|ಸತ್ಯಾಗ್ರಹ ನಿರತ ಬೌದ್ಧಬಿಕ್ಕುಗಳ ಮೇಲಿನ ದೌರ್ಜನ್ಯ ಖಂಡಿಸಿ ಧರಣಿ ಸತ್ಯಾಗ್ರಹ|

|ಸತ್ಯಾಗ್ರಹ ನಿರತ ಬೌದ್ಧಬಿಕ್ಕುಗಳ ಮೇಲಿನ ದೌರ್ಜನ್ಯ ಖಂಡಿಸಿ ಧರಣಿ ಸತ್ಯಾಗ್ರಹ|

|ಸತ್ಯಾಗ್ರಹ ನಿರತ ಬೌದ್ಧಬಿಕ್ಕುಗಳ ಮೇಲಿನ ದೌರ್ಜನ್ಯ ಖಂಡಿಸಿ ಧರಣಿ ಸತ್ಯಾಗ್ರಹ|

ಬುದ್ದ ಗಯಾ ಬೌದ್ಧರಿಗೆ ಬಿಟ್ಟುಕೊಡಿ : ಟೆಂಪಲ್ ಆಕ್ಟ್ 1949 ರದ್ದುಗೊಳಿಸಿ :.. 

ಶಹಾಬಾದ : - ಬೋದ್ ಗಯಾ ಟೆಂಪಲ್ ಆಕ್ಟ್ 1949 ರದ್ದುಗೊಳಿಸಿ, ಮಹಾಬೋಧಿ ಮಹಾ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡಬೇಕು ಎಂದು ಬೌದ್ಧ ಮಹಾಸಭಾದ ಸುರೇಶ ಮೆಂಗನ ಹೇಳಿದರು. 

ಅವರು ಮಹಾಬೋದಿ ಮಹಾವಿಹಾರ ಮುಕ್ತಿ ಆಂದೋಲನದ ಹೋರಾಟಕ್ಕೆ ಬೆಂಬಲಿಸಿ ಬೌದ್ಧ ಮಹಾಸಭಾ ಶಹಾಬಾದ ವತಿಯಿಂದ ಒಂದು ದಿನದ ಸಾಂಕೇತಿಕ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು. 

ಫೆ. 12ರಿಂದ ಪ್ರಾರಂಭವಾದ ಮಹಾಬೋಧಿ ಮಹಾವಿಹಾರದ ಮುಕ್ತಿ ಆಂದೋಲನದ ಅನಿರ್ಧಿಷ್ಟಾವಧಿ ಸರದಿ ಆಮರಣಾಂತ ಉಪವಾಸ ಸತ್ಯಾಗ್ರಹ ಶಾಂತಿಯುತವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಹೋರಾಟವನ್ನು ವಿಫಲಗೊಳಿಸಲು ಸಂಘಪರಿವಾರ ಹಲವು ಕುತಂತ್ರಗಳನ್ನು ಮಾಡುತ್ತಿದೆ, ಮಹಾಬೋಧಿ ಮಹಾವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡುವವರೆಗೆ ಹೋರಾಟ ನಿಲ್ಲದು ಎಂದರು.

ದಸಂಸ ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಬಂತೇಜಿಗಳ ಮೇಲೆ ಪ್ರಾಣಿಗಳಿಗಿಂತ ಕೀಳಾಗಿ ದೌರ್ಜನ್ಯ ಎಸಗಿದ್ದು, ನಿಮ್ಮ ಆರೋಗ್ಯ ಸರಿ ಇಲ್ಲ ಎಂದು ಒತ್ತಾಯ ಪೂರ್ವಕವಾಗಿ ಕೆಲವರನ್ನು ಅಂಬುಲೆನ್ಸ್‌ ಗೆ ಬಲವಂತವಾಗಿ ಹಾಕಿಕೊಂಡು, ಬಂತೇಜಿಗಳ ಆರೋಗ್ಯ ನೆಪ ಹೇಳಿದ ಅಧಿಕಾರಿಗಳು ಬಂತೇಜಿಗಳನ್ನು ಕನಿಷ್ಠ ಆಸ್ಪತ್ರೆಗೆ ದಾಖಲು ಸಹ ಮಾಡದೆ ಅಮಾನವೀಯವಾಗಿ ವರ್ತನೆ ಮಾಡಿದ್ದಾರೆ, ಇನ್ನೂ ಕೆಲವರಿಗೆ ಇಲ್ಲಿ ಸತ್ಯಾಗ್ರಹ ಕೂಡಲು ನಿಮಗೆ ಪರವಾನಗಿ ಇಲ್ಲ ಎಂದು ಪೋಲಿಸ್‌ ವ್ಯಾನ್ ನಲ್ಲಿ ಎತ್ತಿಹಾಕಿ ಹಿಂಸೆ ನೀಡಿದ್ದು, ಮಹಿಳಾ ಬಿಕ್ಕುಣಿಗಳ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಹಾಪೂರಿನ ಬೌದ್ಧ ಉಪಾಸಕ ದೇವೇಂದ್ರ ಹೆಗಡೆ ಮಾತನಾಡಿದರು. 

