ಲ ಈ ನಿಮ್ಮ ಹೇಳಿಕೆಯು ನೀವು ಸಂವಿಧಾನ ವಿರೋಧಿ ಎಂದು ತಿಳಿಸುತ್ತದೆ
ನಿಮ್ಮ ಹೇಳಿಕೆಯಿಂದ ಜನರ ಮನಸಿಗೆ ತುಂಬಾ ನೋವಾಗಿದ್ದು ನೀವು ಕ್ಷಮೆ ಕೇಳಬೇಕು ಮತ್ತು ರಾಜಿನಾಮೆ ನೀಡಬೇಕು ಡಾ.ಬಾಬಾಸಾಹೇಬ ಅಂಬೇಡ್ಕರ ಮತ್ತು ಸಂವಿಧಾನ ಬಗ್ಗೆ ಹಗುರವಾಗಿ ಮಾತಾಡಿದ್ರೆ ನಮ್ಮ ಸಮುದಾಯ ಉಗ್ರವಾದ ಹೋರಾಟ ನಡೆಸಿ ಮುಂಬರುವ ದಿನಗಳಲ್ಲಿ ನಿಮಗೆ ಉತ್ತರ ನೀಡುತ್ತೇವೆ ಮತ್ತು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಯುತ್ ಫೆಡರೇಶನ ಆಳಂದ ತಾಲ್ಲೂಕಿನ ಅಧ್ಯಕ್ಷ ಪ್ರವೀಣ ಮೊದಲೆ ಭಾವನಾತ್ಮಕವಾಗಿ ನುಡಿದರು.
ವರದಿಗಾರರು ಡಾ ಅವಿನಾಶ ದೇವನೂರ