ತೋಗರಿ ಬೆಳೆಗಾರ ರೈತರು ಕುರಿಗಳಲ್ಲ: ರೈತರ ಹಿತ ಕಾಪಾಡುವಲ್ಲಿ ವಿಫಲಾಗಿರುವ ಕಲ್ಯಾಣ ಕರ್ನಾಟಕದ ಸಚಿವರು ಸರ್ಕಾರದಲ್ಲಿ ಕುರಿಗಳು: ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ

ತೋಗರಿ ಬೆಳೆಗಾರ ರೈತರು ಕುರಿಗಳಲ್ಲ: ರೈತರ ಹಿತ ಕಾಪಾಡುವಲ್ಲಿ ವಿಫಲಾಗಿರುವ ಕಲ್ಯಾಣ ಕರ್ನಾಟಕದ ಸಚಿವರು ಸರ್ಕಾರದಲ್ಲಿ ಕುರಿಗಳು: ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ
ಕಲಬುರಗಿ: ಏಷಿಯಾದಲ್ಲಿಯೇ ಅತೀ ಹೆಚ್ಚು ತೋಗರಿಯನ್ನು ಕಲಬುರಗಿ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆಳೆಯಲಾಗುತ್ತಿದೆ. ವಿದೇಶಗಳಿಗೆ ರಫ್ತಾಗುವ ತೋಗರಿಗೆ ಸೂಕ್ತ ಬೆಂಬಲ ಬೆಲೆ ಇಲ್ಲ ತೊಗರಿಯನ್ನು ಬೆಳೆಯುವ ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲಾಗಿದೆ ಎಂದು ಬಿಜೆಪಿಯ ಓಬಿಸಿ ಮೋರ್ಚಾ ಕಲಬರಗಿ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕುರಿಗಳೊಂದಿಗೆ ಪ್ರತಿಭಟನೆ ನಡೆಸಿ ತೊಗರಿ ಬೆಳೆಗಾರರ ಹಿತ ಕಾಪಾಡುವುದರಲ್ಲಿ ವಿಫಲಾಗಿರುವ ಕಲ್ಯಾಣ ಕರ್ನಾಟಕ ಭಾಗದ ಸಚಿವರು ಸರ್ಕಾರದಲ್ಲಿ ಕುರಿಗಳಂತೆ ಆಗಿದ್ದಾರೆ. ಸದಾ ತಮ್ಮ ಹಿತವನ್ನು ಕಾಪಾಡಿಕೊಳ್ಳುವುದಕ್ಕೆ ಹೆಣಗಾಡುತ್ತಿರುವ ಸಚಿವರು, ದೇಶಕ್ಕೆ ಅನ್ನ ನೀಡುವ ರೈತರ ಹಾಗೂ ವಿಶೇಷವಾಗಿ ತೋಗರಿ ಬೆಳೆಗಾರರ ಕುರಿತು ಯಾವುದೇ ಚಿಂತನೆ ಇಲ್ಲ ಎಂದು ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು.
ಏಷಿಯಾದ ದೇಶಗಳ ಅತೀ ಹೆಚ್ಚು ತೋಗರಿಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆಳೆಯಲಾಗುತ್ತಿದೆ. ಅತೀವೃಷ್ಠಿಯಿಂದಾಗಿ ತೋಗರಿಗೆ ನೆಟೆ ರೋಗ ಬಂದು ತೋಗರಿ ಬೆಳೆ ಹಾಳಾಗಿರುವುದರಿಂದ ಅನೇಕ ರೈತರು ಕಂಗಾಲಾಗಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ರೈತರಿಗೆ ಈ ಬಾರಿ ಇಳುವರಿ ಬಾರದೇ ಇರುವುದರಿಂದಾಗಿ ಆತಂಕದಲ್ಲಿದ್ದಾರೆ. ಅನೇಕ ರೈತರು ರೈತ ಸಂಘಟನೆಗಳು ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಭಾಗದ ಸಚಿವರಿಗೆ ಕಿವಿ ಮತ್ತು ಕಣ್ಣುಗಳು ಇಲ್ಲದಂತಾಗಿದೆ.
ಸದಾ ಸರ್ಕಾರ ಉಳಿಸಿಕೊಳ್ಳುವ ತವಕದಲ್ಲಿರುವ ಸಚಿವರನ್ನು ಈ ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡುತ್ತಾ ಆದಷ್ಟು ಬೇಗ ಅನ್ನದಾತರಾದ ರೈತರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಅನ್ನದಾರ ಬೆಂಬಲಕ್ಕೆ ನಿಂತು ಉಗ್ರವಾದ ಹೋರಾಟಕ್ಕೆ ಇಳಿಬೇಕಾಗುತ್ತದೆ ಎಂದು ದೇವಿಂದ್ರ ದೇಸಾಯಿ ಕಲ್ಲೂರ ಹೇಳಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಅವ್ವಣ್ಣ ಮ್ಯಾಕೆರಿ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶರಣಗೌಡ ಐಕುರ ಲೋಕೇಶ್ ಶೀಲವಂತ ರಾಕೇಶ ಮಾಡಿಯಾಳ ಬಸವರಾಜ ಸಂಕಾಲಿ ನಾಗರಾಜ ವಸ್ತಾರಿ ಸೇರಿದಂತೆ ಅನೇಕರಿದ್ದರು.