ಕೃತ್ಯವನ್ನು ಖಂಡಿಸಿ ತಾಲ್ಲೂಕ ತಹಶೀಲ್ದಾರ್ ರಾದ ಜಗದೀಶ ಚೌರ ರವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. 

ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಕೃಷ್ಣಪ್ಪ ಕರಣಿಕ, ಶಿವಶಾಲ ಪಟ್ಟಣ, ಭರತ ಧನ್ನಾ, ಶಂಕರ ಜಾನಾ, ಬಸವರಾಜ ಮಯೂರ, ಶಂಕರ ಅಳೋಳ್ಳಿ, ಶರಣು ಪಗಲಾಪುರ, ರಾಜೇಶ ಯನಗುಂಟಿ, ಕಾಶಿನಾಥ ಜೋಗಿ, ಮಹಾದೇವ ತರನಳ್ಳಿ, ಸತೀಶ ಕೋಬಾಳ, ಮಲ್ಲಿಕಾರ್ಜುನ ಕಟ್ಟಿಮನಿ, ನಾಗೇಂದ್ರ ಹುಗ್ಗಿ, ಅಲ್ಲಮ ಪ್ರಭು ಮಸ್ಕಿ, ಭೀಮಯ್ಯ ಗುತ್ತೆದಾರ, ನರಸಿಂಹಲು ರಾಯಚೂರ, ರಾಜು ಜಂಬಗಿ, ಸ್ನೇಹಿಲ ಜಾಯಿ, ಮನೋಹರ ಕೊಳೂರ, ರಾಕೇಶ ಜಾಯಿ, ಶ್ರೀಧರ ಕೊಲ್ಲೂರ, ನಾಗಾರ್ಜುನ ಪಂಚಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಬೌದ್ಧ ಉಪಾಸಕರು ಉಪಸ್ಥಿತರಿದ್ದರು. 

ಕೋಟ ಮಾಡಿ :..ಬಿಹಾರದ ಬೌದ್ಧಗಯ ಬೌದ್ಧರಿಗೆ ಕೊಡಬೇಕು ಎಂಬ 1949ರ ಕಾನೂನು ತಿದ್ದುಪಡಿಯನ್ನು ಮಾಡಬೇಕು, ನಮ್ಮ ಮನವಿಗೆ ಸ್ಪಂದಿಸಿ ಬೌದ್ದರಿಗೆ ಬಿಟ್ಟು ಕೊಡದಿದ್ದರೆ ನಿರಂತರವಾಗಿ ಉಗ್ರವಾದ ಹೋರಾಟ ಮಾಡಲಾಗುವುದು :..ಕೃಷ್ಣಪ್ಪ ಕರಣಿಕ ಮುಖಂಡ ಕರಾದಸಂಸ. ಶಹಾಬಾದ. 

ಕೋಟ ಮಾಡಿ :..ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದೇಶಗಳಲ್ಲಿ ನಮಗೆ ಬುದ್ಧ ಬೇಕು ಮತ್ತು ಶಾಂತಿ ಬೇಕು ಯುದ್ದ ಬೇಡ ಎಂದು ಘೋಷಣೆ ಮಾಡುತ್ತಾರೆ ಆದರೆ ಭಾರತಕ್ಕೆ ಮರಳಿ ಬಂದಾಗ ಬುದ್ಧನ ಅನುವಾಯಿಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅನುವಾಯಿಗಳಿಗೆ ನೋವುಂಟು ಮಾಡುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ :..ದೇವೇಂದ್ರ ಹೆಗಡೆ, ಬೌದ್ಧ ಉಪಾಸಕರು ಶಹಾಪುರ.